ಹಾವೇರಿ: ಪ್ರೀತಿಯ ಅಪ್ಪುಗಾಗಿ ಮಿಡಿದ ಮನ, ಹೋರಿ ಬೆದರಿಸೋ ಹಬ್ಬವೇ ಸ್ಥಗಿತ..!

By Suvarna NewsFirst Published Nov 6, 2021, 2:58 PM IST
Highlights

*  ಹಾವೇರಿ ತಾಲೂಕು ಕುಳೇನೂರು ಗ್ರಾಮದಲ್ಲಿ ಹೋರಿ ಬೆದರಿಸೋ ಹಬ್ಬ ಸ್ಥಗಿತ
*  ಜಿಲ್ಲೆಯೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಪುನೀತ್‌
*  ಅಪ್ಪು ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದ ಗ್ರಾಮಸ್ಥರು 

ಹಾವೇರಿ(ನ.06): ಪುನೀತ್‌ ರಾಜಕ್‌ಕುಮಾರ್‌(Puneeth Rajkumar) ನಿಧನಕ್ಕೆ ನೊಂದು ಹೋರಿ ಬೆದರಿಸುವ ಹಬ್ಬವನ್ನೇ ಗ್ರಾಮಸ್ಥರು ಸ್ಥಗಿತ ಮಾಡಿದ ಘಟನೆ ಹಾವೇರಿ ತಾಲೂಕು ಕುಳೇನೂರು ಗ್ರಾಮದಲ್ಲಿ ಇಂದು(ಶನಿವಾರ) ನಡೆದಿದೆ. 

ಹಾವೇರಿ ಜಿಲ್ಲೆಯಲ್ಲಿ ಪ್ರತಿ ವರ್ಷ ಹೋರಿ ಬೆದರಿಸುವ ಸ್ಪರ್ಧೆ ಅತೀ ವಿಜೃಂಭಣೆಯಿಂದ ನಡೆಯುತ್ತದೆ. ದೀಪಾವಳಿ ದಿನ ಅಥವಾ ಮಾರನೇ ದಿನ ಹೋರಿ ಹಬ್ಬ ಆಚರಿಸಲಾಗುತ್ತದೆ. ಅದರಂತೆ ಇಂದು ಹಾವೇರಿ ತಾಲೂಕು ಕುಳೇನೂರು ಗ್ರಾಮದಲ್ಲಿ ಹೋರಿ ಬೆದರಿಸುವ ಹಬ್ಬ ಆಚರಣೆಯಾಗಿಬೇಕಿತ್ತು. ಆದರೆ ಅಪ್ಪು ನಿಧನದಿಂದ ಹೋರಿ ಬೆದರಿಸೋ ಹಬ್ಬ ನಿಲ್ಲಿಸಿ ಶೃದ್ಧಾಂಜಲಿ ಅರ್ಪಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. 

ರಾಜ್ಯ ಮಟ್ಟದ ಹೋರಿ ಬೆದರಿಸೋ ಹಬ್ಬವನ್ನೇ ಸ್ಥಗಿತ ಮಾಡಿದ ಗ್ರಾಮಸ್ಥರು ಶೃದ್ಧಾಂಜಲಿ ಸಲ್ಲಿಸಿದ್ದಾರೆ. ಪವರ್‌ಸ್ಟಾರ್‌ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ರೈತರ ಮನಗಳು ಮಿಡಿದಿವೆ. ಶೃದ್ಧಾಂಜಲಿ ಸಲ್ಲಿಸುವ ವೇಳೆ ಗ್ರಾಮದ ಯುವಕರು ಅಪ್ಪು ಅಪ್ಪು ಎಂದು ಅಭಿಮಾನದಿಂದ ಘೋಷಣೆ ಕೂಗಿದ್ದಾರೆ. 

