New year 2023 : ಹೊಸ ವರ್ಷ ಸ್ವಾಗ​ತಕ್ಕೆ ಕೇಕ್‌, ಮದ್ಯ ಮಾರಾಟ ಜೋರು

By Kannadaprabha News  |  First Published Jan 1, 2023, 7:22 AM IST

ಜಿಲ್ಲೆಯದಾದ್ಯಂತ ಜನರು ಹೊಸ ವರ್ಷಾಚಾರಣೆ ಮೂಡ್‌ಗೆ ಜಾರಿದ್ದು, ಹಲವರು ಪ್ರವಾಸಿ ತಾಣಗಳಿಗೆ ತೆರಳಿ ಸಂಭ್ರಮಾಚರಣೆ ಮಾಡಿದರೆ, ಇನ್ನೂ ಅನೇಕರು ಮನೆಯಲ್ಲಿದ್ದುಕೊಂಡೇ ವಿಶೇಷ ಸಂಭ್ರಮಾಚರಣೆಗೆ ಮುಂದಾಗಿದ್ದರು.


ಶಿವಮೊಗ್ಗ (ಜ.1) : ಜಿಲ್ಲೆಯದಾದ್ಯಂತ ಜನರು ಹೊಸ ವರ್ಷಾಚಾರಣೆ ಮೂಡ್‌ಗೆ ಜಾರಿದ್ದು, ಹಲವರು ಪ್ರವಾಸಿ ತಾಣಗಳಿಗೆ ತೆರಳಿ ಸಂಭ್ರಮಾಚರಣೆ ಮಾಡಿದರೆ, ಇನ್ನೂ ಅನೇಕರು ಮನೆಯಲ್ಲಿದ್ದುಕೊಂಡೇ ವಿಶೇಷ ಸಂಭ್ರಮಾಚರಣೆಗೆ ಮುಂದಾಗಿದ್ದರು. ಶಿವಮೊಗ್ಗದಲ್ಲಿ ನೂತನ ವರ್ಷದ ಸ್ವಾಗತಕ್ಕೆ ಸಿದ್ಧತೆ ಬಿರುಸುಗೊಂಡಿವೆ. ಮಾರುಕಟ್ಟೆಯಲ್ಲಿ ಖರೀದಿಯ ಭರಾಟೆ ಜೋರಾಗಿತ್ತು. ಕೋವಿಡ್‌ ಆತಂಕದ ಹಿನ್ನೆಲೆ ಕಳೆದ ಎರಡು ವರ್ಷ ಹೊಸ ವರ್ಷಾಚರಣೆ ನೀರಸವಾಗಿತ್ತು. ಈ ಬಾರಿ ಜನ ಆತಂಕವಿಲ್ಲದೆ ನೂತನ ವರ್ಷದ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಕೇಕ್‌(Cake) ಖರೀದಿ ಜೋರು: ಕೇಕ್‌ ಕತ್ತರಿಸಿ ಹೊಸ ವರ್ಷವನ್ನು ಸ್ವಾಗತಿಸಲು(wel coming new year) ಸಿದ್ಧತೆ ಮಾಡಿಕೊಂಡಿದ್ದವರು ನಗರದ ವಿವಿಧೆಡೆ ಕೇಕ್‌ ಶಾಪ್‌(Cake shop), ಬೇಕರಿಗಳಲ್ಲಿ ಕೇಕ್‌ ಆಡರ್ರ ಕೊಟ್ಟು, ಖರೀದಿ ಮಾಡಿದರು. ವಿವಿಧ ಬಗೆಯ, ಹಲವು ಡಿಸೈನ್‌ ಮತ್ತು ಫ್ಲೇವರ್‌ಗಳ ಕೇಕ್‌ ಖರೀದಿ ಮಾಡಿದರು. ಶನಿವಾರ ಬೆಳಗ್ಗೆಯಿಂದಲು ಜನರು ಬಂದು ಕೇಕ್‌ ಖರೀದಿಸಿದರು. ಎಲ್ಲಾ ಬಗೆಯ ಕೇಕ್‌ಗಳಿಗೆ ಡಿಮಾಂಡ್‌ ಇತ್ತು. ಸಂಜೆ ವೇಳೆಗೆ ವ್ಯಾಪಾರ ಇನ್ನೂ ಜೋರಾಗಿಯೇ ನಡೆಯಿತು.

Tap to resize

Latest Videos

ವರ್ಷಾಚರಣೆ ಬೆನ್ನಲ್ಲೇ ಹೋಂ ಸ್ಟೇ ರೆಸಾರ್ಟ್ ಬುಕಿಂಗ್ ಸೋಲ್ಡ್ ಔಟ್, ಕೊರೊನಾ ಭೀತಿಯಲ್ಲಿ ಮಾಲೀಕರು!

ಎಣ್ಣೆಗೆ ಡಿಮಾಂಡ್‌ : ನಗರದಲ್ಲಿ ಮದ್ಯಕ್ಕೆ ಭಾರಿ ಡಿಮಾಂಡ್‌ ಇದೆ. ಸಂಜೆ ವೇಳೆಗೆ ತಮ್ಮಿಷ್ಟದ ಬ್ರಾಂಡ್‌ ಸಿಗದಿರುಬಹುದು ಎಂಬ ಆಲೋಚನೆಯಲ್ಲಿ ಬೆಳಗ್ಗೆಯಿಂದಲೆ ಮದ್ಯ ಖರೀದಿ ಆರಂಭವಾಗಿದೆ. ವೀಕೆಂಡ್‌ ಹೊತ್ತಲ್ಲಿ ಇಯರ್‌ ಎಂಡ್‌ ಪಾರ್ಟಿ ಹಿನ್ನೆಲೆ ಎಂದಿಗಿಂತಲು ಹೆಚ್ಚು ಮದ್ಯ ಖರೀದಿ ಮಾಡಲಾಗಿದೆ. ಎಂಎಸ್‌ಐಎಲ್‌ ಮತ್ತು ಎಂ.ಆರ್‌.ಪಿ ದರದಲ್ಲಿ ಮದ್ಯ ಮಾರಾಟ ಮಾಡುವ ಮಳಿಗೆಗಳಲ್ಲಿ ಹೆಚ್ಚಿನ ಡಿಮಾಂಡ್‌ ಇತ್ತು. ಶನಿವಾರ ರಾತ್ರಿ 11.30ರವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ಇದ್ದಿದ್ದರಿಂದ ಮಧ್ಯಾಹ್ನ ಹಾಗೂ ಸಂಜೆ ವೇಳೆ ಮದ್ಯದಂಗಡಿಗಳಲ್ಲಿ ಜನ ಸಂದಣಿ ಕಂಡು ಬಂತು.

ಚಿಕನ್‌, ಮಟನ್‌ ಖರೀದಿ : ನಗರದ ವಿವಿಧೆಡೆಯ ಚಿಕನ್‌, ಮಟನ್‌ ಶಾಪ್‌ಗಳಲ್ಲಿಯು ಖರೀದಿ ಜೋರಾಗಿದೆ. ಹಲವು ಅಂಗಡಿಗಳಲ್ಲಿ ಈಗಾಗಲೆ ಮುಂಗಡ ಪಾವತಿಯು ಮಾಡಲಾಗಿದೆ. ಸಂಜೆ ವೇಳೆಗೆ ಚಿಕನ್‌, ಮಟನ್‌ ಸೇಲ್‌ ಹೆಚ್ಚಳವಾಗಲಿದೆ. ಜೊತೆಗೆ ಸಾಫ್‌್ಟಡ್ರಿಂಕ್‌, ಜ್ಯೂಸ್‌, ಕುರಕಲು ತಿಂಡಿಗಳಿಗ ಖರೀಯೂ ಭರದಿಂದ ಸಾಗಿತ್ತು. ಹೊಸ ವರ್ಷಾಚರಣೆ ಹಿನ್ನೆಲೆ ಅಂಗಡಿಗಳಲ್ಲಿ ಸ್ಟಾಕ್‌ ಹೆಚ್ಚಿಸಲಾಗಿತ್ತು.

ಪ್ರವಾಸಿ ತಾಣಗಳಿಗೆ ಮುಗಿಬಿದ್ದ ಜನ

ಹೊಸ ವರ್ಷವನ್ನು ಬರಮಾಡಿಕೊಳ್ಳು ಜನರು ಈಗಾಗಲೇ ಪ್ರವಾಸಿ ತಾಣಗಳತ್ತ ಲಗ್ಗೆ ಇಡುತ್ತಿದ್ದಾರೆ. ಅದರಂತೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಾವಿರರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ.

ವಿಶ್ವ ಪ್ರಸಿದ್ದ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರ ದಂಡೇ ಬಂದಿದೆ. ಕಲ್ಲು ಬಂಡೆಗಳ ಮಧ್ಯೆ ಧುಮ್ಮಿಕ್ಕಿ ಬೀಳುವ ಜಲಪಾತದ ನಯನಮನೋಹರ ದೃಶ್ಯಾವಳಿಯನ್ನು ಕಣ್ತುಂಬಿಕೊಂಡ ಪ್ರವಾಸಿಗರು ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಯುವಕರು, ಯುವತಿಯರು, ಮಕ್ಕಳು, ನವ ಜೋಡಿಗಳು, ಗುಂಪು ಗುಂಪಾಗಿ ಜಲಧಾರೆಯನ್ನು ವೀಕ್ಷಣೆ ಮಾಡಿ ಕಣಿದು ಕುಪ್ಪಳಿಸಿದರು. ಸುತ್ತಮುತ್ತಲಿನ ಪ್ರಕೃತಿಯ ಸೊಬಗನ್ನು ಕಣ್ಣು ಹಾಗೂ ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಸಂಭ್ರಮಿಸಿದರು. ಈ ಬಾರಿ ವಾರಾಂತ್ಯದಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಬಂದಿರುವುದರಿಂದ ಎಂಜಾಯ್‌ ಮಾಡಲೆಂದೇ ಕುಟುಂಬ ಸಮೇತರಾಗಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜೋಗ ಜಲಪಾತ ವೀಕ್ಷಣೆಗೆ ಜನರು ದಾಂಗುಡಿ ಇಟ್ಟಿದ್ದಾರೆ.

Bengaluru: ಹೊಸ ವರ್ಷದ ಪಾರ್ಟಿಗೆಂದು ತಂದಿದ್ದ 2 ಕ್ವಿಂಟಲ್‌ ಡ್ರಗ್ಸ್‌ ವಶ: ಇಬ್ಬರ ಬಂಧನ

ಸಿಂಹಧಾಮದಲ್ಲೂ ಹೆಚ್ಚಿದ ಪ್ರವಾಸಿಗರು:

ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹಧಾಮದಲ್ಲಿ ಸಾಮಾನ್ಯವಾಗಿ ವಾರಾಂತ್ಯದಲ್ಲಿ ಹೆಚ್ಚಿನ ಜನ ಭೇಟಿ ನೀಡುತ್ತಾರೆ. ಆದರೆ, ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ದುಪ್ಪಟ್ಟಾಗಿದೆ. ವರ್ಷದ ಕೊನೆ ತಿಂಗಳಾದ ಡಿಸೆಂಬರ್‌ನಲ್ಲಿ ಸಿಂಹಧಾಮಕ್ಕೆ ಒಟ್ಟು 59 ಸಾವಿರ ಮಂದಿ ಭೇಟಿ ನೀಡಿದ್ದಾರೆ. ಶನಿವಾರವೂ 1700ಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದರು. ಇನ್ನೂ ಸಕ್ರೆಬೈಲು ಆನೆ ಬಿಡಾರದಲ್ಲೂ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು.

click me!