ಈ ಮೊದಲು ನಾನು ಮಾತು ಕೊಟ್ಟಂತೆ ಜನಸಂಖ್ಯೆ ಆಧಾರದ ಮೇಲೆ ಪರಿಶಿಷ್ಟಜಾತಿಗೆ ಶೇ.15 ರಿಂದ 17 ಮತ್ತು ಪರಿಶಿಷ್ಟಪಂಗಡಕ್ಕೆ ಶೇ.3 ರಿಂದ 7ಕ್ಕೆ ಹೆಚ್ಚಳ ಮಾಡಲಾಗಿದೆ. ಕೊಟ್ಟಮಾತಿನಂತೆ ನಡೆದುಕೊಂಡು ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಬಿಜೆಪಿ ಸರ್ಕಾರ ಜನರಿಗೆ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಜನಾಂಗದ ಅಭ್ಯುದಯಕ್ಕೆ ಬದ್ಧವಾಗಿದೆ: ಸಚಿವ ಬಿ.ಶ್ರೀರಾಮುಲು
ಬಾದಾಮಿ(ಜ.03): ರಾಜ್ಯದ ಸಾರಿಗೆ ಮತ್ತು ಪರಿಶಿಷ್ಟಜಾತಿ ಮತ್ತು ಪಂಗಡಗಳ ಸಚಿವ ಬಿ.ಶ್ರೀರಾಮುಲು ಸೋಮವಾರ ಸಮೀಪದ ಸುಕ್ಷೇತ್ರ ಬನಶಂಕರಿದೇವಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ರಾಜ್ಯ ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಮಹಾಂತೇಶ ಮಮದಾಪುರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ಮುಖಂಡರಾದ ಉಮೇಶ ಹಕ್ಕಿ, ಭುವನೇಶ ಪೂಜಾರ, ಬಸವರಾಜ ತಳವಾರ, ಹೊನ್ನಯ್ಯ ಹಿರೇಮಠ, ಪರಸಪ್ಪ ನಾಯ್ಕರ ಸೇರಿದಂತೆ ಇತರರು ಹಾಜರಿದ್ದರು.
ಗುಳೇದಗುಡ್ಡ ನಗರದಿಂದ ಬಾದಾಮಿಗೆ ಸಚಿವ ಬಿ.ಶ್ರೀರಾಮುಲು ಆಗಮಿಸಿದಾಗ ಮುಖ್ಯರಸ್ತೆಯಲ್ಲಿ ಸಚಿವ ರಾಮುಲು ಅವರಿಗೆ ಭವ್ಯವಾದ ಸ್ವಾಗತ ಕೋರಿ ಹೂವಿನ ಮಳೆಯನ್ನು ಸುರಿಸಿದರು. ನಂತರ ವೀರ ಸಿಂಧೂರ ಲಕ್ಷ್ಮಣ ಮತ್ತು ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಪಟ್ಟಣದ ತಾಲೂಕು ಪಂಚಾಯತಿ ಸಭಾಭವನದಲ್ಲಿ ಸಚಿವ ರಾಮುಲು ಅವರನ್ನು ಎಸ್ಸಿ, ಎಸ್ಟಿಸಮಾಜದವರಿಂದ ಸನ್ಮಾನಿಸಲಾಯಿತು.
undefined
ಬಾದಾಮಿ: ತಾಯಿ ಬನಶಂಕರಿದೇವಿ ಜಾತ್ರೆ ಯಶಸ್ವಿಗೊಳಿಸಿ, ಡಿಸಿ ಸುನೀಲಕುಮಾರ
ಈ ಮೊದಲು ನಾನು ಮಾತು ಕೊಟ್ಟಂತೆ ಜನಸಂಖ್ಯೆ ಆಧಾರದ ಮೇಲೆ ಪರಿಶಿಷ್ಟಜಾತಿಗೆ ಶೇ.15 ರಿಂದ 17 ಮತ್ತು ಪರಿಶಿಷ್ಟಪಂಗಡಕ್ಕೆ ಶೇ.3 ರಿಂದ 7ಕ್ಕೆ ಹೆಚ್ಚಳ ಮಾಡಲಾಗಿದೆ. ಕೊಟ್ಟಮಾತಿನಂತೆ ನಡೆದುಕೊಂಡು ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಬಿಜೆಪಿ ಸರ್ಕಾರ ಜನರಿಗೆ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಜನಾಂಗದ ಅಭ್ಯುದಯಕ್ಕೆ ಬದ್ಧವಾಗಿದೆ ಅಂತ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದರು.
ಬಿಜೆಪಿ ಗೆಲುವು: ಶ್ರೀರಾಮುಲು
ಬಾಗಲಕೋಟೆ: ಕಳೆದ ಬಾರಿ ಬಾದಾಮಿ ಕ್ಷೇತ್ರದಿಂದ ಕೊನೆ ಘಳಿಗೆಯಲ್ಲಿ ಸ್ಪರ್ಧಿಸಿದ್ದೆ. ಆದರೆ, ಬಾದಾಮಿಯಲ್ಲಿ ಸೋಲುಂಟಾಯಿತು. ಆದರೆ, ಈ ಬಾರಿ ಅಲ್ಲಿಯೂ ಗೆಲುವು ಕಾಣುತ್ತೇವೆ ಎಂದು ಸಚಿವ ಶ್ರೀರಾಮಲು ವಿಶ್ವಾಸ ವ್ಯಕ್ತಪಡಿಸಿದರು.
ಗುಳೇದಗುಡ್ಡದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ ಅನ್ನೋ ವಿಶ್ವಾಸ ನನಗಿದೆ. ಏಕೆಂದರೇ ನಮ್ಮ ಪಕ್ಷದ ತತ್ವ ಸಿದ್ಧಾಂತಗಳನ್ನು ನಂಬಿ ಜನರು ಮತ ಕೊಡುತ್ತಾರೆ. ಜನರು ನಮ್ಮ ಜೊತೆಯಲ್ಲಿ ಇದ್ದಾರೆ. ನಮ್ಮ ಪರವಾಗಿ ಕೆಲಸ ಮಾಡುತ್ತಾರೆ. ಈ ಬಾರಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ ಪ್ರಚಾರ ಮಾಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದರು. ಶಾಸಕ ಲಿಂಬಾವಳಿ ಹೆಸರು ಬರೆದಿಟ್ಟು ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ಈ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ನಾನು ತಿಳಿದುಕೊಂಡು ಉತ್ತರಿಸುವೆ ಎಂದು ಜಾರಿಕೊಂಡರು.