ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಎಮ್ಮೆಕರು ಜನಿಸಿದೆ. ಇದೇನು ಕೊರೋನಾ ಎಮ್ಮೆಕರು ಅಂತೀರಾ..? ಕೊರೋನಾ ರೀತಿಯೇ ವಿಚಿತ್ರವಾಗಿ ಹುಟ್ಟಿದ್ದ ಈ ಕರುವಿಗೆ ಈ ರೀತಿ ಹೆಸರಿಡಲಾಗಿದೆ.
ಹಾವೇರಿ(ಮೇ.08): ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಎಮ್ಮೆಕರು ಜನಿಸಿದೆ. ಇದೇನು ಕೊರೋನಾ ಎಮ್ಮೆಕರು ಅಂತೀರಾ..? ಕೊರೋನಾ ರೀತಿಯೇ ವಿಚಿತ್ರವಾಗಿ ಹುಟ್ಟಿದ್ದ ಈ ಕರುವಿಗೆ ಈ ರೀತಿ ಹೆಸರಿಡಲಾಗಿದೆ.
ಹಾವೇರಿಯಲ್ಲೊಂದು ವಿಚಿತ್ರ ಎಮ್ಮೆ ಕರು ಜನಿಸಿದ್ದು, 2 ತಲೆ, 8 ಕಾಲುಗಳುಳ್ಳ ಎಮ್ಮೆ ಕರು ಜನನ ಜನರಲ್ಲಿ ಅಚ್ಚರಿ ಮೂಡಿಸಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಗುಡ್ಡದಮಲ್ಲಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಕಡಲ ತೀರದಲ್ಲಿ ಮುಳ್ಳು ಹಂದಿ ಮೀನು ಪತ್ತೆ
ಗ್ರಾಮದ ಸಿದ್ದಪ್ಪ ಮರಿಗೂಳಪ್ಪಳವರ ಎಂಬುವರಿಗೆ ಸೇರಿದ್ದ ಎಮ್ಮೆ ಕರುಗೆ ಜನನವಾಗಿದ್ದು, ಜನಿಸಿದ ಒಂದು ಘಂಟೆಯಲ್ಲೇ ಕರು ಸಾವನ್ನಪ್ಪಿದೆ. ದೇಹದ ಒಂದು ಭಾಗದಲ್ಲಿ ಗಂಡು ಕರು ಮತ್ತೊಂದು ಭಾಗದಲ್ಲಿ ಹೆಣ್ಣು ಕರು ಕಂಡು ಜನ ಆಶ್ಚರ್ಯಕ್ಕೊಳಗಾಗಿದ್ದಾರೆ. ವಿಚಿತ್ರ ಕರು ಕಂಡು ಸ್ಥಳೀಯರು ಕೊರೊನಾ ಎಮ್ಮೆಕರು ಎಂದು ಹೆಸರಿಟ್ಟಿದ್ದಾರೆ.