ಬಿಎಸ್‌ವೈಯವರನ್ನು ಪಂಚಮಸಾಲಿ ಲಿಂಗಾಯತರ ವಿರೋಧಿ ಎಂದು ಬಿಂಬಿಸುವ ಯತ್ನ ವಿಷಾದನೀಯ: ವಿಜಯೇಂದ್ರ

By Govindaraj S  |  First Published Sep 22, 2022, 10:52 PM IST

ಯಡಿಯೂರಪ್ಪನವರು ಹಾಗೂ ವಿಜಯೇಂದ್ರ ಪಂಚಮಸಾಲಿ ಲಿಂಗಾಯತರ ವಿರೋಧಿ ಎಂದು ಬಿಂಬಿಸುವ ಯತ್ನ ನಡೆಯುತ್ತಿದೆ. ಯಾರೋ ರಾಜಕೀಯ ಕಾರಣಕ್ಕೆ ಸ್ವಾಮೀಜಿಗಳ ಮನಸ್ಸು ಕೆಡಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. 


ಮೈಸೂರು (ಸೆ.22): ಯಡಿಯೂರಪ್ಪನವರು ಹಾಗೂ ವಿಜಯೇಂದ್ರ ಪಂಚಮಸಾಲಿ ಲಿಂಗಾಯತರ ವಿರೋಧಿ ಎಂದು ಬಿಂಬಿಸುವ ಯತ್ನ ನಡೆಯುತ್ತಿದೆ. ಯಾರೋ ರಾಜಕೀಯ ಕಾರಣಕ್ಕೆ ಸ್ವಾಮೀಜಿಗಳ ಮನಸ್ಸು ಕೆಡಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ಪಂಚಮಸಾಲಿ ಮೀಸಲಾತಿಗೆ ಯಡಿಯೂರಪ್ಪ ವಿರೋಧ ಮಾಡುತ್ತಿದ್ದಾರೆ ಎಂಬ ಸ್ವಾಮೀಜಿಗಳ ಹೇಳಿಕೆ ವಿಚಾರಕ್ಕೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದರು. 

ಯಡಿಯೂರಪ್ಪ ಹಾಗೂ ನನ್ನ ಹೆಸರನ್ನ ಈ ವಿಚಾರದಲ್ಲಿ ಪದೇ ಪದೇ ಎಳೆದು ತರುತ್ತಿದ್ದಾರೆ. ಯಡಿಯೂರಪ್ಪನವರು ಮೀಸಲಾತಿಗೆ ವಿರೋಧವಿಲ್ಲ. ಸಿಎಂ ಮೇಲೆ ಯಡಿಯೂರಪ್ಪನವರು ಯಾವುದೇ ಒತ್ತಡ ಹೇರಿಲ್ಲ ಎಂದು ಸ್ಪಷ್ಟಪಡಿಸಿದರು. ನಾನು ಚುನಾವಣೆಗೆ ಎಲ್ಲೇ ಸ್ಪರ್ಧಿಸಿದರು ಹಳೇ ಮೈಸೂರು ಭಾಗವನ್ನು ನಾನು ಯಾವುತ್ತು ಮರೆಯುವುದಿಲ್ಲ. ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟಿರುವುದು ಹಳೇ ಮೈಸೂರು ಮತ್ತು ವರುಣ ಕ್ಷೇತ್ರ ಇಲ್ಲಿ ಪಕ್ಷ ಸಂಘಟನೆ ನಿರಂತರವಾಗಿ ನಡೆಸುತ್ತೇನೆ ಎಂದರು.

Tap to resize

Latest Videos

ಶಂಕಿತ ಉಗ್ರರ ಬಂಧನ: ಯುವಕರು ತಪ್ಪಾದ ದಾರಿ ಹಿಡಿಯುತ್ತಿರುವುದು ಸತ್ಯ, ಮಹಮ್ಮದ್‌ ನಲಪಾಡ್‌

ವಿದ್ಯಾವಂತರು ಐಸಿಸ್‌ ಸಂಘಟನೆ ಜತೆ ನಂಟು ಹೊಂದಿರುವುದು ಆತಂಕಕಾರಿ ಬೆಳವಣಿಗೆ: ವಿದ್ಯಾವಂತರು ಐಸಿಸ್‌ ಸಂಘಟನೆ ಜತೆ ನಂಟು ಹೊಂದಿರುವುದು ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು. ಶಿವಮೊಗ್ಗದಲ್ಲಿ ಉಗ್ರರ ಬಂಧನ ವಿಚಾರಕ್ಕೆ ಮೈಸೂರಿನಲ್ಲಿ ಬುಧವಾರ ಪ್ರತಿಕ್ರಿಯಿಸಿದ ಅವರು, ಶಿವಮೊಗ್ಗ ಮಾತ್ರವಲ್ಲ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂತಹ ಬೆಳವಣಿಗೆ ಕಂಡು ಬಂದಿದೆ. ಅದರಲ್ಲೂ ಎಂಜಿನಿಯರಿಂಗ್‌ ಸೇರಿದಂತೆ ಉತ್ತಮ ವಿದ್ಯಾಭ್ಯಾಸ ಹೊಂದಿದವರು ಐಸಿಸ್‌ ಸಂಪರ್ಕ ಹೊಂದಿರುವುದು ಗೊತ್ತಾಗಿದೆ ಎಂದರು.

