ಕಲಬುರಗಿ: ಅನೈತಿಕ ಸಂಬಂಧ, ಕೋಣೆಯಲ್ಲಿ ಸಿಕ್ಕಿಬಿದ್ದ ಜೋಡಿ ಕೊಲೆ

Published : Jun 04, 2019, 09:13 PM IST
ಕಲಬುರಗಿ: ಅನೈತಿಕ ಸಂಬಂಧ, ಕೋಣೆಯಲ್ಲಿ ಸಿಕ್ಕಿಬಿದ್ದ ಜೋಡಿ ಕೊಲೆ

ಸಾರಾಂಶ

ಮಾರಕಾಸ್ತ್ರಗಳಿಂದ ಹೊಡೆದು ಜೋಡಿ ಕೊಲೆ|  ಅನೈತಿಕ ಸಂಬಂಧ ಹೊಂದಿದ್ದ ಜೋಡಿ ಕೊಲೆ| ಕಲಬುರಗಿ ತಾಲೂಕಿನ ಬೆಳಗುಂಪಾ ಗ್ರಾಮದಲ್ಲಿ ಘಟನೆ|

ಕಲಬುರಗಿ, [ಜೂನ್.04]: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿಯ ಬೆಳಗುಂಪಾ ಗ್ರಾಮದಲ್ಲಿ ನಡೆದಿದೆ.

ಅಡೆಮ್ಮಾ [30], ಶಂಕರ್ ಮ್ಯಾಕೇರಿ [40] ಕೊಲೆಯಾದವರು. ಅಡೆಮ್ಮಾ ಮತ್ತು ಶಂಕರ್ ಮ್ಯಾಕೇರಿ ಅನೈತಿಕ ಸಂಬಂಧ ಹೊಂದಿದ್ದರು. ಇಂದು [ಮಂಗಳವಾರ] ಇಬ್ಬರು ಕೋಣೆಯಲ್ಲಿ ಸಿಕ್ಕಿಬಿದ್ದಾಗ ಅಡೆಮ್ಮಾ ಸಂಬಂಧಿಗಳು ಕೊಲೆ ಮಾಡಿದ್ದಾರೆ.

ಶಂಕರ್ ಮ್ಯಾಕೇರಿ ಅಡೆಮ್ಮಾ ಮನೆಗೆ ಹೋಗಿದ್ದಾನೆ. ಈ ವಿಷಯ ವಿಷಯ ತಿಳಿದ ಅಡೆಮ್ಮಾ ಸಂಬಂಧಿಗಳು ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಫರಹತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

PREV
click me!

Recommended Stories

ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಬೆಂಗಳೂರು ಮನೆಯಿಂದ ಡೆಲಿವರಿ ಬಾಯ್ಸ್ ಕಳ್ಳತನ!
ನನಗೆ ಎಚ್ಚರಿಕೆ ಕೊಡೋ ಮುನ್ನ ಹುಷಾರ್, ಕಾಮನ್‌ಸೆನ್ಸ್ ಇಟ್ಟುಕೊಂಡು ಡೀಲ್ ಮಾಡಿ, ಪತ್ರ ಬರೆದವನಿಗೆ ಡಿಕೆಶಿ ವಾರ್ನಿಂಗ್!