ಸುಳ್ಳು ಸುದ್ದಿ ಹಬ್ಬಿದ ಮುಖ್ಯ ಶಿಕ್ಷಕಕನ ವಿರುದ್ಧ ದೂರು

By Kannadaprabha NewsFirst Published Apr 7, 2020, 8:46 AM IST
Highlights

ಹಳೆಯ ವಿಡಿಯೋ ಅಪ್ ಮಾಡಿ ಮುಸ್ಲಿಂಮರು ನೆರೆದ ನಿಜಾಮುದ್ದೀನ ಕೇಂದ್ರದಲ್ಲಿ ಹರಡುತ್ತಿರುವದು ವೈರಸ್‌ ಜಿಹಾದ್‌ ಆದರೆ ಇವರು ಹರಡುತ್ತಿರುವದು ಪ್ರಸಾದವೇ? ನರಸತ್ತ ಜಿಲ್ಲಾಡಳಿತ ಮತ್ತು ಮಾಧ್ಯಮವೇನು ಮಾಡುತ್ತಿದೆ ನಿಂದಿಸಿದ್ದ ಮುಖ್ಯ ಶಿಕ್ಷಕನನ್ನು ಬಂಧಿಸಲಾಗಿದೆ.

ಉತ್ತರ ಕನ್ನಡ(ಏ.07): ಎಂದೋ ಆಚರಣೆಯಾಗಿದ್ದ ರಾಮನವಮಿ ಉತ್ಸವದ ವಿಡಿಯೋ ವಾಟ್ಸಪ್‌ ಗ್ರೂಪ್‌ಗಳಿಗೆ ಶೇರ್‌ ಮಾಡಿ ಇವರಿಗೆ ಕೊರೋನಾ ವೈರಸ್‌ ಹರಡೋದಿಲ್ಲವೆ? ಜಿಲ್ಲಾಡಳಿತ ಮತ್ತು ಮಾಧ್ಯಮಗಳು ಏನು ಮಾಡುತ್ತಿದೆ ಎಂದು ಹೀಯಾಳಿಸಿದ ಅಂಕೋಲಾದ ಬೊಬ್ರವಾಡ ಮೂಲದ ಕಾರವಾರದ ನೆಗೆಕೊವೆಯ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಅಕ್ತರ ಸೈಯ್ಯದ ಅವರ ವಿರುದ್ಧ ಅಂಕೋಲಾ ಪೊಲೀಸರು ಶಾಂತತಾ ಭಂಗ ಪ್ರಕರಣ ದಾಖಲಿಸಿದ್ದಾರೆ.

ಏ. 4ರಂದು ಅಂಕೋಲಾದ ಬೊಬ್ರವಾಡ ಬೀಟ್‌ ಪೊಲೀಸ್‌ ಗ್ರೂಪ್‌ಗೆ ಈ ವಿಡಿಯೋ ತುಣುಕು ಅಪಲೋಡ್‌ ಮಾಡಿ, ಮುಸ್ಲಿಂಮರು ನೆರೆದ ನಿಜಾಮುದ್ದೀನ ಕೇಂದ್ರದಲ್ಲಿ ಹರಡುತ್ತಿರುವದು ವೈರಸ್‌ ಜಿಹಾದ್‌ ಆದರೆ ಇವರು ಹರಡುತ್ತಿರುವದು ಪ್ರಸಾದವೇ? ನರಸತ್ತ ಜಿಲ್ಲಾಡಳಿತ ಮತ್ತು ಮಾಧ್ಯಮವೇನು ಮಾಡುತ್ತಿದೆ ನಿಂದಿಸಿದ್ದ.

ಬಿಜೆಪಿ ಕಾರ್ಯಕರ್ತರಿಗೆ 5 ಟಾಸ್ಕ್‌ ನೀಡಿದ ಮೋದಿ!

ಈ ಶಿಕ್ಷಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಂಕೋಲಾ ಪತ್ರಕರ್ತರ ಸಂಘ ದೂರು ನೀಡಿತ್ತು. ಈ ದೂರಿನನ್ವಯ ಅಂಕೋಲಾ ಪೊಲೀಸರು ಶಿಕ್ಷಕನ ವಿರುದ್ಧ ಶಾಂತತಾ ಭಂಗ ಪ್ರಕರಣ ದಾಖಲಿಸಿದ್ದಾರೆ.

ಈ ಮಧ್ಯೆ ಅಂಕೋಲಾ ತಹಸೀಲ್ದಾರ ಮೇಘರಾಜ್‌ ನಾಯ್ಕ, ಶಾಂತತಾ ಭಂಗಕ್ಕೆ ಪ್ರಯತ್ನಿಸಿದ ಅಕ್ತರ ಸೈಯ್ಯದ ಅವರನ್ನು ಏ. 14ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯಾರು ಸುಳ್ಳು ಸುದ್ದಿ ರವಾನಿ​ಸು​ತ್ತಾರೋ, ಅಂತವರಿಗೆ ಈ ಪ್ರಕರಣ ಎಚ್ಚರಿಕೆಯ ​ಗಂಟೆಯಾಗಿದೆ ಎಂದು ತಿಳಿಸಿದ್ದಾರೆ.

click me!