ತಮ್ಮೂರಿನ ಜನರಿಗೆ ಏನಾದ್ರು ಕೊಡಬೇಕೆಂಬ ಈ ದಂಪತಿ ಏನ್ ಕೊಟ್ರು ನೋಡಿ....

By Suvarna News  |  First Published Mar 24, 2022, 6:32 PM IST

* ಗ್ರಾಮದ ಉದಯರವಿ ದಂಪತಿ ಒಂದು ವಿಶೇಷ ಪ್ರಯತ್ನ
* ತಮ್ಮೂರಿನ ಜನರಿಗೆ ಏನಾದ್ರು ಕೊಡಬೇಕೆಂಬ  ಈ ದಂಪತಿ ಛಲ
* ಮ್ಮೂರಿಗೆ ಏನಾದ್ರು‌ ಮಾಡಲೇಬೆಂಬ ಚಲದಿಂದ ಈಗಲೂ ಮುಂದುವರೆದಿದ್ದಾರೆ


ವರದಿ: ದೀಪಕ್ ,ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ.

ಕೋಲಾರ, (ಮಾ.24): ಸಾಮಾನ್ಯವಾಗಿ ರೇಷ್ಮೆ ತಯಾರಿಕೆ ಅಂದ್ರೆ ಅದು ಸೀಮಿತ ಸ್ಥಳದಲ್ಲಿ ಮಾತ್ರ ಎನ್ನುವ ಮಾತಿದೆ. ಅದೂ ಕೂಡ ಆ ಕೆಲಸ‌ಗೊತ್ತಿರುವರಿಂದ ಮಾತ್ರ ಸಾದ್ಯ.ಆದ್ರೆ ಈ ಗ್ರಾಮದಲ್ಲಿ ರೇಷ್ಮೆ ತಯಾರಿಕೆ ಅಷ್ಟೇ ಅಲ್ಲ ಅಲ್ಲಿಯೇ ಮಾರಾಟ ಕೇಂದ್ರವೂ ಇದೆ. ನಮ್ಮೂರಿನ ಜನರಿಗೆ ಏನಾದ್ರು ಕೊಡಬೇಕೆಂಬ ಈ ದಂಪತಿಯ9couple) ಕುರಿತು ಸ್ಪೆಷಲ್ ಸ್ಟೋರಿ ಇಲ್ಲಿದೆ ನೋಡಿ.. 

Latest Videos

undefined

ಇದು ಕೊಲಾರ ಜಿಲ್ಲೆಯKolar District) ಅಂಕತಟ್ಟಿ ಗ್ರಾಮ.ಗ್ರಾಮದ ಉದಯರವಿ ದಂಪತಿ ಒಂದು ವಿಶೇಷ ಪ್ರಯತ್ನ ಕ್ಕೆ ಮುನ್ನುಡಿ ಇಟ್ಟಿದ್ದಾರೆ. ಅದೇನೆಂದ್ರೆ ಇವರು ರೇಷ್ಮೆ ಹುಳ ಸಾಕುತ್ತಾರೆ, ಹಿಪ್ಪು ನೇರಳೆ ಬೆಳೆಯುತ್ತಾರೆ.ರೇಷ್ಮೆ ನೇಯುವ ಯಂತ್ರವನ್ನು ಕೂಡ ಅವರೇ ತಯಾರಿಸುತ್ತಾರೆ. ಅಲ್ಲಿಯೆ ರೇಷ್ಮೆ ನೇಯುವ ಯಂತ್ರಗಳಲ್ಲಿ‌ ನೇಯ್ಗೆ ಕೆಲಸವನ್ನೂ ಮಾಡುತ್ತಾರೆ.

