Ballari News: ಗಡಿ ಗ್ರಾಮ ಹುಡೇಂಗೆ ಕೆರೆ ನಿರ್ಮಿಸಿಕೊಡಿ; ಗ್ರಾಮಸ್ಥರ ಬೇಡಿಕೆ

By Kannadaprabha News  |  First Published Nov 20, 2022, 11:12 AM IST
  • ಕೆರೆ ನಿರ್ಮಾಣಕ್ಕೆ ಬೇಡಿಕೆ ಇಟ್ಟಹುಡೇಂ ಗ್ರಾಮಸ್ಥರು
  • ಹುಡೇಂ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮ

ಕೂಡ್ಲಿಗಿ (ನ.20) : ತಾಲೂಕಿನ ಗಡಿ ಗ್ರಾಮವಾದ ಹುಡೇಂ ಗ್ರಾಪಂನಲ್ಲಿ ಶನಿವಾರ ವಿಜಯನಗರ ನೂತನ ಜಿಲ್ಲಾಧಿಕಾರಿ ಟಿ.ವೆಂಕಟೇಶ ಜಿಲ್ಲೆಯಲ್ಲಿ ಮೊದಲ ಗ್ರಾಮವಾಸ್ತವ್ಯ ನಡೆಸಿದರು. ಹುಡೇಂ ಗ್ರಾಮಕ್ಕೆ ಶನಿವಾರ ಬೆಳಗ್ಗೆ ಜಿಲ್ಲಾಧಿಕಾರಿ ವೆಂಕಟೇಶ್‌ ಆಗಮಿಸಿದ ಕೂಡಲೇ ದಲಿತ ಕಾಲನಿಗಳಿಗೆ ಭೇಟಿ ಅಲ್ಲಿನ ಜನರ ಅಹವಾಲು ಸ್ವೀಕರಿಸಿ ನಂತರ ವೇದಿಕೆ ಕಾರ್ಯಕ್ರಮ ಉದ್ಘಾಟನೆ ನೆರವೇರಿದರು.

ನಂತರ ಜನರ ಸಮಸ್ಯೆ ಅಹವಾಲು ಸ್ವೀಕರಿಸಿದರು. ಹುಲಿಕೆರೆ ಗ್ರಾಮದ ನಾಗರಾಜ ಎಂಬುವವರು ತಮ್ಮ ಜಮೀನಿಗೆ ಸಂಬಂಧಿಸಿದಂತೆ ಪೋಡಿ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿ 10 ತಿಂಗಳು ಗತಿಸಿದರೂ ಅದನ್ನು ಮಾಡಿಕೊಡದೆ ಪ್ರಥಮ ದರ್ಜೆ ಸಹಾಯಕರಾದ ರಂಗನಾಥ ದೊಡ್ಮನಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದಾಗ ಜಿಲ್ಲಾಧಿಕಾರಿ ವೆಂಕಟೇಶ ತಕ್ಷಣ ಕಚೇರಿಗೆ ಮೊಬೈಲ್‌ ಮೂಲಕ ಫೋನಾಯಿಸಿ ತಕ್ಷಣದಿಂದ ಆತನನ್ನು ಅಮಾನತು ಮಾಡುವಂತೆ ಸಂಬಂಧಿಸಿದ ಅಧಿಕಾರಿಗೆ ಆದೇಶಿಸಿದರು.

Latest Videos

undefined

ದಲಿತರ ಮನೆಯಲ್ಲಿ ಜೋಳದ ರೊಟ್ಟಿ ಸವಿದ ಸಚಿವ ಅಶೋಕ್‌

ಹುಡೇಂ ಗ್ರಾಮಸ್ಥರ ಮನವಿ:

