ಬಿ.ವೈ.ವಿಜಯೇಂದ್ರ ತಮ್ಮ ಸಂಗಡಿಗರೊಂದಿಗೆ ಕೆರೂರ ಹೊರವಲಯದಲ್ಲಿರುವ ಸುಭಾಸ ಪೂಜಾರರ ತೋಟದಲ್ಲಿ ರೊಟ್ಟಿ, ಮೊಸರು ಕಾಳುಪಲ್ಲೆಯ ಜವಾರಿ ಊಟ ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆರೂರ(ಜ.03): ವಿಜಯಪುರದ ಸಿದ್ದೇಶ್ವರ ಶ್ರೀಗಳ ದರ್ಶನಕ್ಕೆ ಹೊರಟಿದ್ದ ಕರ್ನಾಟಕ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮ ಸಂಗಡಿಗರೊಂದಿಗೆ ಕೆರೂರ ಹೊರವಲಯದಲ್ಲಿರುವ ಸುಭಾಸ ಪೂಜಾರರ ತೋಟದಲ್ಲಿ ರೊಟ್ಟಿ, ಮೊಸರು ಕಾಳುಪಲ್ಲೆಯ ಜವಾರಿ ಊಟ ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಾದಾಮಿ ತಾಲೂಕಿನ ಗಡಿಯಲ್ಲಿ ಬರುವ ಸುದ್ದಿ ತಿಳಿದ ಕೆರೂರ ಪಪಂ ಸದಸ್ಯ ಪ್ರಮೋದ ಪೂಜಾರ ಹೂಲಗೇರಿಯ ಗ್ರಾಪಂ ಸದಸ್ಯ ಪ್ರದೀಪ ಪೂಜಾರ ಬರಮಡಿಕೊಂಡು ಊಟದ ಸಮಯವಾಗಿದ್ದರಿಂದ ತಮ್ಮ ತೋಟಕ್ಕೆ ಕರೆದುಕೊಂಡು ಹೋಗಿ ಭೋಜನದ ವ್ಯವಸ್ಥೆ ಮಾಡಿದರು.
undefined
BAGALKOTE: ಬಸ್ ಇಲ್ಲದೇ ಪರದಾಡುತ್ತಿರುವ ವಿದ್ಯಾರ್ಥಿಗಳು
ತೋಟದ ಬೆಳೆಗಳನ್ನು ವೀಕ್ಷಿಸಿ ಪೂಜಾರ ಕುಟುಂಬದ ವ್ಯವಸಾಯ ಅವರ ಶ್ರಮ ಕೃಷಿ ಪ್ರೇಮಕ್ಕೆ ಖುಷಿಪಟ್ಟರು. ಅವರ ಸಂಗಡ ಕರ್ನಾಟಕ ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆ ಮಹಾಮಂಡಳದ ಅಧ್ಯಕ್ಷ ಶರಣು ಬಿ.ತಳ್ಳಿಕೇರಿ ಇದ್ದರು. ಅತಿಥ್ಯ ಸ್ವೀಕರಿಸಿದ ಬಿ.ವೈ.ವಿಜಯೇಂದ್ರ ಶ್ರೀಗಳ ದರ್ಶನಕ್ಕೆ ವಿಜಯಪುರಕ್ಕೆ ತೆರಳಿದರು.