ಎಪಿಎಂಸಿ ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಿಸನಕಾಯಿ ಅತಿ ಹೆಚ್ಚು ದರಕ್ಕೆ ಮಾರಾಟವಾಗಿ ದಾಖಲೆ ಬರೆದಿದೆ.
ಗದಗ (ಡಿ.20): ಗದಗ ಎಪಿಎಂಸಿ ಮಾರುಕಟ್ಟೆಇತಿಹಾಸದಲ್ಲೇ ಮೊದಲ ಬಾರಿಗೆ ಒಣ ಮೆಣಸಿನಕಾಯಿ .41 ಸಾವಿರಕ್ಕೆ ಮಾರಾಟವಾಗುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದೆ.
ರೋಣ ತಾಲೂಕಿನ ಸವಡಿ ಗ್ರಾಮದ ರೈತ ಸುರೇಶ ಜೋಗರಡ್ಡಿ ಎನ್ನುವವರಿಗೆ ಸೇರಿದ ಡಬ್ಬಿ ಒಣ ಮೆಣಸಿನಕಾಯಿ ಬೆಳೆ ಕ್ವಿಂಟಲ್‌ಗೆ ಬರೋಬರಿ . 41,125 ಮಾರಾಟವಾಗುವ ಮೂಲಕ ಮಾರುಕಟ್ಟೆಯಲ್ಲಿಯೇ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.
undefined
ಬ್ಯಾಡಗಿ ಮೆಣಸಿನ ಕಾಯಿಗೆ ಭಾರಿ ಬೆಲೆ : ರೈತರಿಗೆ ಬಂಪರ್ ಆದಾಯ
ಏಷ್ಯಾದಲ್ಲಿ ದೊಡ್ಡ ಮೆಣಸಿನಕಾಯಿ ಮಾರುಕಟ್ಟೆಹೊಂದಿರುವ ಬ್ಯಾಡಗಿ ಎಪಿಎಂಸಿಯಲ್ಲಿ ಸೋಮವಾರ ಪ್ರತಿ ಕ್ವಿಂಟಲ್‌ಗೆ .35.555ಕ್ಕೆ ಮಾರಾಟವಾಗುವ ಮೂಲಕ ಎಲ್ಲ ದಾಖಲೆಗಳನ್ನು ಹಿಂದಿಕ್ಕಿ ನೂತನ ದಾಖಲೆ ದರವನ್ನು ಸೃಷ್ಟಿಸಿತ್ತು.
ಬಳಿಕ ಗುರುವಾರ ಬ್ಯಾಡಗಿಯಲ್ಲಿ ಆಂಧ್ರಪ್ರದೇಶದ ಅನಂತಪುರ ರೈತರೊಬ್ಬರ ಮೆಣಸಿನಕಾಯಿ 36999 ಗೆ ಮಾರಾಟವಾಗಿ ದಾಖಲೆ ಸೃಷ್ಟಿಸಿತ್ತು.