Buffalo Protest: ಕೋಡು ಮುರಿದ ಸಿಟ್ಟು.. ಹುಬ್ಬಳ್ಳಿಯಲ್ಲಿ ಎಮ್ಮೆಗಳ ಪ್ರತಿಭಟನೆ!

Published : Mar 24, 2022, 07:50 PM ISTUpdated : Mar 24, 2022, 07:52 PM IST
Buffalo Protest: ಕೋಡು ಮುರಿದ ಸಿಟ್ಟು.. ಹುಬ್ಬಳ್ಳಿಯಲ್ಲಿ ಎಮ್ಮೆಗಳ ಪ್ರತಿಭಟನೆ!

ಸಾರಾಂಶ

* ಬಸ್ ತಡೆದು ಎಮ್ಮೆಗಳ ಪ್ರತಿಭಟನೆ * ಬಸ್ ಚಾಲಕನನ್ನು ಠಾಣೆಗೆ ಎಳೆದೊಯ್ದ ಪೊಲೀಸರು..!! * ಮೂಕ ಪ್ರಾಣಿಗಳ ಒಗ್ಗಟ್ಟು ಮೆಚ್ಚಲೇಬೇಕು *  ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆಯ ಆವಾಂತರ 

ಹುಬ್ಬಳ್ಳಿ(ಮಾ. 24)  ಪ್ರೀತಿ(Love), ಸ್ನೇಹ ತೋರಿಸುವುದ್ರಲ್ಲಿ ಸಾಕು ಪ್ರಾಣಿಗಳು (Animals) ಎಲ್ಲರಿಗಿಂತ ಮುಂದು.‌ ಅಷ್ಟೇ ಅಲ್ಲ ಅವುಗಳಿಗೆ ದುಃಖ, ನೋವು ಆದಾಗ್ಲೂ ಅಷ್ಟೇ, ನೋವು ನೇರವಾಗಿ ಬಾಯಿಂದ ಹೇಳಲು ಆಗದಿದ್ದರೂ ಅದು ಇತರರಿಗೆ ಅರ್ಥವಾಗುವ ರೀತಿಯಲ್ಲಿ ವ್ಯಕ್ತಪಡಿಸ್ತವೆ. ಹುಬ್ಬಳ್ಳಿ (Hubballi)ಯಲ್ಲಿ ಇಂದು ಅಂತಹದೇ ಘಟನೆಯೊಂದು ನಡೆಯಿತು.

ಹೀಗೆ ಬಸ್ (Bus)ಮುಂದೆ ನಿಂತು ತಮ್ಮ ನೋವು ಬೇಸರ ವ್ಯಕ್ತಪಡಿಸ್ತಾ ಧರಣಿ ನಡೆಸುತ್ತಿರೋದು ಹುಬ್ಬಳ್ಳಿ ದಾಜಿಬಾನ್ ಪೇಟೆಯ ಗೌಳಿ ಗಲ್ಲಿಯ ಎಮ್ಮೆಗಳು (Buffalo's).  ಇದಕ್ಕೆ‌ಕಾರಣ ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚರಿಸುವ ಬಿಆರ್ಟಿಎಸ್(BRTS) ಬಸ್ ಒಂದು ಎಮ್ಮಿಗೆ ಗುದ್ದಿ ಅದರ ಕೋಡು ಮುರಿದು ಹೋಗುವಂತೆ ಗಾಯಗೊಳಿಸಿತ್ತು. ಇದರಿಂದಾಗಿ ಉಳಿದ ಎಲ್ಲ  ಎಮ್ಮೆ ಬಸ್ ಮುಂದೆ ನಿಂತಿ ಧರಣಿ ನಡೆಸಿದ್ವು.  ಎಮ್ಮೆಯ ಕೊಂಬು ಮುರಿದು ತೀವ್ರರಕ್ತಸ್ರಾವ ಆದ್ರು ಬಸ್ ಎದುರಿಗೆ ನಿಂತು ಎಮ್ಮೆಗಳು ತಮ್ಮ ಸಿಟ್ಟು‌ಹೋರಾಹಾಕಿದವು.

ಇದುವರೆಗೆ ಬಿಆರ್ಟಿಎಸ್ ಚಿಗರಿ ಬಸ್, ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚರಿಸುವಾಗ ಅನೇಕ ಜನರಿಗೆ ಗುದ್ದಿ ಗಾಯಗೊಳಿಸಿ, ಹತ್ತಾರು ಜನ್ರ ಜೀವನೂ ತಿಂದಿತ್ತು. ಆದ್ರೇ ಜನ ಒಂದಿಷ್ಟು ಆಕ್ರೋಶ ಹೊರಹಾಕಿ ಸುಮ್ಮನಾಗುತ್ತಿದ್ದರು. ಆದ್ರೇ ಹುಬ್ಬಳ್ಳಿ ಎಮ್ಮೆಗಳು ಮಾತ್ರ ಮಾತ್ರ ಅಪಘಾತ(Accident) ಮಾಡಿದ  ಬಸ್ಸಿಗೆ ಗೆ ಮುಂದೆ ಹೋಗಲ ಜಪ್ಪಯ್ಯ ಅಂದ್ರು ಬಿಡಲಿಲ್ಲ. ಇದರಿಂದಾಗಿ ನಗರದ ರಸ್ತೆ ಸಂಚಾರಕ್ಕೂ ಕೆಲ‌ ಕಾಲ ಅಡ್ಡಿಯಾಯಿತು. 

