ಬ್ಯಾಡಗಿ: ಇತರರಿಗೆ ಮಾದರಿಯಾಗಬೇಕಾದ ಶಾಸಕರು ಹೀಗಾ ಮಾಡೋದು?

Suvarna News   | Asianet News
Published : Sep 10, 2021, 01:54 PM ISTUpdated : Sep 10, 2021, 02:05 PM IST
ಬ್ಯಾಡಗಿ: ಇತರರಿಗೆ ಮಾದರಿಯಾಗಬೇಕಾದ ಶಾಸಕರು ಹೀಗಾ ಮಾಡೋದು?

ಸಾರಾಂಶ

*  ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿದ ಶಾಸಕ  *  ಬೆಂಬಲಿಗರ ಕೈಯಲ್ಲಿ ಪಟಾಕಿ ಹೊಡಿಸುತ್ತ ಲುಂಗಿಯಲ್ಲಿ ತೆರಳಿದ ಶಾಸಕರು *  ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ನಡೆದ ಘಟನೆ   

ಹಾವೇರಿ(ಸೆ.10): ಜನರಿಗೆ ತಿಳಿ ಹೇಳಬೇಕಾದ ಶಾಸಕರೇ ಕೋವಿಡ್‌ ನಿಯಮಾವಳಿಗಳನ್ನು ಗಾಳಿಗೆ ತೂರಿದ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ಇಂದು(ಶುಕ್ರವಾರ) ನಡೆದಿದೆ. 

ಮೆರವಣಿಗೆ ಮೂಲಕ ಮನೆಗೆ ಗಣೇಶನನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರೇ ಬ್ಯಾಂಡ್‌ ಬಾಜ ಹಾಕಿಕೊಂಡು ರಸ್ತೆಯುದ್ದಕ್ಕೂ ಪಟಾಕಿ ಹೊಡೆದು ಸಂಭ್ರಮಾಚರಣೆ ಮಾಡಿದ್ದಾರೆ. ಈ ಮೂಲಕ ಸ್ವತಃ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿಯವರಿಂದಲೇ ಕೋವಿಡ್‌ ರೂಲ್ಸ್ ಬ್ರೇಕ್ ಆಗಿದೆ.

ರಾಜಕೀಯವಾಗಿ ಕೊರೋನಾ ಬಳಸಲು ಕಾಂಗ್ರೆಸ್‌ ಹುನ್ನಾರ: ವಿರೂಪಾಕ್ಷಪ್ಪ ಬಳ್ಳಾರಿ

ಮೆರವಣಿಗೆ ಮೂಲಕ ಮನೆಗೆ ಗಣೇಶನನ್ನು ತೆಗೆದುಕೊಂಡು ಹೋಗುವ ವೇಳೆ ಶಾಸಕರ ಬೆಂಬಲಿಗರು ಮನಬಂದಂತೆ ರಸ್ತೆಯಲ್ಲಿ ಪಟಾಕಿ ಹೊಡೆದಿದ್ದಾರೆ. ರಸ್ತೆಯಲ್ಲಿ ವಾಹನಗಳನ್ನು ಗಮನಿಸದೆಯೂ ಪಟಾಕಿ ಸಿಡಿಸಿದ್ದಾರೆ. ಸರಳ ಆಚರಣೆ ಬಿಟ್ಟು ಅದ್ಧೂರಿ ಆಚರಣೆಗೆ ಶಾಸಕರು ಮತ್ತು ಬೆಂಬಲಿಗರು ಮುಂದಾಗಿದ್ದಾರೆ. ಶಾಸಕರ ನಡೆ ಪ್ರಜ್ಞಾವಂತ ಜನರ ಕೆಂಗಣ್ಣಿಗೆ ಗುರಿಯಾಗಿದೆ.  

ಗಣೇಶೋತ್ಸವವನ್ನ ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ನಿಯಮಗಳನ್ನ ನೀಡಿದೆ. ಆದರೆ ಅದ್ಧೂರಿ ಮೆರವಣಿಗೆ ಬೇಡ ಎಂದು ಹೇಳಬೇಕಾದ ಶಾಸಕರಿಂದಲೇ ಉದ್ಧಟತನ ಮೆರೆದಿದ್ದಾರೆ. 
 

PREV
click me!

Recommended Stories

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ
ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಬಸ್ ಮಂಡ್ಯ ಬಳಿ ಪಲ್ಟಿ, 8 ಮಂದಿಗೆ ಗಾಯ