ಮುಧೋಳ ಬಳಿ ಭೀಕರ ಅಪಘಾತ: ಸ್ಥಳದಲ್ಲೇ ನಾಲ್ವರ ದುರ್ಮರಣ

By Suvarna News  |  First Published Jan 3, 2020, 7:34 AM IST

ಕಾರಿಗೆ ಡಿಕ್ಕಿ ಹೊಡೆದ ಕೆಎಸ್ ಆರ್ ಟಿಸಿ ಬಸ್| ನಾಲ್ವರ ಸಾವು| ಮುಧೋಳ ತಾಲೂಕಿನ ಶಿರೋಳ ಬಳಿ ವಿಜಯಪುರ -ಧಾರಾವಾಡ ರಾಜ್ಯ ಹೆದ್ದಾರಿಯಲ್ಲಿ ನಡೆದ ಘಟನೆ|ಮೃತರೆಲ್ಲರು ಖಾಜಿ ಬೀಳಗಿ ಗ್ರಾಮದವರು|


ಬಾಗಲಕೋಟೆ[ಜ.03]: ಕಾರಿಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾ ರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಶಿರೋಳ ಬಳಿ ವಿಜಯಪುರ -ಧಾರಾವಾಡ ರಾಜ್ಯ ಹೆದ್ದಾರಿಯಲ್ಲಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ನಡೆದಿದೆ. 

ಮೃತರನ್ನು ಹನುಮಂತ(21), ರಿಯಾಜ್(25) , ಬಾಲಪ್ಪ(34), ಸಿದ್ದರಾಯ(34) ಎಂದು ಗುರುತಿಸಲಾಗಿದೆ. ಟ್ರ್ಯಾಕ್ಟರ್ ಓವರ್ ಟೇಕ್ ಮಾಡಲು ಹೋಗಿ ಕಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮೃತರೆಲ್ಲರು ಖಾಜಿ ಬೀಳಗಿ ಗ್ರಾಮದವರು ಎಂದು ತಿಳಿದು ಬಂದಿದೆ. ಖಾಜಿ ಬೀಳಗಿಯಿಂದ ಧಾರವಾಡಕ್ಕೆ ನ್ಯಾಯಾಲಯಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಕೆಎಸ್ ಆರ್ ಟಿಸಿ ಬಸ್ ಬೆಳಗಾವಿಯಿಂದ ಮುಧೋಳ ಮಾರ್ಗವಾಗಿ ಕಲಬುರಗಿಗೆ ಹೊರಟಿತ್ತು. 

click me!