ಜಿಟಿಡಿ ಬಗ್ಗೆ ಒಂದೇ ಒಂದು ಅಪಸ್ವರ ಕೇಳಿದರೂ ಸಹಿಸುವುದಿಲ್ಲ : ಎಚ್‌.ಡಿ. ದೇವೇಗೌಡ

Published : Oct 22, 2022, 04:49 AM IST
ಜಿಟಿಡಿ ಬಗ್ಗೆ ಒಂದೇ ಒಂದು ಅಪಸ್ವರ ಕೇಳಿದರೂ ಸಹಿಸುವುದಿಲ್ಲ : ಎಚ್‌.ಡಿ. ದೇವೇಗೌಡ

ಸಾರಾಂಶ

ಮೈಸೂರು ಜಿಲ್ಲೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ ನಾಯಕತ್ವದ ಬಗ್ಗೆ ಒಂದೇ ಒಂದು ಅಪಸ್ವರ ಕೇಳಿದರೂ ನಾನು ಸಹಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

 ಮೈಸೂರು(ಅ.22):  ಮೈಸೂರು ಜಿಲ್ಲೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ ನಾಯಕತ್ವದ ಬಗ್ಗೆ ಒಂದೇ ಒಂದು ಅಪಸ್ವರ ಕೇಳಿದರೂ ನಾನು ಸಹಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಚಾಮುಂಡಿ ಬೆಟ್ಟಕ್ಕೆ (Chamundi Betta)  ಶುಕ್ರವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಟಿ. ದೇವೇಗೌಡರ (GT Devegowda) ನಾಯಕತ್ವದ ಬಗ್ಗೆ ಒಂದೇ ಒಂದು ಅಪಸ್ವರ ಕೇಳಿದರೂ ನಾನು ಸಹಿಸುವುದಿಲ್ಲ. ಅಪಸ್ವರ ಎತ್ತುವವರು ಹೊರಗೆ ಹೋಗಬಹುದು. ಮೈಸೂರು ಜಿಲ್ಲೆಯ ಎಲ್ಲಾ ಉಸ್ತುವಾರಿ ಜಿ.ಟಿ. ದೇವೇಗೌಡರಿಗೆ ಕೊಟ್ಟಿದ್ದೇವೆ. ಅವರ ನಾಯಕತ್ವದಲ್ಲೇ ಎಲ್ಲಾ ನಡೆಯುತ್ತದೆ. ಅವರ ತೀರ್ಮಾನವೇ ಅಂತಿಮ ಎಂದರು.

ಜಿ.ಟಿ. ದೇವೇಗೌಡರ ಬಗ್ಗೆ ಕೊಂಕು ಮಾತನಾಡಿದರೆ ನಾನು ಸಹಿಸುವುದಿಲ್ಲ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಎರಡು ದಿನಗಳ ಜೆಡಿಎಸ್‌ ಸಭೆಯ ಯಶಸ್ವಿ ಬಳಿಕ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಎಚ್‌.ಡಿ. ದೇವೇಗೌಡರಿಗೆ ಶಾಸಕ ಜಿ.ಟಿ. ದೇವೇಗೌಡ ಸಾಥ್‌ ನೀಡಿದರು.

