'ಉಪಚುನಾವಣೆಯಲ್ಲಿ ಸೋತ ವಿಶ್ವನಾಥ್‌ಗೆ ಶುಕ್ರದೆಸೆ ಕಾದಿದೆ, ಕಾದು ನೋಡಲಿ'

Suvarna News   | Asianet News
Published : Feb 02, 2020, 01:35 PM ISTUpdated : Feb 02, 2020, 02:39 PM IST
'ಉಪಚುನಾವಣೆಯಲ್ಲಿ ಸೋತ ವಿಶ್ವನಾಥ್‌ಗೆ ಶುಕ್ರದೆಸೆ ಕಾದಿದೆ, ಕಾದು ನೋಡಲಿ'

ಸಾರಾಂಶ

ಪರಿಷತ್‌ ಚುನಾವಣೆಯಲ್ಲಿ ನನ್ನ ಹೆಸರು ಪಿಕ್ಸ್‌| ಸಿಎಂ ಯಡಿಯೂರಪ್ಪ ಜೊತೆ ಮಾತನಾಡಿ ನಾಮಪತ್ರ ಸಲ್ಲಿಸುತ್ತೇನೆ| ವಿಶ್ವನಾಥ್‌ ವಿಧಾನ ಪರಿಷತ್‌ಗೆ ಆಯ್ಕೆಯಾದರೆ ಮಾತ್ರ ಅವರನ್ನ ಸಚಿವರನ್ನಾಗಿ ಮಾಡುತ್ತಾರೆ| 

ಹುಬ್ಬಳ್ಳಿ(ಫೆ.02): ಕೇಂದ್ರದ ಬಜೆಟ್ ಒಳ್ಳೆಯ ರೀತಿಯಲ್ಲಿ ಆಗಿದೆ. ನೀರಾವರಿ ಮತ್ತು ಗ್ರಾಮೀಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಇದೊಂದು ಕೃಷಿಕರಿಗೆ ಒಳ್ಳೆಯ ಬಜೆಟ್ ಆಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ. 

ಭಾನುವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ವಿಧಾನ ಪರಿಷತ್‌ ಚುನಾವಣೆಯಲ್ಲಿ ನನ್ನ ಹೆಸರು ಪಿಕ್ಸ್‌ ಆಗಿದೆ. ನಾನು‌ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಜೊತೆ ಮಾತನಾಡಿ ನಾಮಪತ್ರ ಸಲ್ಲಿಸುತ್ತೇನೆ. ಹೆಚ್. ವಿಶ್ವನಾಥ್‌ ಅವರಿಗೆ ಶುಕ್ರದೆಸೆ ಕಾದಿದೆ, ಕಾದು ನೋಡಲಿ. ವಿಶ್ವನಾಥ್‌ ಅವರನ್ನ ವಿಧಾನ ಪರಿಷತ್‌ಗೆ ಆಯ್ಕೆ ಮಾಡಿದ್ರೆ ಮಾತ್ರ ಅವರನ್ನ ಸಚಿವರಾಗುತ್ತಾರೆ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸವದಿ ಅವರನ್ನ ಉಪಮುಖ್ಯಮಂತ್ರಿ ಮಾಡಿದ ಮೇಲೆ ಅನಾವಶ್ಯಕವಾಗಿ ಚರ್ಚೆಗಳಾಗಿವೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ಮಾತನಾಡೋದು ಬೇಡ, ಅದಕ್ಕೆಲ್ಲ ತೆರೆ ಬಿದ್ದಿದೆ. ಸೋತರವರ ವಿಚಾರ ಮಾಡೋದು ಬೇಡ, ಜೂನ್ ತಿಂಗಳಲ್ಲಿ ಸೋತವರಿಗೆ ಅವಕಾಶವಿದೆ. ನಾಲ್ಕು ಪರಿಷತ್‌ ಸ್ಥಾನಗಳು ಖಾಲಿಯಾಗುತ್ತವೆ ಅವಾಗ ಎಲ್ಲರಿಗೂ ಅವಕಾಶ ಸಿಗುತ್ತದೆ ಎಂದು ಹೇಳಿದ್ದಾರೆ. 


 

PREV
click me!

Recommended Stories

KSRTC ಬಸ್ ಡ್ರೈವರ್ ಹಾರ್ನ್ ಮಾಡಿದ್ದೇ ತಪ್ಪಾಯ್ತಂತೆ; ಊರಿನ ಜನರೆಲ್ಲಾ ಸೇರಿಕೊಂಡು ಧರ್ಮದೇಟು ಕೊಟ್ಟರು!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