ಶಿರಾಡಿ ಘಾಟ್‌ನಲ್ಲಿ ಸ್ಟೇರಿಂಗ್ ತುಂಡಾಗಿ ಮಗುಚಿದ ಮದುವೆ ಬಸ್

Kannadaprabha News   | Asianet News
Published : Feb 17, 2020, 10:20 AM IST
ಶಿರಾಡಿ ಘಾಟ್‌ನಲ್ಲಿ ಸ್ಟೇರಿಂಗ್ ತುಂಡಾಗಿ ಮಗುಚಿದ ಮದುವೆ ಬಸ್

ಸಾರಾಂಶ

ಉಪ್ಪಿನಂಗಡಿಯ ಪೊಲೀಸ್‌ ಠಾಣಾ ವ್ಯಾಪ್ತಿಯ ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ಮಿನಿ ಬಸ್ಸೊಂದು ಹೆದ್ದಾರಿ ಬದಿಗೆ ಮಗುಚಿ ಬಿದ್ದು, ಬಸ್‌ನಲ್ಲಿದ್ದ 12 ಮಂದಿ ಗಾಯಗೊಂಡ ಘಟನೆ ಭಾನುವಾರ ಸಂಭವಿಸಿದೆ.  

ಮಂಗಳೂರು(ಫೆ.17): ಉಪ್ಪಿನಂಗಡಿಯ ಪೊಲೀಸ್‌ ಠಾಣಾ ವ್ಯಾಪ್ತಿಯ ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ಮಿನಿ ಬಸ್ಸೊಂದು ಹೆದ್ದಾರಿ ಬದಿಗೆ ಮಗುಚಿ ಬಿದ್ದು, ಬಸ್‌ನಲ್ಲಿದ್ದ 12 ಮಂದಿ ಗಾಯಗೊಂಡ ಘಟನೆ ಭಾನುವಾರ ಸಂಭವಿಸಿದೆ.

ಸಕಲೇಶಪುರದ ಬಾಗೆ ಎಂಬಲ್ಲಿಂದ ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆಂದು ಕುಟುಂಬ ಸದಸ್ಯರನ್ನು ಸಾಗಿಸುತ್ತಿದ್ದ ಮಿನಿಬಸ್‌ನ ಸ್ಟೇರಿಂಗ್‌ ತುಂಡಾಗಿ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್‌ ಹೆದ್ದಾರಿಯ ಬದಿಗೆ ಮಗುಚಿ ಬಿತ್ತು.

ನಗರದಲ್ಲಿ ರೇಬಿಸ್‌ಗೆ ಎರಡು ಬಲಿ!

ಈ ಪರಿಣಾಮ ಬಸ್‌ನಲ್ಲಿದ್ದ ವಿನೋದಾ ರೈ, ಶ್ರೀಧರ ಶೆಟ್ಟಿ, ಜಗನ್ನಾಥ್‌ ಶೆಟ್ಟಿ, ಪ್ರೇಮಲತಾ, ಡೀಲಾಕ್ಷ, ಚಾಲಕ ಮಹೇಶ್‌ ಗಂಭೀರ ಗಾಯಗೊಂಡು ಮಂಗಳೂರು ಹಾಗೂ ಪುತ್ತೂರಿನ ವಿವಿಧ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಉಳಿದ ಆರು ಮಂದಿ ಗಂಭೀರ ಸ್ವರೂಪವಲ್ಲದ ಗಾಯವನ್ನು ಪಡೆದಿದ್ದು, ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಿರ್ಗಮಿಸಿದ್ದಾರೆ. ಘಟನೆಗೆ ಸಂಬಂಧಿಸಿ ಬಸ್‌ನಲ್ಲಿದ್ದ ಜಯಣ್ಣ ಶೆಟ್ಟಿಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

3 ಪಲ್ಟಿ ಹೊಡೆದ ಬಸ್‌: 50 ಜನಕ್ಕೆ ಗಾಯ, ನಾಲ್ವರ ಸ್ಥಿತಿ ಗಂಭೀರ...

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!