Kolar: ಜಿಲ್ಲೆಯಲ್ಲಿ ಚಿನ್ನಕ್ಕಿಂತ ರೇಷ್ಮೆಯೇ ದುಬಾರಿ, ರೈತರ ಮುಖದಲ್ಲಿ ಮಂದಹಾಸ


ಗರಿ ಗರಿ ರೇಷ್ಮೆ‌ ಸೀರೆ (Silk sarees) ಗಳನ್ನೂ ಕೂಡ ಅಲ್ಲಿಯೆರ ತಯಾರಿಸುತ್ತಾರೆ. ಇನ್ನೂ ಮುಗಿಲಿಲ್ಲ ಇವರ ರೇಷ್ಮೆ ಕಾರ್ಯ .ಅದೇ ಸ್ಥಳದಲ್ಲೇ ಉತ್ತಮವಾದ ಸುಸಜ್ಜಿತವಾದ ಒಂದು ರೇಷ್ಮೆ ಶೋರೂಂ ಕೂಡ ಇದೆ. ಅಲ್ಲಿ ಬಗೆ ಬಗೆಯ ರೇಷ್ಮೆ ಸೀರೆಗಳ ಮಾರಾಟವೂ ಕೂಡ ಇದೆ.ಉದಯ ರವಿ ಕೇವಲ ಎಸ್ ಎಸ್ ಎಲ್ ಸಿ ಓದಿ ತಮ್ಮ ತಂದೆಯ ಜಮೀನಿನಲ್ಲಿಯೇ ಏನಾದ್ರು‌ ಸಾಧನೆ ಮಾಡಲೇಬೇಕೆಂಬ ತುಡಿತ ಇಂದು ಸಾಧನೆಯ ಹಾದಿಯಲ್ಲಿ ನಿಲ್ಲಿಸಿದೆ.ಊದುಗಡ್ಡಿ ಉಜ್ಜುವುದು,ಕೃಷಿ ಕಾರ್ಮಿಕನಾಗಿ ,ನೂಲು ತೆಗೆಯೋದು,ಚರಕದಲ್ಲಿ ಕೆಲಸ ಹೀಗೆ ಕಷ್ಟ ಪಟ್ಟು ಮೇಲೆ‌ಬಂದ ರವಿ ಈಗ ಆ ಗ್ರಾಮಕ್ಕೆ ಮಾದರಿಯಾಗಿ ನಿಂತಿದ್ದಾರೆ. ಊರೂರು ಸುತ್ತಿದ ವ್ಯಕ್ತಿ ಈಗ ತಮ್ಮೂರಿಗೆ ಏನಾದ್ರು‌ ಮಾಡಲೇಬೆಂಬ ಚಲದಿಂದ ಈಗಲೂ ಮುಂದುವರೆದಿದ್ದಾರೆ.

ಉದಯರವಿ ನಿಸರ್ಗ  ಕೇಂದ್ರ ಎಂಬ ತಮ್ಮದೇ ಹೆಸರಿನಲ್ಲಿ ತಮ್ಮ‌ ಜಮೀನನ್ನು  ರೇಷ್ಮೇ ಕೇಂದ್ರವನ್ನಾಗಿ ಮಾರ್ಪಡಿಸಿದ್ದಾರೆ.ಉದಯರವಿ ಓದಿದ್ದು ಕೇವಲ ಎಸ್ ಎಸ್ ಎಲ್ ಸಿ ಆದ್ರೆ ಇವರು‌ ಯೋಚಿಸಿದ್ದು ಯಾರಿಗೂ ಕಡಿಮೆ ಇಲ್ಲ. ಯಾಕೆಂದರೆ ಇವರ ಸಾಧನೆಯೇ ಆತರಹದ್ದು.ಈಗಾಗಲೆ ಇವರ ರೇಷ್ಮೆ ಕೇಂದ್ರಲ್ಲಿ ನೂರಾರು ಕಾರ್ಮಿಕರಿಗೆ ಕೆಲಸ ನೀಡಿದ್ದಾರೆ. ರೇಷ್ಮೆ ಕುರಿತು ತಿಳಿದುಕೊಳ್ಳ ಬಯಸುವರಿಗೆ ಉಚಿತ ತರಬೇತಿ ಕೂಡ ನೀಡುತ್ತಾರೆ.ಸದ್ಯ ಕಾರ್ಮಿಕರು ಬೇರೆ ಕಡೆಯಿಂದ ಬಂದವರಲ್ಲ.ಎಲ್ಲರು ಕೂಡ ಸ್ಥಳೀಯರು.ಈ ಉದ್ಯಮಿ ರವಿ ತನ್ನ ಇಬ್ಬರು ಹೆಣ್ಣು ಮಕ್ಕಳು,ಪತ್ನಿಯೊಂದಿಗಿನ‌ ತಮ್ಮ‌ ಸಂಸಾರವನ್ನು ಸಂತೋಷವಾಗಿ ನಡೆಸಿಕೊಂಡು ಹೋಗಬಹುದಾಗಿತ್ತು.

