ಪುತ್ತೂರು: ಅನುಮತಿ ಇಲ್ಲದೆ ವಿಜಯೋತ್ಸವ, ಪುತ್ತಿಲ ಪರಿವಾರ ವಿರುದ್ಧ ಕೇಸ್‌

By Kannadaprabha News  |  First Published Jul 28, 2023, 1:53 PM IST

ಫಲಿತಾಂಶ ಪ್ರಕಟಗೊಂಡ ಬಳಿಕ ಚುನಾವಣೆಯ ಎಣಿಕೆ ನಡೆದ ಪುತ್ತೂರಿನ ತಾಲೂಕು ಆಡಳಿತ ಸೌಧದ ಬಳಿಯಿಂದ ಪುತ್ತಿಲ ಪರಿವಾರದ ಕಚೇರಿ ತನಕ ನಗರದ ಮುಖ್ಯರಸ್ತೆಯಲ್ಲಿ ಡಿಜೆ ಅಳವಡಿಸಿ ಮೆರವಣಿಗೆ ನಡೆಸಲಾಗಿತ್ತು. ಆದರೆ, ಮೆರವಣಿಗೆ ನಡೆಸಲು ಪೊಲೀಸ್‌ರಿಂದ ಅನುಮತಿ ಪಡೆದಿರಲಿಲ್ಲ. 


ಪುತ್ತೂರು(ಜು.28):  ಪುತ್ತೂರಿನಲ್ಲಿ ಬುಧವಾರ ಗ್ರಾಮ ಪಂಚಾಯಿತಿ ಉಪಚುನಾವಣೆಯಲ್ಲಿ ಫಲಿತಾಂಶ ಪ್ರಕಟಗೊಂಡ ನಂತರ ನಗರದ ಮುಖ್ಯರಸ್ತೆಯಲ್ಲಿ ಅನುಮತಿಯಿಲ್ಲದೆ ವಿಜಯೋತ್ಸವ ನಡೆಸಿದ ಪುತ್ತಿಲ ಪರಿವಾರದ ವಿರುದ್ದ ಪುತ್ತೂರು ನಗರ ಠಾಣೆಯಲ್ಲಿ ಸಾರ್ವಜನಿಕ ಶಾಂತಿಭಂಗ ಪ್ರಕರಣ ದಾಖಲಾಗಿದೆ.

ಆರ್ಯಾಪು ಮತ್ತು ನಿಡ್ಪಳ್ಳಿ ಗ್ರಾಮ ಪಂಚಾಯಿತಿಗೆ ಜು.23ರಂದು ನಡೆದ ಉಪಚುನಾವಣೆಯ ಫಲಿತಾಂಶ ಜು.26ರಂದು ಪ್ರಕಟವಾಗಿತ್ತು. ಫಲಿತಾಂಶದಲ್ಲಿ ಪುತ್ತಿಲ ಪರಿವಾರದಿಂದ ಸ್ಪರ್ಧಿಸಿದ್ದ ಆರ್ಯಾಪು ಗ್ರಾಪಂನ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ ಗೆಲುವು ಸಾಧಿಸಿದ್ದು, ನಿಡ್ಪಳ್ಳಿ ಗ್ರಾಪಂನಲ್ಲಿ ಪುತ್ತಿಲ ಪರಿವಾರದ ಅಭ್ಯರ್ಥಿ ಅಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. 

Tap to resize

Latest Videos

ಆರೆಸ್ಸೆಸ್ಸಗೂ ತಲೆನೋವಾದ ಪುತ್ತಿಲ ಪರಿವಾರ: ಬೇಡಿಕೆ ಕಂಡು ಬಿಜೆಪಿ ಮುಖಂಡರೇ ಹೈರಾಣು!

ಫಲಿತಾಂಶ ಪ್ರಕಟಗೊಂಡ ಬಳಿಕ ಚುನಾವಣೆಯ ಎಣಿಕೆ ನಡೆದ ಪುತ್ತೂರಿನ ತಾಲೂಕು ಆಡಳಿತ ಸೌಧದ ಬಳಿಯಿಂದ ಪುತ್ತಿಲ ಪರಿವಾರದ ಕಚೇರಿ ತನಕ ನಗರದ ಮುಖ್ಯರಸ್ತೆಯಲ್ಲಿ ಡಿಜೆ ಅಳವಡಿಸಿ ಮೆರವಣಿಗೆ ನಡೆಸಲಾಗಿತ್ತು. ಆದರೆ, ಮೆರವಣಿಗೆ ನಡೆಸಲು ಪೊಲೀಸ್‌ರಿಂದ ಅನುಮತಿ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅನಧಿಕೃತ ಮೆರವಣಿಗೆ ನಡೆಸಿದ ಸಂಘಟಕರ ವಿರುದ್ಧ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕ ಶಾಂತಿಭಂಗ ಪ್ರಕರಣ ದಾಖಲಿಸಲಾಗಿದೆ.

click me!