Emotional Video : ಆನೆ ಹಾಗೂ ಸಾಕಿದಾತನ ಅಪೂರ್ವ ಸಮ್ಮಿಲನ... ಮತ್ತೆ ಮತ್ತೆ ನೋಡುವಂತೆ ಮಾಡುವ ವಿಡಿಯೋ

ಹುಬ್ಬಳ್ಳಿ ಧಾರವಾಡ ಅವಳಿನಗರ ಜನರಿಗೆ ತ್ವರಿತ ಸಾರಿಗೆ ವ್ಯವಸ್ಥೆ ಒದಗಿಸಲು ಬಂದಿರುವ ಬಿ.ಆರ್.ಟಿ.ಎಸ್ ಯೋಜನೆ ಒಂದಿಲ್ಲೊಂದು ರೀತಿಯಲ್ಲಿ ಅವ್ಯವಸ್ಥೆ ಹುಟ್ಟು ಹಾಕುತ್ತಲೇ ಇದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಅನಾನುಕೂಲಗಳೇ ಜಾಸ್ತಿಯಾಗಿವೆ.

ಇನ್ನೂ ಬಸ್ (KSRTC) ಚಾಲಕರು ಸಾಕಷ್ಟು ವೇಗವಾಗಿ ಬಸ್ ಚಾಲನೆ ಮಾಡುತ್ತಾರೆ. ಶಾಲಾ ವಲಯ ಹಾಗೂ ಸಾರ್ವಜನಿಕರು ಸಾಕಷ್ಟು ಪ್ರಮಾಣದಲ್ಲಿ ಓಡಾಡುತ್ತಿರುವ ಸ್ಥಳದಲ್ಲಿಯೇ ಎಮ್ಮೆಗೆ ಗಾಯಗೊಳಿಸಿದ್ದು, ಸಾರ್ವಜನಿಕರ ಬೇಸರಕ್ಕು ಕಾರಣವಾಯಿತು. ಕೊನೆಗೆ ಸ್ಥಳಕ್ಕೆ‌ಬಂದ ಪೂರ್ವ ಸಂಚಾರಿ ಪೊಲೀಸರು ಎಮ್ಮೆಯ ಮಾಲೀಕನಿಂದ ದೂರು ಪಡೆದು ಬಿಆರ್ಟಿಎಸ್ ಬಸ್ ಠಾಣೆಗೆ ತೆಗೆದುಕೊಂಡು ಹೊದ್ರು.

ಶಿರಸಿ ಪ್ರಕರರಣ: ಶಿರಸಿಯಲ್ಲಿ ಹಸುವೊಂದು ತನ್ನ ಕರುವನ್ನು ಕೊಂದ ಬಸ್ ಮುಂದೆ ನಿಂತು ಯಾವಾಗಲೂ ಆಕ್ರೋಶ ಹೊರಹಾಕುತ್ತಿತ್ತು. ಬಸ್ ನ ಬಣ್ಣ ಬದಲಾದರೂ ಹಸುವಿನ ಆಕ್ರೋಶ ಮಾತ್ರ ಕಡಿಮೆ ಆಗಿರಲಿಲ್ಲ. 

ಮೂಕ ಪ್ರಾಣಿಗಳು ಒಂದೆಲ್ಲಾ ಒಂದು ರೀತಿ ಒಗ್ಗಟ್ಟು ಪ್ರದರ್ಶನ ಮಾಡುತ್ತವೆ. ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಮಾವುತ ಕೊನೆ ಉಸಿರು ಎಳೆದಿದ್ದಕ್ಕೆ ಆನೆಯೇ ಬಂದು ಕಣ್ಣೀರು ಹಾಕಿತ್ತು.  ಮಾಲೀಕ ಸತ್ತ ಮೇಲೆ ಆತನ ಸಮಾಧಿ ಮುಂದೆ ಶ್ವಾನ ತಿಂಗಳುಗಳ  ಕಾಲ ಇತ್ತು.

ಪ್ರಾಣಿಗಳು  ಬಾಂಧವ್ಯಮರೆಯಲ್ಲ ನೆಚ್ಚಿನ ಮಾಲೀಕ ಅಸುನೀಗಿದಾಗ ಪ್ರೀತಿ ತೋರ್ಪಡಿಸುತ್ತವೆ. ಐಪಿಎಸ್ ಅಧಿಕಾರಿ ಡಿಕೆ ರವಿ ಸಾವನ್ನಪ್ಪಿದ್ದಾಗಲೂ ಅವರ ಮನೆಯ ಶ್ವಾನ  ಕೊನೆವರೆಗೂ ಕಣ್ಣೀರು ಹಾಕುತ್ತಲೇ ಇತ್ತು. 

PREV
Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