ಕೊರೊನಾ ವೈರಸ್ ಹೆಚ್ಚಿನ ಪ್ರಮಾಣದಲ್ಲಿ ಹರಡಲು ದೆಹಲಿಯ ತಬ್ಲಿಘಿಗಳೇ ಕಾರಣ ಎಂಬ ಸುದ್ದಿ ವ್ಯಾಪಕವಾಗುತ್ತಿರುವ ಬೆನ್ನಲ್ಲೇ, ದೆಹಲಿಯ ನಿಜಾಮುದ್ದಿನ್ ತಬ್ಲಿಘಿ ಜಮಾತ್ ಮರ್ಕಜ್‌ದಿಂದ ಬಂದ ಮೂವರು ಅಪರಿಚಿತರು ತಾಲೂಕಿನ ಸುಳೇಭಾವಿ ಗ್ರಾಮದ ಗುಡ್ಡದಲ್ಲಿ ಅಡಗಿ ಕುಳಿತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು.
ಬೆಳಗಾವಿ(ಏ.07): ಕೊರೊನಾ ವೈರಸ್ ಹೆಚ್ಚಿನ ಪ್ರಮಾಣದಲ್ಲಿ ಹರಡಲು ದೆಹಲಿಯ ತಬ್ಲಿಘಿಗಳೇ ಕಾರಣ ಎಂಬ ಸುದ್ದಿ ವ್ಯಾಪಕವಾಗುತ್ತಿರುವ ಬೆನ್ನಲ್ಲೇ, ದೆಹಲಿಯ ನಿಜಾಮುದ್ದಿನ್ ತಬ್ಲಿಘಿ ಜಮಾತ್ ಮರ್ಕಜ್‌ದಿಂದ ಬಂದ ಮೂವರು ಅಪರಿಚಿತರು ತಾಲೂಕಿನ ಸುಳೇಭಾವಿ ಗ್ರಾಮದ ಗುಡ್ಡದಲ್ಲಿ ಅಡಗಿ ಕುಳಿತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು.
ಎಂಬ ಸುದ್ದಿ ಹರಡುತ್ತಿದ್ದಂತೆ ಗ್ರಾಮದ ಯುವಕರ ಗುಂಪು ಸೋಮವಾರ ಗುಡ್ಡಕ್ಕೆ ಹೊಗುತ್ತಿದ್ದಂತೆ ಬ್ಯಾಗ್ ಬಿಟ್ಟು ಅಪರಿಚಿತರು ಪರಾರಿಯಾಗಿದ್ದಾರೆ. ಈ ಘಟನೆಯಿಂದ ಸುಳೆಭಾವಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮಣೆ ಮಾಡಿದೆ.
undefined
ನಾಲ್ಕು ಜನ ಕೊರೋನಾ ಸೋಂಕಿತರು ಗುಣಮುಖ, ಹೊಸ ಪ್ರಕರಣವಿಲ್ಲ
ಕಳೆದ ಕೆಲವು ದಿನಗಳಿಂದ ಗ್ರಾಮದ ಗೌಪ್ಯ ಸ್ಥಳಗಳಲ್ಲಿ ಕೆಲವರು ಅಡಗಿ ಕುಳಿತಿದ್ದಾರೆ ಎಂಬ ಮಾತು ಕೇಳಿ ಬರುತ್ತಿವ ಹಿನ್ನೆಲೆಯಲ್ಲಿ ಗ್ರಾಮದ ಗುಡ್ಡದ ಮೇಲೆ ಯುವಕರು ಹೋದಾಗ ಮೂರು ಜನ ತಮ್ಮ ಕಡೆ ಇದ್ದ ಬ್ಯಾಗ್ ಬಿಟ್ಟು ಓಡಿ ಹೋಗಿದ್ದಾರೆ. ಗುಡ್ಡದಲ್ಲಿ ಕೆಲ ಹೊತ್ತು ಹುಡುಕಾಡಿದರೂ ಅಲ್ಲಿ ಯಾರೂ ಇರಲಿಲ್ಲ.
ಕಾರ್ಕಳದ ವ್ಯಕ್ತಿ ಮುಂಬೈಯಲ್ಲಿ ಕೊರೋನಕ್ಕೆ ಬಲಿ
ಸ್ಥಳದಲ್ಲಿ ಸಿಕ್ಕಿದ ಬ್ಯಾಗನ್ನು ಪರಿಶೀಲಿಸಿದಾಗ ಬ್ಯಾಗನಲ್ಲಿ ಸಾಬೂನು, ಪೆಸ್ಟ್ ಸೇರಿದಂತೆ ಕೆಲವು ಜೀವನಾವಶ್ಯಕ ವಸ್ತುಗಳು ಹಾಗೂ ಬಟ್ಟೆಗಳು ಇದ್ದವು. ಈ ಬ್ಯಾಗ್ ಅನ್ನು ಪೊಲೀಸರು ಪರಿಶೀಲನೆ ನಡೆಸಿ ನಂತರ ಸುಟ್ಟು ಹಾಕಿದ್ದಾರೆ.