ಹುಡೇಂ ತಾಪಂ ಮಾಜಿ ಸದಸ್ಯ ಪಾಪನಾಯಕ,ಪತ್ರಕರ್ತ ಹುಡೇಂ ಕೃಷ್ಣಮೂರ್ತಿ ಸೇರಿದಂತೆ ಗ್ರಾಪಂ ಸದಸ್ಯರು ಸೇರಿ ಗಡಿ ಭಾಗದ ಗ್ರಾಮಕ್ಕೆ ಒಂದು ನೂತನ ಕೆರೆ ನಿರ್ಮಿಸಿಕೊಡಬೇಕು,ಹುಡೇಂ- ಜುಮ್ಮೋಬನಹಳ್ಳಿ ರಸ್ತೆ ನಿರ್ಮಾಣಕ್ಕೆ ಅರಣ್ಯಇಲಾಖೆಯವರು ಅಡ್ಡಿಯಾಗಿದ್ದು ಅದನ್ನು ಸರಿಪಡಿಸಿ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು, ಈ ಹಿಂದೆ ಜನರಿಗೆ ಅನುಕೂಲವಾಗಿದ್ದ ಕೂಡ್ಲಿಗಿ ಸಾರಿಗೆ ಘಟಕದ ಕುಮತಿ ಬಸ್ಸು ನಿಂತಿದ್ದು ಪುನಃ ಓಡಿಸಬೇಕು,ಕಾನಹೊಸಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಗೆ ಬರುವ ಈ ಭಾಗಕ್ಕೆ ಉಪಠಾಣೆ ನಿರ್ಮಿಸಬೇಕು,ಗಡಿಭಾಗದ ಜನರ ಆರೋಗ್ಯ ಹಿತದೃಷ್ಠಿಯಿಂದ ಆಸ್ಪತ್ರೆಗೆ ಒಂದು ಆ್ಯಂಬುಲೆನ್ಸ್‌ ವ್ಯವಸ್ಥೆ ಹಾಗೂ ವೈದ್ಯಾಧಿಕಾರಿಗಳ ನೇಮಕಕ್ಕೆ ಮುಂದಾಗಬೇಕು ಎನ್ನುವ ಪ್ರಮುಖ ಬೇಡಿಕೆಗಳನ್ನು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹುಡೇಂ ಗ್ರಾಪಂ ಅಧ್ಯಕ್ಷೆ ಕರಿಬಸಮ್ಮ, ಉಪಾಧ್ಯಕ್ಷ ರಾಘವೇಂದ್ರ, ಹೊಸಪೇಟೆ ಸಹಾಯಕ ಆಯುಕ್ತ ಸಿದ್ದರಾಮೇಶ್ವರ, ಡಿಎಚ್‌ಓ ಸಲೀಮ್‌,ಡಿಡಿಪಿಐ ಕೊಟ್ರೇಶ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.ಇಓ ರವಿಕುಮಾರ ಸ್ವಾಗತಿಸಿದರು, ತಹಸೀಲ್ದಾರ್‌ ಜಗದೀಶ ಪ್ರಾಸ್ತಾವಿಕವಾಗಿ ಮಾತನಾಡಿದರು.ತಳವಾರ್‌ ಶರಣಪ್ಪ ನಿರೂಪಿಸಿ ವಂದಿಸಿದರು.ನೂರಾರು ಜನರು ಈ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಹಾಜರಿದ್ದು ಅರ್ಜಿ ಸಲ್ಲಿಸಿದರು.

ಕಾಟಾಚಾರಕ್ಕೆ ಗ್ರಾಮ ವಾಸ್ತವ್ಯ; ಒಂದೂವರೆ ತಾಸು ಇದ್ದು ತೆರಳಿದ ಡಿಸಿ!

ಚಿನ್ನಹಗರಿ ಹಳ್ಳಕ್ಕೆ ಡಿಸಿ ಭೇಟಿ:

ಹುಡೇಂ ಗ್ರಾಪಂ ವ್ಯಾಪ್ತಿಯ ತಾಯಕನಹಳ್ಳಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಾಲೆಗೆ ತೆರಳಲು ನೀರಿನಲ್ಲಿ ನಡೆದುಕೊಂಡು ಹೋಗಬೇಕು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಸೇತುವೆ ನಿರ್ಮಿಸಬೇಕೆಂಬ ಗ್ರಾಮಸ್ಥರ ಬೇಡಿಕೆಯಂತೆ ಜಿಲ್ಲಾದಿಕಾರಿ ಟಿ.ವೆಂಕಟೇಶ್‌ ಮತ್ತು ಎಸಿ ಸಿದ್ದರಾಮೇಶ್ವರ ಚಿನ್ನಹಗರಿ ಹಳ್ಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ನಂತರ ತಾತ್ಕಾಲಿಕವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರೈತರ ಜಮೀನಿನ ಪಕ್ಕದಲ್ಲಿ ರಸ್ತೆ ನಿರ್ಮಿಸಿಕೊಡಲು ಕ್ರಮಕೈಗೊಳ್ಳವಂತೆ ಸಹಾಯಕ ಆಯುಕ್ತ ಸಿದ್ದರಾಮೇಶ್ವರಗೆ ಸೂಚಿಸಿದರು. ನಂತರ ರೇವಣ್ಣಸಿದ್ದೇಶ್ವರ ಉಣ್ಣೆ ಕೈಮಗ್ಗ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗೆ ಕಂಬಳಿ ನೀಡಿ ಸನ್ಮಾನಿಸಿದರು.

click me!