Lokayukta raids: ನಿರ್ಮಿತಿ ಕೇಂದ್ರದ ಗಂಗಾಧರ್‌ ಬಳಿ ₹3.75 ಕೋಟಿ ಆಸ್ತಿ ಪತ್ತೆ!

By Kannadaprabha NewsFirst Published Jun 29, 2023, 4:16 AM IST
Highlights

ನಿರ್ಮಿತಿ ಕೇಂದ್ರದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಯೋಜನಾ ವ್ಯವಸ್ಥಾಪಕ ವೈ. ಗಂಗಾಧರ್‌ ಮನೆ, ಕಚೇರಿ ಮೇಲೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಸುಮಾರು 3.75 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ.

ಚಿಕ್ಕಮಗಳೂರು (ಜೂ.29): ನಿರ್ಮಿತಿ ಕೇಂದ್ರದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಯೋಜನಾ ವ್ಯವಸ್ಥಾಪಕ ವೈ. ಗಂಗಾಧರ್‌ ಮನೆ, ಕಚೇರಿ ಮೇಲೆ ಬುಧವಾರ ಲೋಕಾಯುಕ್ತ ಅಧಿಕಾರಿ(Karnataka Lokayukta )ಗಳು ದಾಳಿ ನಡೆಸಿ ಸುಮಾರು 3.75 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ.

ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್‌, ಇನ್ಸ್‌ಸ್ಪೆಕ್ಟರ್‌ ಅನಿಲ್‌ ರಾಥೋಡ್‌, ಮಲ್ಲಿಕಾರ್ಜುನ್‌, ಶಿಲ್ಪಾ ಬಾಲು ಸೇರಿದಂತೆ 50ಕ್ಕೂ ಹೆಚ್ಚು ಸಿಬ್ಬಂದಿ ಗಂಗಾಧರ್‌ ಮನೆ, ಕಚೇರಿ ಹಾಗೂ ಅವರಿಗೆ ಸೇರಿದೆ ಎನ್ನಲಾದ ರೆಸಾರ್ಚ್‌, ಪೆಟ್ರೋಲ್‌ ಬಂಕ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆಂದು ಬಂದ ದೂರಿನನ್ವಯ ಗಂಗಾಧರ್‌ ಅವರ ಜಯನಗರ ಬಡಾವಣೆಯಲ್ಲಿರುವ ಮನೆ, ರಾಮನಹಳ್ಳಿಯಲ್ಲಿರುವ ಪೆಟ್ರೋಲ್‌ ಬಂಕ್‌, ಗಂಗಾಧರ್‌ ಕೆಲಸ ಮಾಡುತ್ತಿರುವ ನಿರ್ಮಿತಿ ಕೇಂದ್ರದ ಕಚೇರಿ ಮೇಲೆ ದಾಳಿ ಮಾಡಲಾಗಿದ್ದು, ಈ ಸಂದರ್ಭದಲ್ಲಿ 3.75 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ ಆಗಿದೆ.

Latest Videos

ಕೋಟ್ಯಂತರ ರೂ ಅಕ್ರಮ ಆಸ್ತಿ ಗಳಿಸಿ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ Tahsildar Ajith Rai ಯಾರು, ಹಿನ್ನೆಲೆ ಏನು?

ದಾಳಿ ಸಂದರ್ಭದಲ್ಲಿ ನಗರದಲ್ಲಿ 16 ನಿವೇಶನ, ಅಲ್ಲಂಪುರ ಬಳಿ ರೆಸಾರ್ಚ್‌, ಪತ್ನಿ ಹೆಸರಿನಲ್ಲಿ ರಾಮನಹಳ್ಳಿಯಲ್ಲಿ ಪೆಟ್ರೋಲ್‌ ಬಂಕ್‌, ನಗರದ ಅರವಿಂದನಗರದಲ್ಲಿ ಹಾಗೂ ಜ¿ ು ನಗರದಲ್ಲಿ 2 ಮನೆ ಇರುವುದು ಪತ್ತೆ ಹಚ್ಚಲಾಗಿದೆ. ಇದರ ಜತೆಗೆ ಚಿನ್ನಾಭರಣ, ಬೆಳ್ಳಿಯ ವಸ್ತುಗಳ ಪರಿಶೀಲನಾ ಕಾರ್ಯ ಸಂಜೆ ನಂತರವೂ ಮುಂದುವರೆದಿತ್ತು.