ಮೈಸೂರು  ಜೆಡಿಎಸ್ ಪಟ್ಟಿ ಬಿಡುಗಡೆ

ಮೈಸೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್‌ ಈಗಾಗಲೇ ಸಿದ್ಧತೆ ಆರಂಭಿಸಿದೆ. ಅನಾರೋಗ್ಯದ ಹೊರತಾಗಿಯೂ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಖುದ್ದು ಅಖಾಡಕ್ಕಿಳಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದ ಜಿ.ಟಿ. ದೇವೇಗೌಡ ಮತ್ತು ಗೌಡರ ಕುಟುಂಬದ ನಡುವೆ ಇದ್ದ ಭಿನ್ನಮತ ಶಮನಕ್ಕಾಗಿ ಗೌಡರೇ ಜಿ.ಟಿ. ದೇವೇಗೌಡ ಮನೆಗೆ ತೆರಳಿ ಮಾತನಾಡಿದರು. ದೊಡ್ಡ ಗೌಡರೇ ಮನೆಗೆ ಬಂದಿದ್ದೇ ತಡ ಎಲ್ಲಾ ವೈಮನಸ್ಸನ್ನೂ ಬದಿಗೊತ್ತಿ ಜಿ.ಟಿ. ದೇವೇಗೌಡ ನನ್ನ ಕುಟುಂಬ ಎಂದೆಂದಿಗೂ ಜೆಡಿಎಸ್‌ ಜೊತೆ ಇರುತ್ತದೆ. ಎಚ್‌ಡಿ ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದೇ ನನ್ನಗುರಿ ಎಂದು ಹೇಳಿದ್ದರು. ಇದೀಗ ಇಂದು ಅವರೇ ಮೈಸೂರು ಭಾಗದ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಮೊನ್ನೆಯವರೆಗೂ ಒಬ್ಬರಿಗೊಬ್ಬರು ಮಾತು ಕೂಡ ಆಡುತ್ತಿರಲಿಲ್ಲ ಆದರೆ ಇಂದು ಜೆಡಿಎಸ್‌ನ ಮೈಸೂರು ಭಾಗದ ಚುನಾವಣಾ ಜವಾಬ್ದಾರಿಯನ್ನು ಜಿ.ಟಿ.ಡಿ ಹೊತ್ತಿರುವುದು ಸ್ಪಷ್ಟವಾಗಿದೆ. 

ಚಾಮುಂಡೇಶ್ವರಿಯಿಂದ ಜಿ.ಟಿ.ಡಿ, ಹುಣಸೂರಿನಿಂದ ಮಗ ಹರೀಶ್‌ ಗೌಡ ಸ್ಪರ್ಧೆ:

ಚಾಮುಂಡಿ ಬೆಟ್ಟದಲ್ಲಿ‌ ಮೈಸೂರು ಭಾಗದ ಕ್ಷೇತ್ರಗಳ ಮೊದಲ ಅಭ್ಯರ್ಥಿಗಳ ಪಟ್ಟಿ ಘೋಷಿಸಿದ ಜಿ.ಟಿ ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಮತ್ತೆ ಸ್ಪರ್ಧಿಸುವುದಾಗಿ ಘೋಷಿಸಿದರು. ಚಾಮುಂಡೇಶ್ವರಿಗೆ ಜಿ.ಟಿ.ಡಿ, ಹುಣಸೂರಿಗೆ ಜಿ.ಟಿ.ಡಿ‌ ಮಗ ಹರೀಶ್, ಕೆ.ಆರ್ ನಗರಕ್ಕೆ ಸಾ.ರಾ ಮಹೇಶ್, ಪಿರಿಯಾಪಟ್ಟಣಕ್ಕೆ ಕೆ.ಮಹದೇವ್, ನರಸೀಪುರಕ್ಕೆ ಅಶ್ಚಿನ್, ಎಚ್.ಡಿ ಕೋಟೆ ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯಪ್ರಕಾಶ್ ಗ ಬಹುತೇಕ ಅಂತಿಮ ಎಂದು ಪ್ರಕಟಿಸಿದ ಜಿ.ಟಿ.ಡಿ. 

