ಕೊರೋನಾಗೆ ದೇಣಿಗೆಯೂ ಕೊಡಲ್ಲ, ಕೊಡೋಕು ಬಿಡಲ್ಲ, ಸ್ವಾರ್ಥಿ ಶಾಸಕನ ಬಣ್ಣ ಬಯಲು..!

By Suvarna NewsFirst Published May 19, 2020, 2:18 PM IST
Highlights

ಕೊರೋನಾ ವಿರುದ್ಧ ದೇಶವೇ ಹೋರಾಡುತ್ತಿದೆ. ಆದ್ರೆ ಇಲ್ಲೊಬ್ಬ ಶಾಸಕ ಮಾತ್ರ ಕೊರೋನಾ ವಿರುದ್ಧ ಹೋರಾಟಕ್ಕೆ ದೇಣಿಗೆ ಕೊಡುತ್ತಿಲ್ಲ, ಕೊಡೋರನ್ನು ಬಿಡುತ್ತಿಲ್ಲ. ಪಿಎಂ, ಸಿಎಂ ನಿಧಿಗೆ ದೇಣಿಗೆ ನೀಡದಂತೆ ಹೇಳಿರುವ ಶಾಸಕನ ಸ್ವಾರ್ಥ ಬಣ್ಣ ಬಯಲಾಗಿದೆ.

ಬೆಂಗಳೂರು(ಮೇ 19): ಕೊರೋನಾ ವಿರುದ್ಧ ದೇಶವೇ ಹೋರಾಡುತ್ತಿದೆ. ಆದ್ರೆ ಇಲ್ಲೊಬ್ಬ ಶಾಸಕ ಮಾತ್ರ ಕೊರೋನಾ ವಿರುದ್ಧ ಹೋರಾಟಕ್ಕೆ ದೇಣಿಗೆ ಕೊಡುತ್ತಿಲ್ಲ, ಕೊಡೋರನ್ನು ಬಿಡುತ್ತಿಲ್ಲ. ಪಿಎಂ, ಸಿಎಂ ನಿಧಿಗೆ ದೇಣಿಗೆ ನೀಡದಂತೆ ಹೇಳಿರುವ ಶಾಸಕನ ಸ್ವಾರ್ಥ ಬಣ್ಣ ಬಯಲಾಗಿದೆ.

ಕೊರೊನಾ ಸಂಕಷ್ಟಕ್ಕೆ ದೇಣಿಗೆಗೆ ನೀಡುವುದಕ್ಕೆ ಕಾಂಗ್ರೆಸ್ ಶಾಸಕ ವಿರೋಧ ವ್ಯಕ್ತಪಡಿಸಿರುವ ಘಟನೆ ನಡೆದಿದೆ. PM,CM ನಿಧಿಗೆ ದೇಣಿಗೆ ನೀಡಲು ಶಾಸಕ ಜಮೀರ್ ಅಡ್ಡಗಾಲು ಹಾಕಿದ್ದು, ಸುವರ್ಣ ನ್ಯೂಸ್​ನಲ್ಲಿ ಸ್ವಾರ್ಥಿ ಶಾಸಕನ ಬಣ್ಣ ಬಯಲಾಗಿದೆ.

ಸರ್ಕಾರದ 1600 ಕೋಟಿ ಪ್ಯಾಕೇಜ್ ಬಗ್ಗೆ ಕುಮಾರಸ್ವಾಮಿ ಕಿಡಿ

ವಕ್ಫ್ ಬೋರ್ಡ್ CEO ಸುತ್ತೋಲೆಗೆ ಜಮೀರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 50 ಲಕ್ಷ ದೇಣಿಗೆ ನೀಡಬೇಕೆಂದು ವಕ್ಫ್ ಬೋರ್ಡ್ ಸುತ್ತೋಲೆಗೆ ಪ್ರತಿಕ್ರಿಯಿಸಿದ ಅವರು, ‘ಮುಸ್ಲಿಮ ದುಡ್ಡನ್ನು ಮುಸ್ಲಿಮರಿಗೇ ಖರ್ಚು ಮಾಡಿ, ವಕ್ಫ್​ ದುಡ್ಡನ್ನು ಬಡ ಮುಸ್ಲಿಮರಿಗೆ ಕೊಡಿ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್​ ಮೊಂಡುವಾದ ತಿಳಿಸಿದ್ದಾರೆ.

ಪ್ರಧಾನಿ, ಸಿಎಂ ನಿಧಿಗೆ ದುಡ್ಡು ಕೊಡುವುದೇಕೆ ಎಂದು ಜಮೀರ್ ಪ್ರಶ್ನೆ ಮಾಡಿದ್ದು, ಶಾಸಕ ತನ್ವೀರ್ ಸೇಠ್​ 20 ಲಕ್ಷ ಕೊಟ್ಟಿದ್ದಕ್ಕೆ ಕಿಡಿ ಕಾರಿದ್ದಾರೆ. ಸುಲ್ತಾನ್ ವಕ್ಫ್​ ಎಸ್ಟೇಟ್​ನಿಂದ 20 ಲಕ್ಷ ದೇಣಿಗೆ ಕೊಟ್ಟಿದ್ದ ಸೇಠ್​ ಬಗ್ಗೆ ಜಮೀರ್ ಗರಂ ಆಗಿದ್ದಾರೆ.

"

click me!