Karnataka News: ಅತ್ಯಾಧುನಿಕ ಹೈಟೆಕ್‌ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಅನುಮೋದನೆ

ಆದ್ರೆ ಉದಯರವಿ ತಮ್ಮೂರಿಗೆ ಏನಾದರು ಮಾಡಬೇಕು ಎನ್ನುವ ಉದ್ದೇಶದಿಂದ ತಮ್ಮ ಗ್ರಾಮದಲ್ಲಿಯೇ ಈ ಒಂದು ವಿಶಿಷ್ಠವಾದ ಪ್ರಯತ್ನಕ್ಕೆ ಮುಂದಾಗಿದ್ದಾರೆ.ತಮ್ಮ ೧೨ ಎಕರೆಯ ಜಮೀನನ್ನು ತಮ್ಮ‌ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ. ಗ್ರಾಮೀಣ ಭಾಗದ ಜನರೂ ಕೂಡ ತಮ್ಮ ಹತ್ತಿರದ ಗ್ರಾಮದಲ್ಲಿ ರೇಷ್ಮೆ ಸಿಗುವುದನ್ನು ಅರಿತು ಉತ್ತಮವಾದ ಪ್ರತಿಕ್ರಿಯೆ ನೀಡಿದ್ದಾರೆ. ದಿನವೊಂದಕ್ಕೆ ಲಕ್ಷಾಂತೆ ರೂಪಾಯಿ ವಹಿವಾಟು ಆರಂಭವಾಗಿದೆ.ಕೇವಲ ಮೂರು ವರ್ಷಗಳ ಅಂತರದಲ್ಲಿ  ತಮ್ಮ ಯೋಜನೆಯನ್ನು ಬಹುತೇಕ ಜಾರಿಗೆ ತಂದಿದ್ದಾರೆ.ಈ ಭಾಗದ ಗ್ರಾಮಸ್ತರು ಸುತ್ತಮುತ್ತಲಿನ ಜನರಿಗೆ ಮಾದರಿಯಾಗಿದ್ದಾರೆ..

ಉತ್ತಮವಾದ ರೇಷ್ಮೆಯ ಉತ್ಪಾದನೆ,ಕಡಿಮೆ ಬೆಲೆಯಲ್ಲಿ ಮಾರಾಟ,ಜೊತೆಗೆ ಅಲ್ಲಿನ ಗ್ರಾಮಸ್ಥರಿಗೆ ಉದ್ಯೋಗ ಈ ರೀತಿಯ ಚಿಂತನೆ ಮಾಡಿ ರೇಷ್ಮೆ ಯನ್ನೇ ತಮ್ಮ‌ ಜೀವನದ್ದ ಉದ್ದೇಶ,ದ್ಯೇಯೋದ್ದೇಶ ನಿಜಕ್ಕು ಶ್ಲಾಘನೀಯ. ತಮ್ಮೂರಿನ‌ ಜನಕ್ಕೆ‌ ಉದ್ಯೋಗ ನೀಡಬೇಕೆಂದ ರವಿಯವರ ಉದ್ದೇಶ ನಿಜಕ್ಕು ಅಭಿನಂದನಾರ್ಹ.....

click me!