ಬಸ್‌ಗೆ ಡಿಕ್ಕಿಯಾಗಿ ನದಿಗೆ ಉರುಳಿ ಬಿದ್ದ ಕಾರು

By Kannadaprabha News  |  First Published Feb 9, 2020, 11:17 AM IST

ಬಸ್ಸು ಮತ್ತು ಕಾರಿನ ನಡುವೆ ಡಿಕ್ಕಿಯಾಗಿದ್ದು ಈ ವೇಳೆ ಕಾರು ನದಿಗೆ ಉರುಳಿ ಬಿದ್ದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. 


ಶಿವಮೊಗ್ಗ [ಫೆ.09]: ಖಾಸಗಿ ಬಸ್ಸು ಮತ್ತು ಕಾರಿನ ನಡುವೆ ನಡೆದ ಪರಿಣಾಮ ಕಾರು ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ಸಮೀಪದ ಹರಿದ್ರಾವತಿ ನದಿಗೆ ಬಿದ್ದ ಘಟನೆ ನಡೆದಿದೆ. ಮುಡುಬಾ ಸೇತುವೆಯಿಂದ ಕಾರು ನದಿ ಪಾತ್ರಕ್ಕೆ ಬಿದ್ದಿದೆ. ಅದೃಷ್ಟವಶಾತ್‌ ನದಿಯಲ್ಲಿ ನೀರಿಲ್ಲದ ಕಾರಣ ಯಾವುದೇ ಜೀವಹಾನಿಯಾಗಿಲ್ಲ. ಕಾರಿನಲ್ಲಿದ್ದ ಇಬ್ಬರಿಗೆ ಕಾಲು ಮುರಿದಿದ್ದರೆ, ಕಾರಿನ ಚಾಲಕನ ಕೈ ಮುರಿದಿದೆ.

ಹೊನ್ನಾವರದಿಂದ ಹೊಸನಗರ ತಾಲೂಕಿನ ನಗರದ ದರ್ಗಾಕ್ಕೆ ಈ ಕಾರು ಬರುತ್ತಿತ್ತು. ಬಟ್ಟೆಮಲ್ಲಪ್ಪ ಬಳಿ ಹರಿದ್ರಾವತಿ ನದಿಯ ಮುಡುಬ ಸೇತುವೆ ಮೇಲೆ ಬರುವಾಗ ದುರ್ಗಾಂಬ ಬಸ್‌ಗೆ ಡಿಕ್ಕಿ ಹೊಡೆದಿದೆ. ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸೇತುವೆಯಿಂದ ಸುಮಾರು 30 ಅಡಿ ಮೇಲಿಂದ ನದಿಗೆ ಬಿದ್ದಿದೆ.

Tap to resize

Latest Videos

ರಕ್ತಸಿಕ್ತವಾಗಿ ನರಳಾಡ್ತಾ ಪ್ರಾಣಬಿಟ್ಟ ಗಿರೀಶ್, ಶಿವಮೊಗ್ಗದ ಘೋರ ಹತ್ಯೆಯ ಸಿಸಿಟಿವಿ ದೃಶ್ಯ...

ಗಾಯಾಳುಗಳನ್ನು ಹೊಸನಗರದ ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ. ಅಪಘಾತದಲ್ಲಿ ಕಾರು ಜಖಂಗೊಂಡಿದ್ದು, ಈ ಕುರಿತು ಹೊಸನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!