'ಹೊಸಪೇಟೆ ಜಿಲ್ಲಾ ಕ್ರೀಡಾಂಗಣಕ್ಕೆ ಪುನೀತ್‌ ಹೆಸರಿಡಿ'

ಅಪ್ಪುವಿಗಾಗಿ ಇಡೀ ಹೋರಿ ಬೆದರಿಸೋ ಹಬ್ಬವನ್ನೇ ಸ್ಥಗಿತಗೊಳಿಸುವ ಮೂಲಕ ಪುನೀತ್‌ ರಾಜ್‌ಕುಮಾರ್‌ ಅವರ ಮೇಲಿದ್ದ ಅಭಿಮಾನವನ್ನ ವ್ಯಕ್ತಪಡಿಸಿದ್ದಾರೆ. ಹೋರಿ ಬೆಸರಿಸುವ ಹಬ್ಬವನ್ನ ಸ್ಥಗಿತಗೊಳಿಸಿ ಮೌನಾಚರಣೆ ಮಾಡಿದ್ದಾರೆ ಗ್ರಾಮಸ್ಥರು

ಕುಳೇನೂರಿನ ಗ್ರಾಮದ ಬಸವೇಶ್ವರ ದೇವಸ್ಥಾನದ ಮುಂದೆ ಅಪ್ಪು ಭಾವಚಿತ್ರ ಹಿಡಿದು ಶೃದ್ಧಾಂಜಲಿ ಸಲ್ಲಿಸಲಾಗಿದೆ. ಅಪ್ಪು ಅಕಾಲಿಕ ನಿಧನಕ್ಕೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.  

ಪುನೀತ್‌ಗೆ ಲಿಂಗ ದೀಕ್ಷೆ ನೀಡಿದ್ದ ಹಾವೇರಿ ಸಿಂದಗಿ ಮಠದ ಶ್ರೀಗಳು

ಪುನೀತ್‌ ರಾಜಕುಮಾರ್‌ ಅವರು ಜಿಲ್ಲೆಯೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಪ್ರೀತಿಯ ಅಪ್ಪು ಇನ್ನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳಲಾಗದೇ ಅಭಿಮಾನಿಗಳು(Fans) ಕಣ್ಣೀರಿಡುತ್ತಿದ್ದಾರೆ. ಜಿಲ್ಲೆಗೆ ಅನೇಕ ಬಾರಿ ಆಗಮಿಸಿದ್ದ ಪುನೀತ್‌ಗೆ ಇಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಹಾವೇರಿ(Haveri) ಸಿಂದಗಿ ಮಠದ ಲಿಂ. ಶಾಂತವೀರ ಸ್ವಾಮೀಜಿ(Shantaveera Swamiji) ಅವರೇ ಪುನೀತ್‌ ರಾಜ್‌ಗೆ ಬಾಲ್ಯದಲ್ಲಿ ಲಿಂಗದೀಕ್ಷೆ ನೀಡಿದ್ದಾರೆ ಎನ್ನುವುದು ಜಿಲ್ಲೆಯೊಂದಿಗಿನ ರಾಜಕುಮಾರ್‌ ಕುಟುಂಬಕ್ಕಿರುವ(Rajkumar Family) ನಂಟಿಗೆ ಸಾಕ್ಷಿ. ರಾಜಕುಮಾರ್‌ ಅವರ ಅಂದಿನ ಮದ್ರಾಸ್‌ ನಿವಾಸಕ್ಕೆ ಹೋಗಿ ಡಾ. ರಾಜ್‌ ಹಾಗೂ ಪುನೀತ್‌ ಅವರಿಗೆ ಸಿಂದಗಿ ಮಠದ(Sindagi Math) ಶ್ರೀಗಳು ಲಿಂಗದೀಕ್ಷೆ ನೀಡಿದ್ದರು.

ಡಾ.ರಮಣ ನಿರ್ಲಕ್ಷ್ಯದಿಂದ ಪುನೀತ್‌ ನಿಧನ?: ಗೊಂದಲ ನಿವಾರಿಸದಿದ್ರೆ ನಾವೇ ವಿಚಾರಿಸಿಕೊಳ್ತೇವೆ ಎಂದ ಫ್ಯಾನ್ಸ್‌

ಎರಡು ವರ್ಷಗಳ ಹಿಂದೆ ನಗರಕ್ಕೆ ಪುನೀತ್‌ ಆಗಮಿಸಿದ್ದರು. ಜೂ. ರಾಜಕುಮಾರ್‌ ಖ್ಯಾತಿಯ ಅಶೋಕ ಬಸ್ತಿ ಅವರು ನಗರದಲ್ಲಿ ನಿರ್ಮಿಸುತ್ತಿರುವ ರಾಜಕುಮಾರ ಕಲಾಭವನಕ್ಕೆ ಪುನೀತ್‌ ರಾಜಕುಮಾರ್‌ ಅವರೇ ಶಂಕುಸ್ಥಾಪನೆ ನೆರವೇರಿಸಿದ್ದರು. ಹುಬ್ಬಳ್ಳಿಗೆ(Hubballi) ಹೋಗಿ ಬರುವ ವೇಳೆ ಅನೇಕ ಬಾರಿ ಹಾವೇರಿಗೆ ಆಗಮಿಸಿದ್ದರು. ಅವರ ಆಕಸ್ಮಿಕ ನಿಧನದ ಸುದ್ದಿ ಕೇಳಿ ಮಹಿಳೆಯರು, ಮಕ್ಕಳು, ವೃದ್ಧರಾದಿಯಾಗಿ ಕಂಬನಿ ಮಿಡಿಯುತ್ತಿದ್ದಾರೆ. ಯುವಕರಂತೂ ಅಕ್ಷರಶಃ ಕಣ್ಣೀರು ಹಾಕುತ್ತಿದ್ದಾರೆ. ವಿಧಿಯನ್ನು ಹಳಿಯುತ್ತಿದ್ದಾರೆ. ಅಭಿಮಾನಿಗಳು ಪುನೀತ್‌ ಭಾವಚಿತ್ರ ಇಟ್ಟು ಅಂತಿಮ ನಮನ ಸಲ್ಲಿಸುತ್ತಿದ್ದಾರೆ.

ರಾಣಿಬೆನ್ನೂರಿನ ಜತೆ ಪುನೀತ್‌ ನಂಟು

ಚಿತ್ರನಟ ಪುನೀತ್‌ ರಾಜಕುಮಾರ(Ranebennur) ರಾಣಿಬೆನ್ನೂರು ನಗರಕ್ಕೆ ಎರಡು ಬಾರಿ ಭೇಟಿ ನೀಡಿದ್ದರು ಎಂದು ಅಭಿಮಾನಿಗಳು ನೆನಪು ಮಾಡಿಕೊಂಡಿದ್ದಾರೆ.

ಐದು ಚಲನಚಿತ್ರ(Movies) ಮಂದಿರಗಳಿರುವ ನಗರದಲ್ಲಿ ಅಪ್ಪು ಚಿತ್ರದಿಂದ ಹಿಡಿದು ಇತ್ತೀಚಿನ ಯುವರತ್ನದ ವರೆಗೆ ಅವರ ಹೆಚ್ಚಿನ ಚಿತ್ರಗಳು ಬಹುತೇಕ ಎಲ್ಲ ಚಿತ್ರಮಂದಿರಗಳಲ್ಲಿ ನಟ ಪುನೀತ್‌ ರಾಜಕುಮಾರ ಅವರ ಚಲನಚಿತ್ರಗಳು ಬಿಡುಗಡೆಗೊಂಡು ಯಶಸ್ವಿಯಾಗಿವೆ.

2009ರಲ್ಲಿ ಮಿಲನ ಚಲನಚಿತ್ರ ಜನದಟ್ಟಣೆಯಲ್ಲಿ ಪ್ರದರ್ಶನಗೊಂಡ ಹಿನ್ನೆಲೆಯಲ್ಲಿ ನಗರಕ್ಕೆ ಮೊದಲ ಬಾರಿಗೆ ಆಗಮಿಸಿ ಅಭಿಮಾನಿಗಳಲ್ಲಿ ಹುರುಪು ತುಂಬಿದ್ದರು. 2019ರ ಫೆಬ್ರುವರಿ ತಿಂಗಳಿನಲ್ಲಿ ಬಿಡುಗಡೆಯಾದ ನಟಸಾರ್ವಭೌಮ ಚಲನಚಿತ್ರದ ಪ್ರಚಾರಕ್ಕಾಗಿ ನಗರದ ವೀಣಾ ಚಲನಚಿತ್ರ ಮಂದಿರಕ್ಕೆ ಎರಡನೇ ಬಾರಿ ಭೇಟಿ ನೀಡಿ ಪ್ರೇಕ್ಷಕರಲ್ಲಿ ಹರ್ಷ ಮೂಡಿಸಿದ್ದರು.
 

click me!