
ಮಂಡ್ಯ, [ನ.29]: ಮಂಡ್ಯ ಬಸ್ ದುರಂತ ನಡೆದ ಸ್ಥಳದಲ್ಲೇ ಮತ್ತೊಂದು ದುರಂತ ಸಂಭವಿಸಿದೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ವಿಸಿ ನಾಲೆ ಬಳಿ ನಡೆದಿದ್ದ ಬಸ್ ದುರಂತದಲ್ಲಿ 30 ಜನರು ಸಾವನ್ನಪ್ಪಿರುವ ಕರಾಳ ನೆನಪು ಇನ್ನು ಮಾಸಿಲ್ಲ. ಆಗಲೇ ಬಸ್ ದುರಂತ ನಡೆದ ಸ್ಥಳದಲ್ಲೇ ಮತ್ತೊಂದು ದುರಂತ ನಡೆದಿದೆ.
ಅಷ್ಟಕ್ಕೂ 25ಕ್ಕೂ ಹೆಚ್ಚು ಬಲಿ ಪಡೆದ 'ರಾಜಕುಮಾರ' ಬಸ್ ಯಾರದ್ದು?
ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ವಿಸಿ ನಾಲೆಗೆ ಬಸ್ ಉರುಳಿ 30 ಜನರು ಜಲಸಮಾಧಿಯಾಗಿದ್ದರು. ಇದೀಗ ಅದೇ ಸ್ಥಳದಲ್ಲೇ ಇಂದು [ಗುರುವಾರ] ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.ಅದೃಷ್ಟವಶಾತ್ ಕಾರಿನಲ್ಲಿದ್ದ ಚಾಲಕ ಸೇರಿದಂತೆ ಮೂವರು ವೈದ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್ ದುರಂತ ನಡೆದ ಸ್ಥಳಕದಲ್ಲೇ ಈ ಅವಘಡ ಸಂಭವಿಸಿದ್ದಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರ ಆತಂಕಕ್ಕೊಳಗಾಗಿದ್ದಾರೆ.