ಉತ್ತರ ಕನ್ನಡ: ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು: ಮೂವರ ಸಾವು

Published : Mar 10, 2023, 11:20 AM IST
ಉತ್ತರ ಕನ್ನಡ:  ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು: ಮೂವರ ಸಾವು

ಸಾರಾಂಶ

ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಹೊಡೆದಿದ್ದರಿಂದ ಸಹೋದರರಿಬ್ಬರು ಸೇರಿ ಮೂವರು ಮೃತಪಟ್ಟಘಟನೆ ಹುಬ್ಬಳ್ಳಿ- ಶಿರಸಿ ರಸ್ತೆಯ ಪಾಳಾ ಕ್ರಾಸ್‌ ಬಳಿ ನಡೆದಿದೆ. ಪಟ್ಟಣದ ಬಸವನ ಬೀದಿ ನಿವಾಸಿ ಗಣೇಶ ಶಿವಾನಂದ ಗಾಣಿಗೇರ (27) ಹಾಗೂ ವೀರೇಶ ಶಿವಾನಂದ ಗಾಣಿಗೇರ(26) ಮತ್ತು ಪಟ್ಟಣದ ಹುಬ್ಬಳ್ಳಿ ರಸ್ತೆ ನಿವಾಸಿ ಶಂಕರಯ್ಯ ಹಿರೇಮಠ (25) ಮೃತಪಟ್ಟದುರ್ದೈವಿಗಳು.

ಮುಂಡಗೋಡ ಮಾ.10) : ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಹೊಡೆದಿದ್ದರಿಂದ ಸಹೋದರರಿಬ್ಬರು ಸೇರಿ ಮೂವರು ಮೃತಪಟ್ಟಘಟನೆ ಹುಬ್ಬಳ್ಳಿ- ಶಿರಸಿ ರಸ್ತೆಯ ಪಾಳಾ ಕ್ರಾಸ್‌ ಬಳಿ ನಡೆದಿದೆ.

ಪಟ್ಟಣದ ಬಸವನ ಬೀದಿ ನಿವಾಸಿ ಗಣೇಶ ಶಿವಾನಂದ ಗಾಣಿಗೇರ (27) ಹಾಗೂ ವೀರೇಶ ಶಿವಾನಂದ ಗಾಣಿಗೇರ(26) ಮತ್ತು ಪಟ್ಟಣದ ಹುಬ್ಬಳ್ಳಿ ರಸ್ತೆ ನಿವಾಸಿ ಶಂಕರಯ್ಯ ಹಿರೇಮಠ (25) ಮೃತಪಟ್ಟದುರ್ದೈವಿಗಳಾಗಿದ್ದು, ಗೌತಮ ಫಣಿರಾಜ ಹದಳಗಿ, ಪ್ರವೀಣ ಅರುಣ ಭಟ್ಕಳಕರ ತೀವ್ರ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ಸೇರಿಸಲಾಗಿದೆ.

ಡಿಕ್ಕಿಯ ರಭಸಕ್ಕೆ 2 ತುಂಡಾದ ಸ್ಕೂಟಿ: ಬೈಕ್‌ ಸವಾರರು ಪ್ರಾಣಾಪಾಯದಿಂದ ಪಾರು

ಬುಧವಾರ ರಾತ್ರಿ ಐದು ಜನ ಸ್ನೇಹಿತರು ಪಾಳಾ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ.

ಪಾಳಾ ಗ್ರಾಮ ಕೇವಲ 1.5 ಕಿ.ಮೀ ದೂರ ಇದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಣೇಶ ಮತ್ತು ವೀರೇಶ ಸಹೋದರಿಬ್ಬರು ಸ್ಥಳದಲ್ಲೇ ಮೃತಪಟ್ಟರು. ತೀವ್ರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಮೂವರಿಗೆ ಮುಂಡಗೋಡ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದರಲ್ಲಿ ಶಂಕರಯ್ಯ ಹಿರೇಮಠ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.

ಯುವಕರು ಅಪಘಾತದಲ್ಲಿ ಮೃತಪಟ್ಟವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರು ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು. ಸಹೋದರಿಬ್ಬರ ಸಾವಿನಿಂದ ಮುಂಡಗೋಡ ಪಟ್ಟಣವೇ ಕಣ್ಣಿರು ಹಾಕುತ್ತಿದೆ. ಈ ಕುರಿತು ಮುಂಡಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ರಸ್ತೆ ಅಪಘಾತ ವೇಳೆ ಗಾಯಾಳುಗಳ ಚಿಕಿತ್ಸೆಗೆ ತರಬೇತಿ: ಏನಿದು ರಾಸ್ತ ಟ್ರೈನಿಂಗ್?

PREV
Read more Articles on
click me!

Recommended Stories

KSRTC ಬಸ್ ಡ್ರೈವರ್ ಹಾರ್ನ್ ಮಾಡಿದ್ದೇ ತಪ್ಪಾಯ್ತಂತೆ; ಊರಿನ ಜನರೆಲ್ಲಾ ಸೇರಿಕೊಂಡು ಧರ್ಮದೇಟು ಕೊಟ್ಟರು!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