ಬಿಜೆಪಿಯ ವಿಜಯದ ನಾಗಾಲೋಟ ತಡೆಯುವ ಶಕ್ತಿ ಯಾವ ಪಕ್ಷಕ್ಕೂ ಇಲ್ಲ: ವಿಜಯೇಂದ್ರ

By Kannadaprabha News  |  First Published Apr 3, 2021, 12:24 PM IST

ಕಲ್ಯಾಣ ಕರ್ನಾಟಕದ ಅಭಿವೃದ್ಧಿಯನ್ನು ರಾಜ್ಯ ಬಿಜೆಪಿ ಸರ್ಕಾರ ಕಡೆಗಣಿಸಿಲ್ಲ| ನೀರಾವರಿ, ಶಿಕ್ಷಣ, ಮೂಲಸೌಲಭ್ಯಗಳಿಗೆ ಮುಖ್ಯಮಂತ್ರಿ ಹೆಚ್ಚಿನ ಒತ್ತು ನೀಡುತ್ತ ಬಂದಿದ್ದಾರೆ| ಯಾವುದೇ ಕಾರಣಕ್ಕೂ ಈ ಭಾಗಕ್ಕೆ ಅನ್ಯಾಯ ಆಗದಂತೆ ನೋಡಿಕೊಳ್ಳಲಾಗುತ್ತದೆ| ಪ್ರಮುಖ ಸಮಸ್ಯೆಗಳಿಗೆ ಹಂತ ಹಂತವಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಯತ್ನಿಸಲಿದೆ: ವಿಜಯೇಂದ್ರ| 


ಕುಷ್ಟಗಿ(ಏ.03):  ಸಿಡಿ ವಿಚಾರ ಉಪ ಚುನಾವಣೆ ಫಲಿತಾಂಶದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಬಿಜೆಪಿಯ ವಿಜಯದ ನಾಗಾಲೋಟ ತಡೆಯುವ ಶಕ್ತಿ ಯಾವ ಪಕ್ಷಕ್ಕೂ ಇಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಮಸ್ಕಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಪ್ರಚಾರಕ್ಕೆ ತೆರಳುವ ಮಾರ್ಗ ಮಧ್ಯೆ ಪಟ್ಟಣದಲ್ಲಿ ಗುರು​ವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿಡಿ ರಾದ್ಧಾಂತವನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಜನ ಇದರ ಹಿಂದಿನ ಷಡ್ಯಂತ್ರ ಏನು ಎಂಬುದನ್ನು ತಿಳಿಯದಷ್ಟು ದಡ್ಡರಲ್ಲ. ಭವಿಷ್ಯದಲ್ಲಿ ಸಿಡಿ ಪ್ರಕರಣದ ಸತ್ಯ ಹೊರಬರಲಿದೆ. ಅದೇ ರೀತಿ, ಮಸ್ಕಿ ಸೇರಿದಂತೆ ಉಳಿದ ವಿಧಾನಸಭೆ, ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಅಂತರದಿಂದಲೇ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್‌ ಪಕ್ಷ ಧೂಳೀಪಟವಗಲಿದೆ. ರಾಜ್ಯದಲ್ಲಿ ಹಿಂದೆ ನಡೆದ ಉಪಚುನಾವಣೆಗಳಲ್ಲೂ ಬಿಜೆಪಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆದ್ದಿತ್ತು ಎಂದರು.

Latest Videos

undefined

ಪಂಚಮಸಾಲಿಗೆ ಮೀಸ​ಲಾತಿ ನೀಡ​ದಿ​ದ್ರೆ 20 ಲಕ್ಷ ಜನ​ರಿಂದ ಹೋರಾ​ಟ: ಜಯಮೃತ್ಯುಂಜಯ ಶ್ರೀ

ಕಲ್ಯಾಣ ಕರ್ನಾಟಕದ ಅಭಿವೃದ್ಧಿಯನ್ನು ರಾಜ್ಯ ಬಿಜೆಪಿ ಸರ್ಕಾರ ಕಡೆಗಣಿಸಿಲ್ಲ ಎಂದು ಸ್ಪಷ್ಟಪಡಿಸಿದ ವಿಜಯೇಂದ್ರ, ನೀರಾವರಿ, ಶಿಕ್ಷಣ, ಮೂಲಸೌಲಭ್ಯಗಳಿಗೆ ಮುಖ್ಯಮಂತ್ರಿ ಹೆಚ್ಚಿನ ಒತ್ತು ನೀಡುತ್ತ ಬಂದಿದ್ದಾರೆ. ಯಾವುದೇ ಕಾರಣಕ್ಕೂ ಈ ಭಾಗಕ್ಕೆ ಅನ್ಯಾಯ ಆಗದಂತೆ ನೋಡಿಕೊಳ್ಳಲಾಗುತ್ತದೆ. ಪ್ರಮುಖ ಸಮಸ್ಯೆಗಳಿಗೆ ಹಂತ ಹಂತವಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಯತ್ನಿಸಲಿದೆ ಎಂದು ಹೇಳಿದರು.
 

click me!