ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅವರಖೋಡ ಗ್ರಾಮದಲ್ಲಿರುವ ಗ್ರಾಮಒನ್ ಸೆಂಟರ್ ಸಿಬ್ಬಂದಿ ಹಾಲಪ್ಪ ಲೋಕೂರ ಎಂಬಾತನ ವಿರುದ್ಧ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ‘ಗೃಹಲಕ್ಷ್ಮಿ’ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಸೆಂಟರ್‌ಗೆ ಬಂದ ಸಾರ್ವಜನಿಕರ ಬಳಿ ಈತ ಪ್ರತಿ ಅರ್ಜಿಗೆ 100 ಪಡೆಯುತ್ತಿದ್ದ. ಇದನ್ನು ಪ್ರಶ್ನಿಸಿದವರಿಗೆ ಧಮ್ಕಿ ಹಾಕಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಹೆಸರನ್ನೂ ಎಳೆದು ತಂದಿದ್ದ.
ಬೆಳಗಾವಿ/ಅಥಣಿ(ಜು.30): ರಾಜ್ಯ ಸರ್ಕಾರದ ‘ಗೃಹಲಕ್ಷ್ಮಿ’ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಹಣ ಪಡೆಯುತ್ತಿರುವುದನ್ನು ಪ್ರಶ್ನಿಸಿದ ಜನರಿಗೆ ಧಮ್ಕಿ ಹಾಕಿದ್ದಲ್ಲದೆ, ‘ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನೇ ಕರೆಸಿದರೂ ನಾವು ಫ್ರೀ ಸರ್ವಿಸ್ ನೀಡಲ್ಲ. ಲಕ್ಷ್ಮೀ ಹೆಬ್ಬಾಳಕರ್ ಮತ್ತು ನೀನು ಸೇರಿ ನನ್ನ ಅಕೌಂಟ್‌ಗೆ .18 ಸಾವಿರ ಹಣ ಹಾಕಿ’ ಎಂದು ಉದ್ಧಟತನ ಪ್ರದರ್ಶಿಸಿದ ಗ್ರಾಮಒನ್ ಸೆಂಟರ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ, ಲೈಸೆನ್ಸ್ ರದ್ದುಪಡಿಸಿ, ಗ್ರಾಮಒನ್ ಸೆಂಟರ್‌ಗೆ ಬೀಗ ಜಡಿಯಲಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅವರಖೋಡ ಗ್ರಾಮದಲ್ಲಿರುವ ಗ್ರಾಮಒನ್ ಸೆಂಟರ್ ಸಿಬ್ಬಂದಿ ಹಾಲಪ್ಪ ಲೋಕೂರ ಎಂಬಾತನ ವಿರುದ್ಧ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ‘ಗೃಹಲಕ್ಷ್ಮಿ’ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಸೆಂಟರ್‌ಗೆ ಬಂದ ಸಾರ್ವಜನಿಕರ ಬಳಿ ಈತ ಪ್ರತಿ ಅರ್ಜಿಗೆ 100 ಪಡೆಯುತ್ತಿದ್ದ. ಇದನ್ನು ಪ್ರಶ್ನಿಸಿದವರಿಗೆ ಧಮ್ಕಿ ಹಾಕಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಹೆಸರನ್ನೂ ಎಳೆದು ತಂದಿದ್ದ.
ಗೃಹಲಕ್ಷ್ಮಿ ನೋಂದಣಿಗೆ ಮಹಿಳೆಯರ ದಂಡು: ನೋಂದಣಿ ಕೇಂದ್ರಗಳಲ್ಲಿ ನೂಕುನುಗ್ಗಲು..!
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕ್ರಮ ಕೈಗೊಂಡ ಸಚಿವರು, ಜಿಲ್ಲಾಧಿಕಾರಿಗೆ ಫೋನ್ ಮಾಡಿ ತಕ್ಷಣವೇ ಹಣ ಕೇಳಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ, ಗ್ರಾಮಒನ್ ಸೆಂಟರ್‌ನ ಲೈಸೆನ್ಸ್ ರದ್ದುಪಡಿಸಿ, ಕೇಂದ್ರವನ್ನು ಸೀಜ್ ಮಾಡುವಂತೆ ಸೂಚನೆ ನೀಡಿದರು. ಬಳಿಕ, ಜಿಲ್ಲಾಧಿಕಾರಿ ನಿತೇಶ ಪಾಟೀಲ ನಿರ್ದೇಶನದ ಮೇರೆಗೆ ಅಥಣಿ ತಹಸೀಲ್ದಾರ್ ಅವರು ಹಾಲಪ್ಪನ ವಿರುದ್ಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅದೇ ಗ್ರಾಮದ ಬೇರೆ ಅರ್ಹ ವ್ಯಕ್ತಿಗೆ ಲೈಸನ್ಸ್ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಗೃಹಲಕ್ಷ್ಮಿ’ ಅರ್ಜಿ ಸಲ್ಲಿಕೆ ಮಾಡಲು ಜನರು ಹಣ ಕೊಡಬೇಕಿಲ್ಲ. ಕೇಂದ್ರಗಳ ನಿರ್ವಹಣೆ ಮಾಡುವವರ ಖಾತೆಗೆ ಸರ್ಕಾರವೇ ಪ್ರತಿ ಅರ್ಜಿಗೆ .12 ಹಾಕುತ್ತದೆ. ಜನರಿಂದ ಹಣ ಪಡೆಯುವ ಕೇಂದ್ರದ ವಿರುದ್ಧ ಯಾವುದೇ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ.