ಪತ್ನಿ ಸಾವಿನಿಂದ ಮನನೊಂದು ಚಾಲಕ ಪ್ರಾಣವನ್ನೇ ಬಿಟ್ಟ

Published : Jul 08, 2019, 08:29 AM IST
ಪತ್ನಿ ಸಾವಿನಿಂದ ಮನನೊಂದು ಚಾಲಕ ಪ್ರಾಣವನ್ನೇ ಬಿಟ್ಟ

ಸಾರಾಂಶ

ಪತ್ನಿ ಸಾವಿನಿಂದ ಮನನೊಂದು ಚಾಲಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಬೆಂಗಳೂರು [ಜು.08]: ಪತ್ನಿ ಮೃತಪಟ್ಟಿದ್ದರಿಂದ ನೊಂದಿದ್ದ ಚಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೀವನ್ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಪಿ.ಎಸ್.ಕಾಲೋನಿ ನಿವಾಸಿ ಪ್ರಕಾಶ್ (38) ಆತ್ಮಹತ್ಯೆ ಮಾಡಿಕೊಂಡ ಚಾಲಕ. ಪ್ರಕಾಶ್ ಕಾರು ಚಾಲಕರಾಗಿದ್ದು, ಆರೇಳು ವರ್ಷಗಳ ಹಿಂದೆ ವಿವಾಹವಾಗಿದ್ದರು. 

ಐದು ವರ್ಷಗಳ ಹಿಂದೆ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತ್ನಿ ಮೃತಪಟ್ಟ ಬಳಿಕ ಪ್ರಕಾಶ್ ಮದ್ಯದ ಚಟಕ್ಕೆ ಬಿದ್ದಿದ್ದರು. ತಾಯಿ ಜತೆ ಪಿ.ಎಸ್.ಕಾಲೋನಿಯಲ್ಲಿ ವಾಸವಿದ್ದ ಪ್ರಕಾಶ್ ನಿತ್ಯ ಕುಡಿದು ಬಂದ ತಾಯಿ ಜತೆ ಜಗಳವಾಡುತ್ತಿದ್ದರು. 

ಶನಿವಾರ ರಾತ್ರಿ 11  ಗಂಟೆ ಸುಮಾರಿಗೆ ತಾಯಿ ಪುತ್ರ ಪ್ರಕಾಶ್‌ನನ್ನು ಊಟ ಮಾಡಲೆಂದು ಎದ್ದೇಳಿಸಲು ಕೊಠಡಿಗೆ ತೆರಳಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಜೆ.ಬಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ.

PREV
click me!

Recommended Stories

ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!