ಯಾದಗಿರಿ:  ಕುಸಿದ ನೀರಿನ ಟ್ಯಾಂಟ್‌ಗೆ ಕಾರ್ಮಿಕ ಬಲಿ

By Web DeskFirst Published Jul 7, 2019, 10:33 PM IST
Highlights

ಕುಡಿಯುವ ನೀರಿನ ಟ್ಯಾಂಕ್ ಕುಸಿದು ಬಿದ್ದು ಕಾರ್ಮಿಕರೊಬ್ಬರು ದಾರುಣ ಸಾವಿಗೀಡಾಗಿದ್ದಾರೆ. ಯಾದಗಿರಿ ಜಿಲ್ಲೆಯ ಈ ಪ್ರಕರಣ ಒಂದು ಕ್ಷಣ ನಮಗೆ ನಾವೆ ಪ್ರಶ್ನೆ ಮಾಡಿಕೊಳ್ಳುವಂತೆ ಇದೆ.

ಯಾದಗಿರಿ[ಜು. 07]  ಕುಡಿಯುವ ನೀರಿನ ಬೃಹತ್ ಟ್ಯಾಂಕ್ ಕುಸಿದು ಕೂಲಿ ಕಾರ್ಮಿಕ ಸಾವಿಗೀಡಾಗಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೋಳೂರಿನಲ್ಲಿ ಭಾನುವಾರ ನೀರಿನ ಟ್ಯಾಂಕ್ ಕುಸಿದು ಬಿದ್ದಿದೆ.

ಪಶ್ಚಿಮ ಬಂಗಾಳ ಮೂಲದ ಮಹಮದ್ ಕಬೀರ್ (30) ಸಾವನ್ನಪ್ಪಿದ ಕಾರ್ಮಿಕ.  ಭಾನುವಾರ ಕಬೀರ್ ಮತ್ತು ಅವರ ಕೆಸಲಗಾರರು ಶಿಥಿಲಗೊಂಡಿದ್ದ ಟ್ಯಾಂಕ್ ಕೆಡವುತ್ತಿದ್ದರು. ಈ ವೇಳೆ ಏಕಾಏಕಿ ಟ್ಯಾಂಕ್ ಈ ಇಬ್ಬರೂ ಕಾರ್ಮಿಕರ ಮೇಲೆ ಕುಸಿದು ಬಿದ್ದಿದೆ.

ಮುಂಜಾಗ್ರತೆಯ ಇಲ್ಲದೆ ಬೃಹತ್ ಟ್ಯಾಂಕ್ ಕೆಡುವಲು ಗುತ್ತಿಗೆದಾರ ಮುಂದಾಗಿರುವುದೆ ಈ ಅವಘಡಕ್ಕೆ ಕಾರಣ ಎನ್ನಲಾಗುತ್ತದೆ. ಮುಂಜಾಗರುಕತೆ ವಹಿಸದೇ ಇರುವುದೇ ಅವಘಡಕ್ಕೆ ಕಾರಣ ಎನ್ನಲಾಗಿದೆ.

click me!