ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಯಾದ ದಿನದಿಂದ ಖಾಸಗಿ ಬಸ್‌ಗಳ ಕಲೆಕ್ಷನ್ ಕಡಿಮೆಯಾಗಿ ಮಾಲೀಕರು ಬೀದಿಗೆ ಬೀಳುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಖಾಸಗಿ ಬಸ್ ಮಾಲೀಕರು ಗೋಳಾಡುತ್ತಿದ್ದಾರೆ.
ಹಿರಿಯೂರು (ಜೂ.29): ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಯಾದ ದಿನದಿಂದ ಖಾಸಗಿ ಬಸ್‌ಗಳ ಕಲೆಕ್ಷನ್ ಕಡಿಮೆಯಾಗಿ ಮಾಲೀಕರು ಬೀದಿಗೆ ಬೀಳುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಖಾಸಗಿ ಬಸ್ ಮಾಲೀಕರು ಗೋಳಾಡುತ್ತಿದ್ದಾರೆ.
ತಾಲೂಕಿನಲ್ಲಿ ಸುಮಾರು 40ರಿಂದ 50 ಬಸ್‌ಗಳಿದ್ದು, ಅವುಗಳ ಮಾಲೀಕರು ಮತ್ತು ಕಾರ್ಮಿಕರು ಶಕ್ತಿ ಯೋಜನೆಯ ಹೊಡೆತಕ್ಕೆ ಸಿಕ್ಕು ನಲುಗಿ ಹೋಗಿದ್ದಾರೆ. ಪ್ರತಿ ದಿನ ಡೀಸೆಲ್‌ಗೆ ಕೈಯಿಂದ ಸಾವಿರ, ಎರಡು ಸಾವಿರ ಹಾಕಿ ಬಸ್ ಓಡಿಸುತ್ತಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರೆದರೆ ನಮ್ಮ ಪಾಡೇನು ಎಂದು ತಾಲೂಕಿನ ಬಸ್ ಮಾಲೀಕ ರಾಘವೇಂದ್ರ ಪ್ರಶ್ನಿಸುತ್ತಾರೆ.
undefined
ಶಕ್ತಿ ಯೋಜನೆ: ಮಹಿಳೆಯರ ಉಚಿತ ಪ್ರಯಾಣ ವಾಪಸ್ ಪಡೆಯಿರಿ, ಇಲ್ಲವೇ ಬಸ್‌ಗಳ ಸಂಖ್ಯೆ ಹೆಚ್ಚಿಸಿ
ಕಾರ್ಮಿಕರ ಕೊರತೆ, ತೆರಿಗೆ, ವಿಮೆ, ಪರವಾನಗಿ ನವೀಕರಣ, ದುಬಾರಿ ಟೈರ್‌ಗಳ ಸಂಕಷ್ಟದ ಜೊತೆಗೆ ಹಳ್ಳಿ ಹಳ್ಳಿಗೂ ಬಸ್ ಓಡಿಸುತ್ತಿದ್ದು, ಇದೀಗ ಮಹಿಳೆಯರು ಖಾಸಗಿ ಬಸ್‌ಗಳತ್ತ ಮುಖ ಮಾಡದೇ ಇರುವುದು ಇನ್ನೊಂದು ಬಲವಾದ ಹೊಡೆತ ಕೊಟ್ಟಂತಾಗಿದೆ. ಈ ವೃತ್ತಿ ಬಿಟ್ಟು ಬೇರೆ ವೃತ್ತಿ ಗೊತ್ತಿಲ್ಲದ ನಾವು ಹೊಸ ಹೊಸ ಬಸ್‌ಗಳನ್ನು ಖರೀದಿಸಿದ್ದೇವೆ. ಅವುಗಳ ಕಂತು ಕಟ್ಟಬೇಕು. ಬಸ್‌ಗಳ ಬಿಡಿ ಭಾಗಗಳು ಸಹ ದುಬಾರಿಯಾಗಿದ್ದು, ಬಸ್‌ಗಳ ಆದಾಯವನ್ನೇ ನಂಬಿಕೊಂಡಿರುವ ತಾಲೂಕಿನ ನೂರಾರು ಕುಟುಂಬಗಳಿಗೆ ದಿಕ್ಕು ತೋಚದಂತಾಗಿದೆ. ತಾಲೂಕಿನವು ಸೇರಿದಂತೆ ಹೊರಗಡೆಯಿಂದ ತಾಲೂಕಿಗೆ ಬರುವ ನೂರಾರು ಬಸ್‌ಗಳು ಖಾಲಿ ಖಾಲಿ ಕಾಣುತ್ತಿದ್ದು ಚಾಲಕರು, ನಿರ್ವಾಹಕರು, ಕ್ಲೀನರ್‌ಗಳು, ನಿಲ್ದಾಣಗಳ ಏಜೆಂಟರು ಮುಂದೇನು ಎಂಬ ಸ್ಥಿತಿಯಲ್ಲಿದ್ದಾರೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಬಸ್‌ಗಳ ಪ್ರಮಾಣ ಕಡಿಮೆ ಇದ್ದರೂ ಸಹ ಇದೀಗ ಇರುವ ಸರ್ಕಾರಿ ಬಸ್‌ಗಳಿಗೇ ಕಾದು ಪ್ರಯಾಣ ಮಾಡುತ್ತಿದ್ದಾರೆ. ಕಲೆಕ್ಷನ್ ಗಣನೀಯ ಮಟ್ಟದಲ್ಲಿ ಕುಸಿದಿದ್ದು, ಸುಮಾರು 40-50 ವರ್ಷದಿಂದ ಖಾಸಗಿ ಬಸ್‌ಗಳನ್ನು ಓಡಿಸುತ್ತಾ ಬಂದಿರುವವರನ್ನು ಸಹ ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಬಸ್ ಮಾಲೀಕರು ಮನವಿ ಮಾಡಿದ್ದಾರೆ.
ರಾಮನಗರದಲ್ಲಿ ಶಕ್ತಿ ಯೋಜನೆ ಲಾಭ ಪಡೆದ 1.35 ಲಕ್ಷ ಮಹಿಳೆಯರು: ನಾರಿ ಶಕ್ತಿಯ ಎದುರು ಖಾಸಗಿ ಬಸ್‌ಗಳು ನಿಶ್ಯಕ್ತಿ