ಬೆಂಗಳೂರು: ಶಿವಾನಂದ ಸರ್ಕಲ್ To ರೇಸ್ ಕೋರ್ಸ್ ರಸ್ತೆ ಬಂದ್

Published : Jun 04, 2019, 10:14 PM ISTUpdated : Jun 04, 2019, 10:16 PM IST
ಬೆಂಗಳೂರು: ಶಿವಾನಂದ ಸರ್ಕಲ್ To ರೇಸ್ ಕೋರ್ಸ್ ರಸ್ತೆ ಬಂದ್

ಸಾರಾಂಶ

ಬೆಂಗಳೂರಿಗರಿಗೆ ತಟ್ಟಲಿದೆ ಟ್ರಾಫಿಕ್ ಬಿಸಿ|  ಶಿವಾನಂದ ವೃತ್ತದಿಂದ ರೇಸ್ ಕೋರ್ಸ್ ರಸ್ತೆ 6 ದಿನ ಬಂದ್ | ವಾಹನ ಸವಾರರು ಪರ್ಯಾಯ ರೂಟ್ ಕಂಡುಕೊಳ್ಳುವಂತೆ ಪ್ರಕಟಣೆ ಹೊರಡಿಸಿದ ಬಿಬಿಎಂಪಿ

ಬೆಂಗಳೂರು, [ಜೂನ್.04]: ಬೆಂಗಳೂರಿನ ಶಿವಾನಂದ ವೃತ್ತದಿಂದ ರೇಸ್ ಕೋರ್ಸ್ ವರೆಗಿನ ರಸ್ತೆ 6 ದಿನಗಳ ಕಾಲ ಬಂದ್ ಆಗಲಿದ್ದು, ವಾಹನ ಸವಾರರು ಪರ್ಯಾಯ ಮಾರ್ಗ ಕಂಡುಕೊಳ್ಳಬೇಕೆಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ[BWSSB] ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ ಶಿವಾನಂದ ವೃತ್ತದಿಂದ ರೇಸ್ ಕೋರ್ಸ್ ರಸ್ತೆ ಬಂದ್ ಆಗಲಿದೆ.

ನಾಳೆ ಅಂದರೆ ದಿನಾಂಕ 5-6-19 ರಿಂದ 10-6-19 ರವರೆಗೆ 6 ದಿನಗಳ ಕಾಲ ಶಿವಾನಂದ ವೃತ್ತದಿಂದ ರೇಸ್ ಕೋರ್ಸ್ ರಸ್ತೆ ವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಆದ್ದರಿಂದ ಶಿವಾನಂದ ವೃತ್ತದಿಂದ ರೇಸ್ ಕೋರ್ಸ್ ರಸ್ತೆ ಮೂಲಕ ಸಂಚರಿಸುವ ವಾಹನ ಸವಾರರು ಪರ್ಯಾಯ ಮಾರ್ಗ ಕಂಡುಕೊಳ್ಳುವುದು ಒಳಿತು.

PREV
click me!

Recommended Stories

ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಬೆಂಗಳೂರು ಮನೆಯಿಂದ ಡೆಲಿವರಿ ಬಾಯ್ಸ್ ಕಳ್ಳತನ!
ನನಗೆ ಎಚ್ಚರಿಕೆ ಕೊಡೋ ಮುನ್ನ ಹುಷಾರ್, ಕಾಮನ್‌ಸೆನ್ಸ್ ಇಟ್ಟುಕೊಂಡು ಡೀಲ್ ಮಾಡಿ, ಪತ್ರ ಬರೆದವನಿಗೆ ಡಿಕೆಶಿ ವಾರ್ನಿಂಗ್!