ರಾಮನಗರ (ಅ.03): ಹಾನಗಲ್ (Hanagal) ಮತ್ತು ಸಿಂಧಗಿ (Sindagi) ಕ್ಷೇತ್ರ ಉಪಚುನಾವಣೆ (By Election) ಫಲಿತಾಂಶ ಜೆಡಿಎಸ್ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅದರಿಂದ ಧೃತಿ ಗೆಡುವುದೂ ಇಲ್ಲ ಎಂದು ಮಾಗಡಿ ಕ್ಷೇತ್ರ ಶಾಸಕ ಎ.ಮಂಜುನಾಥ್ (MLA A Manjunath) ಪ್ರತಿಕ್ರಿಯೆ ನೀಡಿದರು.
ಮಾಗಡಿ (magadi) ಕ್ಷೇತ್ರ ವ್ಯಾಪ್ತಿಯ ಕಣ್ವ ಗ್ರಾಮದಲ್ಲಿ ಸಿಸಿ ರಸ್ತೆ , ಕೂಟಗಲ್ ಗ್ರಾಮದಲ್ಲಿ ನಾಡ ಕಚೇರಿ ಕಟ್ಟಡ ನಿರ್ಮಾಣ ಹಾಗೂ ಗೊಲ್ಲರದೊಡ್ಡಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿಂದಗಿ, ಹಾನಗಲ್ ಬೈ ಎಲೆಕ್ಷನ್ ರಿಸಲ್ಟ್: ಬೊಮ್ಮಾಯಿ ಹನಿಮೂನ್ ಅವಧಿ ಕೊನೆಗೊಂಡಿದೆ ಎಂದ ಸಿದ್ದು
ಉಪ ಚುನಾವಣೆಗಳ ಫಲಿತಾಂಶ (By election Result) ಜೆಡಿಎಸ್ ಸಂಘಟನೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಫಲಿತಾಂಶ ಎಚ್ಚರಿಕೆಯಾಗಿದ್ದು, ಪರಾಜಿತಗೊಂಡಿರುವ ಕ್ಷೇತ್ರಗಳಲ್ಲಿರುವ ಜೆಡಿಎಸ್ (JDS) ಕಾರ್ಯಪಡೆಯನ್ನು ಚುರುಕುಗೊಳಿಸಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.
ಹಾನಗಲ್ (Hanagal) ಕ್ಷೇತ್ರದಲ್ಲಿ ಜೆಡಿಎಸ್ (JDS) ಸಂಘಟನೆ ಇರಲಿಲ್ಲ. ಇನ್ನು ಸಿಂಧಗಿ ಕ್ಷೇತ್ರದಲ್ಲಿ ಶಾಸಕರಾಗಿದ್ದವರ ಪುತ್ರ ಕಾಂಗ್ರೆಸ್ (Congress) ಸೇರ್ಪಡೆಗೊಂಡು ಅಭ್ಯರ್ಥಿಯಾಗಿದ್ದರು. ಅವರಿಗೂ ಉಪಚುನಾವಣೆಯಲ್ಲಿ ಸೋಲಾಗಿದೆ. ಜೆಡಿಎಸ್ ಹೊಸ ಮುಖಕ್ಕೆ ಅವಕಾಶ ನೀಡಿ ಕಣಕ್ಕಿಳಿಸಿತ್ತು.
News Hour; ಉಪಚುನಾವಣೆ ಫಲಿತಾಂಶದ ಹಿಂದಿನ ಲೆಕ್ಕಚಾರಗಳು!
ಆದರೆ, ಸಿಂಧಗಿ ಕ್ಷೇತ್ರದ ಜನರು ಬಾಕಿಯಿರುವ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ (CM Basavaraja bommai) ಭರವಸೆ ನೀಡಿರುವುದರಿಂದ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವ ಮಾತು ಹೇಳಿದ್ದರು. ಅದರಂತೆ ಆ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ದೊರಕಿದೆ ಎಂದು ಹೇಳಿದರು.
ಸಾರ್ವತ್ರಿಕ ಚುನಾವಣೆ ಹಾಗೂ ಉಪಚುನಾವಣೆಗಳಿಗೆ (Election) ಸಾಕಷ್ಟುವ್ಯತ್ಯಾಸವಿದೆ. ಅಧಿಕಾರದಲ್ಲಿರುವ ಪಕ್ಷದ ಅಭ್ಯರ್ಥಿಗಳು ಉಪಚುನಾವಣೆಗಳಲ್ಲಿ (By Election) ಗೆಲುವು ಸಾಧಿಸುವುದು ಸಹಜ. ಈ ಫಲಿತಾಂಶದಿಂದ ಜೆಡಿಎಸ್ ಧೃತಿಗೆಡುವುದಿಲ್ಲ. ಬದಲಿಗೆ ಪಕ್ಷವನ್ನು ಮತ್ತಷ್ಟುಸದೃಢಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿದೆ ಎಂದರು.
