ನಂಜನಗೂಡು ಬಳಿ ಮಿಲಿಟರಿ ತರಬೇತಿ ವಾಹನಕ್ಕೆ ಕಾರ್‌ ಡಿಕ್ಕಿ

Suvarna News   | Asianet News
Published : Feb 24, 2020, 10:32 AM IST
ನಂಜನಗೂಡು ಬಳಿ ಮಿಲಿಟರಿ ತರಬೇತಿ ವಾಹನಕ್ಕೆ ಕಾರ್‌ ಡಿಕ್ಕಿ

ಸಾರಾಂಶ

ಮಿಲಿಟರಿ ತರಬೇತಿ ವಾಹನಕ್ಕೆ ಕಾರ್‌ ಡಿಕ್ಕಿ| ಮೂವರಿಗೆ ಗಾಯ| ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಬಳಿ ನಡೆದ ಘಟನೆ| ಗಾಯಾಳುಗಳನ್ನ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ದಾಖಲು| 

ನಂಜನಗೂಡು(ಫೆ.24): ಮಿಲಿಟರಿ ತರಬೇತಿ ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರಿಗೆ ಗಾಯವಾದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಬಳಿ ಇಂದು(ಸೋಮವಾರ) ನಡೆದಿದೆ. 

ನಂಜನಗೂಡು ಕಡೆಯಿಂದ ಬರುತ್ತಿದ್ದ ಮಿಲಿಟರಿ ತರಬೇತಿ ವಾಹನಕ್ಕೆ ಚಾಮರಾಜನಗರ ಕಡೆಯಿಂದ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಕಾರು ತಮಿಳುನಾಡಿನದ್ದು ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಗಾಯಗೊಂಡಿರುವವರ ಹೆಸರು, ವಿಳಾಸ ಇನ್ನು ತಿಳಿದು ಬಂದಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾರ್ ಚಾಲಕನ ಅಜಾಗರೂಕ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದ ಮೂವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಗಾಯಾಳುಗಳನ್ನ ಮಿಲಿಟರಿ ವಾಹನದಲ್ಲಿ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದೊಡ್ಡ ಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವಘಡ ನಡೆದಿದೆ. 
 

PREV
click me!

Recommended Stories

ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!
ರಾಮನಗರದ ರೇವಣಸಿದ್ದೇಶ್ವರ ಬೆಟ್ಟದಲ್ಲಿ ದುರಂತ: ದೇವರ ದರ್ಶನಕ್ಕೂ ಮುನ್ನವೇ ಕಂದಕ ಸೇರಿದ ಭಕ್ತ!