'ಸಂಪುಟ ವಿಸ್ತರಿಸಲು ಬಿಎಸ್‌ವೈ RSSನವರ ಬಾಗಿಲು ಕಾಯ್ತಿದ್ದಾರೆ'..!

Suvarna News   | Asianet News
Published : Feb 02, 2020, 02:03 PM ISTUpdated : Feb 02, 2020, 02:38 PM IST
'ಸಂಪುಟ ವಿಸ್ತರಿಸಲು ಬಿಎಸ್‌ವೈ RSSನವರ ಬಾಗಿಲು ಕಾಯ್ತಿದ್ದಾರೆ'..!

ಸಾರಾಂಶ

ಯಡಿಯೂರಪ್ಪ ಸಂಪುಟ ವಿಸ್ತರಣೆಗಾಗಿ ಆರ್‌ಎಸ್‌ಎಸ್‌ನವರ ಬಾಗಿಲು ಕಿಟಕಿ ಕಾಯುತ್ತಿದ್ದಾರೆ. ಯಡಿಯೂರಪ್ಪ ಹೀನಾಯ ಸ್ಥಿತಿಯಲ್ಲಿದ್ದಾರೆ ಎಂದು ನಿವೃತ್ತ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಟೀಕೆ ಮಾಡಿದ್ದಾರೆ.

ಮೈಸೂರು(ಫೆ.02): ಯಡಿಯೂರಪ್ಪ ಸಂಪುಟ ವಿಸ್ತರಣೆಗಾಗಿ ಆರ್‌ಎಸ್‌ಎಸ್‌ನವರ ಬಾಗಿಲು ಕಿಟಕಿ ಕಾಯುತ್ತಿದ್ದಾರೆ ಎಂದು ನಿವೃತ್ತ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಟೀಕೆ ಮಾಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಹೀನಾಯ ಸ್ಥಿತಿಯಲ್ಲಿದ್ದಾರೆ. ಸಂಪುಟ ವಿಸ್ತರಣೆ ಮಾಡುವುದು ಮುಖ್ಯಮಂತ್ರಿಗಳ ಪರಮಾಧಿಕಾರ. ರಾಜ್ಯಪಾಲರಿಗೆ ಇಂತಹವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುತ್ತೇನೆ ಅಂತ ಹೇಳಬೇಕು. ಆದರೆ ಯಡಿಯೂರಪ್ಪ ಅವರು ಆರ್‌ಎಸ್‌ಎಸ್‌ನವರ ಮನೆ ಬಾಗಿಲು ಕಾಯುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ರಾಹು, ಕೇತುಗಳೆಲ್ಲ ಸೇರಿ ನನ್ನನ್ನು ಚುನಾವಣೆಯಲ್ಲಿ ಸೋಲಿಸಿದ್ರು: ಸಿದ್ದು

ಭೇಟಿಗೂ ಅವಕಾಶ ಸಿಗೋದಿಲ್ಲ. ನಾವು ಯಡಿಯೂರಪ್ಪ ಅವರಿಗೆ ವೋಟು ಕೊಟ್ಟಿದ್ದು ಜನರ ಅಭಿಪ್ರಾಯ ಕೇಳೋದಕ್ಕೆ. ಆದ್ರೆ ಯಡಿಯೂರಪ್ಪ ಆರ್‌‌ಎಸ್‌ಎಸ್‌ನವರು ಅಭಿಪ್ರಾಯ ಪಡೆಯಲು ಪರದಾಡುತ್ತಿದ್ದಾರೆ. ಈ ದೇಶವನ್ನು ನಾವು ವೋಟ್ ಹಾಕಿದವರು ಆಳುತ್ತಿಲ್ಲ. ನಾಗಪುರದ ಆರ್‌ಎಸ್‌ಎಸ್‌ನವರು ಆಳುತ್ತಿದ್ದಾರೆ. ಇದ್ಯಾವ ರೀತಿಯ ಪ್ರಜಾಪ್ರಭುತ್ವ ? ಎಂದು ಪ್ರಶ್ನಿಸಿದ್ದಾರೆ.

"

PREV
click me!

Recommended Stories

16 ಬಾರಿ ಬಜೆಟ್ ಮಂಡಿಸಿದ ವಿಶ್ವದ ಕುಖ್ಯಾತ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ, ಸತ್ತ ಸರ್ಕಾರದ ಮುಖ್ಯಮಂತ್ರಿ: ಪ್ರತಾಪ್ ಸಿಂಹ ವಾಗ್ದಾಳಿ
ಸಿದ್ದರಾಮಯ್ಯ ಹೆಲಿಕಾಪ್ಟರ್‌ ಪ್ರಯಾಣಕ್ಕೆ ರಾಜ್ಯದ ಬೊಕ್ಕಸದಿಂದ ಕೋಟ್ಯಂತರ ಖರ್ಚು!