123 ಮಿಷನ್‌ಗೆ ಕಾರಾರಯಗಾರ: ಜನತಾ ಪರ್ವ ಹಾಗೂ ಜೆಡಿಎಸ್ ಮಿಷನ್ 123 ಕಾರ್ಯಾಗಾರವನ್ನು 2023ರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಡೆಸಲಾಗಿತ್ತು. ಆ ಚುನಾವಣೆಯಲ್ಲಿ ಕ್ಷೇತ್ರದ ಜನರ ಬಳಿಗೆ ಹೇಗೆ ತೆರಳಬೇಕು. ಪಕ್ಷದ ಕಾರ್ಯಕ್ರಮಗಳನ್ನು ಹೇಗೆ ಮನವರಿಕೆ ಮಾಡಿಕೊಟ್ಟು ಮತದಾರರ ಮನ ಗೆಲ್ಲುವ ಕುರಿತು ಅಭ್ಯರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಮಂಜುನಾಥ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಳೆದ ಚುನಾವಣೆ ಸಂದರ್ಭದಲ್ಲಿ ಈ ಭಾಗದ ಮುಖಂಡರು ಅನೇಕ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದರು. ಅವುಗಳಿಗೆ ಹಂತ ಹಂತವಾಗಿ ಪರಿಹಾರ ಕಲ್ಪಿಸುವ ಕೆಲಸ ಮಾಡುತ್ತಿದ್ದೇನೆ. ಕಣ್ವದಿಂದ ಕೆರೆ ತುಂಬಿಸುವ ಯೋಜನೆಗೆ ಪೈಪ್‌ಲೈನ್ ಅಳವಡಿಸುವ ಕಾರ್ಯ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.
ತಾಪಂ ಮಾಜಿ ಅಧ್ಯಕ್ಷೆ ಸುಮಿತ್ರಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ಮಹದೇವಯ್ಯ,ಹುಲ್ಲೂರಮ್ಮ, ಜೆಡಿಎಸ್ ಮುಖಂಡರಾದ ಮಹೇಶ್ , ದೇವರಾಜು, ಅಜಯ್ ದೇವೇಗೌಡ, ಅರೇಹಳ್ಳಿ ಮೂರ್ತಿ, ರೈತಸಂಘ ಮುಖಂಡ ಕುಮಾರಸ್ವಾಮಿ ಮತ್ತಿತರರು ಹಾಜರಿದ್ದರು.
ಜೆಡಿಎಸ್ ಸೋಲು
18ನೇ ಸುತ್ತಿನ ಮತ ಎಣಿಕೆ ಬಳಿಕದ ಬಲಾಬಲದ ನಂತರ 7325-ಮತಗಳಿಂದ ಕಾಂಗ್ರೆಸ್(Congress) ಮುನ್ನಡೆ ಸಾಧಿಸಿದೆ. ಬಿಜೆಪಿ: 75999 ಮತಗಳನ್ನು ಗಳಿಸಿದರೆ, ಕಾಂಗ್ರೆಸ್: 83324 ಹಾಗೂ ಜೆಡಿಎಸ್ 866 ಮತ ಗಳಿಸಿದೆ. ಏನೇನೋ ಕಸರತ್ತು ಮಾಡಿದರೂ ಜೆಡಿಎಸ್ ಸಾವಿರ ಮತ ಪಡೆಯುವುದಕ್ಕೂ ಸಾಧ್ಯವಾಗಿಲ್ಲ.
ಬಹಳಷ್ಟು ಪ್ರಯತ್ನ, ಪ್ರಚಾರ ಮಾಡಿಯೂ ಮತ ಪಡೆಯೋಕೆ ಜೆಡಿಎಸ್(JDS) ವಿಫಲವಾಗಿದ್ದು ಹೇಗೆ ಎಂಬುವುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ. ಗೌಡರು, ಮಕ್ಕಳು ಹಾಗೂ ಮೊಮ್ಮಕ್ಕಳು ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿ ಭರ್ಜರಿ ಪ್ರಚಾರ ಮಾಡಿದ್ದರು. ಆದರೆ ಸಾವಿರ ಮತವೂ ಬರದಿರುವುದು ಅಚ್ಚರಿಗೆ ಕಾರಣವಾಗಿದೆ.
ತಲೆಕೆಳಗಾದ ದಳಪತಿಗಳ ಲೆಕ್ಕಾಚಾರ:
ಉಪಚುನಾವಣೆಯಲ್ಲಿ(Election) ಮುಸ್ಲಿಂ ಅಸ್ತ್ರ ಪ್ರಯೋಗಿಸಿದ್ದ ದಳಪತಿಗಳು ಮತಗಳನ್ನು ಸೆಳೆಯುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದರು. ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟು ಅದೇ ಸಮುದಾಯದ ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸಿದ್ದರು. ಸಿಂದಗಿ ಹಾಗೂ ಹಾನಗಲ್ ಎರಡೂ ಕ್ಷೇತ್ರಗಳೆರಡಲ್ಲೂ ಮುಸ್ಲಿಂ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದ ದಳಪತಿಗಳು ಹಾಗಿದ್ದರೂ ಮತಗಳನ್ನು ಪಡೆಯೋಕೆ ವಿಫಲರಾಗಿದ್ದಾರೆ.