"ನಾನು ನಿನ್ನೆಯಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಮನಸ್ಸು ಮೂರು ವರ್ಷಗಳ ನಂತರ ಸಮಾಧಾನದಲ್ಲಿದೆ. ನಾನು ನನ್ನ‌ಮನೆಯವರು ಹೆಚ್ಚು ಖುಷಿಯಲ್ಲಿದ್ದೇವೆ. ಇನ್ನೂ ಯಾವ ಗೊಂದಲಗಳು ಉಳಿದಿಲ್ಲ. ಚಾಮುಂಡಿ ತಾಯಿಗೆ ಎಚ್‌ಡಿ ದೇವೇಗೌಡರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನೊಂದು ತಿಂಗಳನಲ್ಲಿ ನಾನು ವಾಕ್ ಮಾಡುವ ಶಕ್ತಿಕೊಡು ಎಂದು ತಾಯಿ ಮುಂದೆ ಬೇಡಿದ್ದಾರೆ. ಜನವರಿ ತಿಂಗಳಿನಲ್ಲಿ ಎಚ್.ಡಿ ದೇವೇಗೌಡರು ಚಂಡಿಕಾ ಹೋಮ ನಡೆಸಲಿದ್ದಾರೆ. ಎಚ್.ಡಿ ದೇವೇಗೌಡರ ಉತ್ಸಾಹ ನಾವೇ ಅಚ್ಚರಿಗೆ ಒಳಗಾಗಿದ್ದೇವೆ. ಅವರೇ ನಮಗೆ ಪ್ರೇರಣೆ. ಅವರನ್ನ ಸಂತೋಷವಾಗಿಡುವುದೇ ನಮ್ಮ ಸಂತೋಷ," ಎಂದು ಚಾಮುಂಡಿ ಬೆಟ್ಟದಲ್ಲಿ ಜಿ.ಟಿ.ಡಿ ಹೇಳಿದ್ದಾರೆ. 

ಇದನ್ನೂ ಓದಿ: ನನ್ನ ಕಣ್ಮುಂದೆ ಜೆಡಿಎಸ್‌ಗೆ ಮತ್ತೆ ಅಧಿಕಾರ: ದೇವೇಗೌಡ

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಟ ಎಚ್.ಡಿ ದೇವೇಗೌಡ ಅವರು ಜಿ.ಟಿ ದೇವೇಗೌಡ ನಾಯಕತ್ವದ ಬಗ್ಗೆ ಒಂದೇ ಒಂದು ಅಪಸ್ವರ ಕೇಳಿದರು ನಾನು ಸಹಿಸುವುದಿಲ್ಲಾ.
ಅಪಸ್ವರ ಎತ್ತುವವರು ಹೊರಗೆ ಹೋಗಬಹುದು. ಮೈಸೂರು ಜಿಲ್ಲೆಯ ಎಲ್ಲಾ ಉಸ್ತುವಾರಿ ಜಿ.ಟಿ.ಡಿಗೆ ಕೊಟ್ಟಿದ್ದೇವೆ. ಅವರ ನಾಯಕತ್ವದಲ್ಲೇ ಎಲ್ಲಾ ನಡೆಯುತ್ತದೆ.
ಅವರ ತೀರ್ಮಾನವೇ ಅಂತಿಮ. ಅವರ ಬಗ್ಗೆ ಕೊಂಕು ಮಾತನಾಡಿದ್ದಾರೆ ನಾನು ಸಹಿಸುವುದಿಲ್ಲಾ, ಎಂದು ಜಿ.ಟಿ.ಡಿ ವಿರೋಧಿಗಳಿಗೆ ಜೆಡಿಎಸ್ ವರಿಷ್ಟ ಎಚ್.ಡಿ ದೇವೇಗೌಡ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಈ ಮೂಲಕ ದಳಪತಿಗಳ ಬಲಗೈ ಬಂಟ ಮತ್ತೆ ಹಿಂದಿನಷ್ಟೇ ಗೌಡರ ಕುಟುಂಬಕ್ಕೆ ಆಪ್ತರು ಎಂಬುದನ್ನು ದೇವೇಗೌಡರು ಪುನರುಚ್ಚರಿಸಿದ್ದಾರೆ. 

PREV
Read more Articles on
click me!

Recommended Stories

ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 15 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!