ಹಲವೆಡೆ ಹಣ ಹೂಡಿಕೆ

ನಿರ್ಮಿತಿ ಕೇಂದ್ರ, ಇದು, ಸರ್ಕಾರಿ ಸ್ವಾಮ್ಯದ ಕಚೇರಿ. ಸರ್ಕಾರಿ ಕಟ್ಟಡ ಹಾಗೂ ಇತರೆ ಕಾಮಗಾರಿಗಳನ್ನು ನಿರ್ವಹಿಸುವ ಇಲಾಖೆ. ಇಲ್ಲಿಂದ ಗುತ್ತಿಗೆದಾರರು ನೇರವಾಗಿ ಕಾಮಗಾರಿ ಪಡೆದು ಕೊಳ್ಳಲು ಅವಕಾಶ ಇದೆ. ಅಂದರೆ, ರಾಜ್ಯದಲ್ಲಿ ಯಾವ ಸರ್ಕಾರ ಇರುತ್ತದೆಯೋ, ಸ್ಥಳೀಯವಾಗಿ ಶಾಸಕರಿಗೆ ಮಣೆ ಹಾಕುವ ಕೆಲಸ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಮಾಡುತ್ತಾರೆ. ಗಂಗಾಧರ್‌ ಅವರು ಚಿಕ್ಕಮಗಳೂರಿನ ನಿರ್ಮಿತಿ ಕೇಂದ್ರದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಯೋಜನಾ ವ್ಯವಸ್ಥಾಪಕರಾಗಿದ್ದ ರಾಮಕೃಷ್ಣೇಗೌಡ ಅವರು ಹಾಸನಕ್ಕೆ ವರ್ಗಾವಣೆಗೊಂಡ ನಂತರ 2019ರಲ್ಲಿ ಗಂಗಾಧರ್‌ ಪ್ರಭಾರಿಯಾಗಿ ಯೋಜನಾ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಂಡಿದ್ದರು.

 

ತುಮಕೂರಿನಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ರೇಡ್, 13 ಅಧಿಕಾರಿಗಳ ತಂಡದಿಂದ ಪರಿಶೀಲನೆ

ಚಿಕ್ಕಮಗಳೂರಿನಲ್ಲಿ ಅವರು ರಿಯಲ್‌ ಎಸ್ಟೇಟ್‌ ಹಾಗೂ ಇತರೆ ದಂಧೆ ನಡೆಸುತ್ತಿರುವವರೊಂದಿಗೆ ನೇರವಾದ ಸಂಪರ್ಕ ಹೊಂದಿದ್ದು, ಹಲವೆಡೆ ಹಣ ಹೂಡಿಕೆ ಮಾಡಿರುವುದು ಲೋಕಾಯುಕ್ತ ದಾಳಿ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಪತ್ನಿ ಹೆಸರಿನಲ್ಲಿ ರಾಮನಹಳ್ಳಿ ಬಳಿ ಪೆಟ್ರೋಲ್‌ ಬಂಕ್‌ ನಡೆಸುತ್ತಿದ್ದರೆ, ಅಲ್ಲಂಪುರಕ್ಕೆ ಹೋಗುವ ಮಾರ್ಗದಲ್ಲಿ ನೂತನವಾಗಿ ತೆರೆಯಲಾಗಿರುವ ರೆಸಾರ್ಚ್‌ನಲ್ಲೂ ಗಂಗಾಧರ್‌ ಹಣ ಹೂಡಿದ್ದರು ಎಂದು ಹೇಳಲಾಗುತ್ತಿದೆ. ಒಂದೇ ಕಡೆಯಲ್ಲಿ ಹಲವು ವರ್ಷಗಳಿಂದ ಅಧಿಕಾರಿ ಬೇರೂ ಬಿಟ್ಟರೆ ಇಷ್ಟೇಲ್ಲಾ ಆಸ್ತಿ ಮಾಡ್ತಾರಾ ಎಂಬ ಪ್ರಶ್ನೆ ಮೂಡಿದೆ.

click me!