ಬೆಳಗಾವಿ: ಹೋಂ ಕ್ವಾರಂಟೈನ್‌ ಉಲ್ಲಂಘನೆ, 573 ಮಂದಿಯ ವಿರುದ್ಧ ಕೇಸ್‌

By Kannadaprabha NewsFirst Published Jul 2, 2020, 9:40 AM IST
Highlights

ಮಹಾಮಾರಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಾ ಸಾಗಿದ್ದರೂ, ಜನತೆಯಲ್ಲಿ ಕೊರೋನಾ ರೋಗದ ಗಂಭೀರತೆ ಅರ್ಥವಾದಂತೆ ಕಾಣುತ್ತಿಲ್ಲ| ಮಾಸ್ಕ್‌ ಧರಿಸದೇ ಓಡಾಡುವುದು ಹಾಗೂ ಸಾಮಾಜಿಕ ಅಂತರ ಮರೆತು ನಿರಾಳರಾಗಿ ನಿರ್ಭೀತಿಯಿಂದ ಸಂಚರಿಸುತ್ತಿದ್ದಾರೆ|

ಬೆಳಗಾವಿ(ಜು.02): ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ ವೃದ್ಧನೋರ್ವ ಬಲಿಯಾಗುವ ಮೂಲಕ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆ ಏರಿದಂತಾಗಿದೆ. ನಗರದ ನ್ಯೂ ಗೂಡ್‌ಶೆಡ್‌ ರೋಡ್‌ನ ಶಾಸ್ತ್ರಿ ನಗರದ 72 ವರ್ಷದ ವೃದ್ಧ (ಪಿ.15272) ಬುಧವಾರ ಮಹಾಮಾರಿಗೆ ಬಲಿಯಾಗಿದ್ದಾನೆ.

ಮೃತ ವೃದ್ಧ ಮಂಗಳವಾರ ಬೆಳಗ್ಗೆ ಖಾಸಗಿ ಬಸ್‌ ಮೂಲಕ ಬೆಂಗಳೂರಿನಿಂದ ಬೆಳಗಾವಿಗೆ ಬಂದಿದ್ದನು. ಆರೋಗ್ಯದಲ್ಲಿ ವ್ಯತ್ಯಾಸ ಕಾಣುವ ಲಕ್ಷಣಗಳು ಕಾಣುತ್ತಿದ್ದಂತೆ ಸ್ವಯಂ ಪ್ರೇರಣೆಯಿಂದ ಜಿಲ್ಲಾಸ್ಪತ್ರೆಗೆ ತೆರಳಿ ಚಿಕಿತ್ಸೆಗೆಗೊಳಪಟ್ಟಿದ್ದರು. ವೈದ್ಯರು ಕೊರೋನಾ ಪರೀಕ್ಷೆ ನಡೆಸಿದ ಸಂದಂರ್ಭದಲ್ಲಿ ವೃದ್ಧನಿಗೆ ಕೊರೋನಾ ದೃಢವಾಗಿದ್ದರಿಂದ ತಕ್ಷಣ ವೈದ್ಯರು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲು ಪ್ರಾರಂಭಿಸಿದ್ದರು. ಚಿಕಿತ್ಸೆ ಫಲಿಸದೇ ಬುಧವಾರ ಮಧ್ಯಾಹ್ನದ ಹೊತ್ತಿಗೆ ಅಸುನಿಗೀದ್ದಾನೆ ಎಂದು ತಿಳಿದು ಬಂದಿದೆ. ಮುಂಜಾಗ್ರತೆ ಕ್ರಮವಾಗಿ ವೃದ್ಧನ ಮನೆಯಲ್ಲಿ ಸಂಪರ್ಕದಲ್ಲಿದ್ದ 7 ವರ್ಷದ ಮಗು ಸೇರಿದಂತೆ ಒಟ್ಟು 8 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ.

ಲಖನೌಗೆ ಹೋದ ಬೈಲಹೊಂಗಲ ಯೋಧನಿಗೆ ಅಂಟಿದ ಡೆಡ್ಲಿ ಕೊರೋನಾ..!

ಮಹಾಮಾರಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಾ ಸಾಗಿದ್ದರೂ, ಜನತೆಯಲ್ಲಿ ಕೊರೋನಾ ರೋಗದ ಗಂಭೀರತೆ ಅರ್ಥವಾದಂತೆ ಕಾಣುತ್ತಿಲ್ಲ. ಮಾಸ್ಕ್‌ ಧರಿಸದೇ ಓಡಾಡುವುದು ಹಾಗೂ ಸಾಮಾಜಿಕ ಅಂತರ ಮರೆತು ನಿರಾಳರಾಗಿ ನಿರ್ಭೀತಿಯಿಂದ ಸಂಚರಿಸುತ್ತಿದ್ದಾರೆ. ಅಲ್ಲದೇ ವೃದ್ಧ ಕೊರೋನಾದಿಂದ ಮೃತಪಟ್ಟಿದ್ದಾನೆ ಎಂಬ ವಿಷಯ ತಿಳಿದಿದ್ದರೂ, ಜನರು ಮಾತ್ರ ಮೃತ ವೃದ್ಧನ ಶವವನ್ನು ಅಂತ್ಯಸಂಸ್ಕಾರಕ್ಕೆ ವಾಹನದಲ್ಲಿ ಹಾಕುವುದನ್ನು ಸಾಮಾಜಿಕ ಅಂತರ ಮರೆತು ಗುಂಪು ಗುಂಪಾಗಿ ನಿಂತು ವೀಕ್ಷಣೆ ಮಾಡುತ್ತಿದ್ದ ದೃಶ್ಯ ಕಂಡುಬಂತು.

ಹೋಂ ಕ್ವಾರಂಟೈನ್‌ ಉಲ್ಲಂಘನೆ: 573 ಮಂದಿಯ ವಿರುದ್ಧ ಕೇಸ್‌

ಮಹಾಮಾರಿ ಕೊರೋನಾ ವೈರಸ್‌ ಸೋಂಕಿನ ತಡೆಗೆ ಮುಂಜಾಗ್ರತಾ ಕ್ರಮವಾಗಿ ವಿಧಿಸಲಾಗಿದ್ದ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ಜಿಲ್ಲೆಯಲ್ಲಿ 573 ಶಂಕಿತ ಹಾಗೂ ಸೋಂಕಿತರ ವಿರುದ್ಧ ಪ್ರಕರಣ ದಾಖಲಿಸುವಂತೆ ಕ್ವಾರಂಟೈನ್‌ ನೋಡಲ್‌ ಅಧಿಕಾರಿಗಳು ಜಿಲ್ಲೆಯ ಉಪ ವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರರಿಗೆ ಸೂಚನೆ ನೀಡಿದ್ದಾರೆ. ಮಹಾರಾಷ್ಟ್ರ ಸೇರಿದಂತೆ ಮತ್ತಿತರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿರುವ 573 ಜನರನ್ನು ಮುಂಜಾಗ್ರತಾ ಕ್ರಮವಾಗಿ ಹೋಮ್‌ ಕ್ವಾರಂಟೈನ್‌ ಮಾಡಲಾಗಿತ್ತು. ಆದರೆ, ಈ ಅವಧಿಯಲ್ಲಿ ಇವರೆಲ್ಲರೂ ನಿಯಮ ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಓಡಾಡಿದ್ದಾರೆ.
 

click me!