ಕರ್ನಾಟಕ ಕುವೆಂಪು ಹೇಳಿದಂತೆ ಸರ್ವಜನಾಂಗದ ಶಾಂತಿಯ ತೋಟ. ಶಾಂತಿ ವಾತಾವರಣ ಹಾಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್‌ ನಾಯಕರು ಅಲ್ಪಸಂಖ್ಯಾತರು ಇರುವ ಜಾಗದಲ್ಲಿ ಸಾರ್ವಕರ್‌ ಫೋಟೋ ಯಾಕೆ ಹಾಕಬೇಕು ಅಂತ ಕೇಳಿದ್ದರು. ಇಂತಹ ಓಲೈಕೆ ಮಾತುಗಳಿಂದ ಶಾಂತಿ ಕದಡುವ ವಾತಾವರಣ ನಿರ್ಮಾಣ ಆಗುತ್ತಿದೆ. ಚುನಾವಣಾ ವರ್ಷ ಆಗಿರುವುದರಿಂದ ಇಂತಹ ಮಾತುಗಳು ಸಹಜ ಎಂದು ಅವರು ಹೇಳಿದರು.

ಬಿಜೆಪಿ ಸಂಘಟನೆಗೆ ಶ್ರಮಿಸಬೇಕು: ಮುಂದಿನ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಒಗ್ಗಟ್ಟಾಗಿ ಪಕ್ಷ ಸಂಘಟನೆ ಮಾಡಲು ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾರ್ಯಕರ್ತರನ್ನು ಹುರಿದುಂಬಿಸಿದರು. ಜಕ್ಕನಹಳ್ಳಿಯಲ್ಲಿ ಮೈಸೂರಿನಿಂದ ಚಿತ್ರದುರ್ಗಕ್ಕೆ ತೆರಳುತ್ತಿದ್ದ ವೇಳೆ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಸರ್ಕಾರಗಳು ನಾಡಿನ ಜನತೆಯ ಅಭ್ಯುಧಯಕ್ಕಾಗಿ ಜಾರಿಗೆ ತಂದಿರುವ ಜನಪರ ಕಾರ್ಯಕ್ರಮಗಳನ್ನು ಮನೆಮನೆಗೆ ತಲುಸಬೇಕು. ಕೇಂದ್ರ- ರಾಜ್ಯ ಸರ್ಕಾರದ ಕಾಮಗಾರಿಗಳ ಮಾಹಿತಿ ಜನರಿಗೆ ತಲುಪಿಸಿ ಗುಣಮಟ್ಟದಲ್ಲಿ ಕಾಮಗಾರಿ ನಡೆಯಲು ನಿಗಾ ವಹಿಸಬೇಕು ಎಂದರು. ಬಿಜೆಪಿ ಕಾರ್ಯಕರ್ತರ ಪಕ್ಷ. 

Mysuru: ಸುತ್ತಾಟವಿಲ್ಲದೆ ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯ: ಸಚಿವ ಆರ್‌.ಅಶೋಕ್‌

ಮೇಲುಕೋಟೆ ಕ್ಷೇತ್ರದಲ್ಲಿ ಪಕ್ಷದ ಶಾಸಕರಿಲ್ಲದಿದ್ದರೂ ಉತ್ಸಾಹದಿಂದ ಸಂಘಟಿತರಾಗಿ ಕ್ರೀಯಾಶೀಲವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವುದು ಸಂತಸ ತಂದಿದೆ. ಮುಂದೆಯು ಹೆಚ್ಚಿನ ಶ್ರಮವಹಿಸಬೇಕು ಎಂದರು. ಈ ವೇಳೆ ಬಿಜೆಪಿಯ ಜಕ್ಕನಹಳ್ಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನ್ಯಾಮನಹಳ್ಳಿ ಎಸ್‌.ಎನ್‌.ಟಿ ಸೋಮಶೇಖರ್‌, ರೈತಮೋರ್ಚಾ ಉಪಾಧ್ಯಕ್ಷ ದೇವರಹಳ್ಳಿ ನಾಗೇಗೌಡ, ತಾಲೂಕು ಉಪಾಧ್ಯಕ್ಷ ಅರಕನಗೆರೆ ಪುರುಷೋತ್ತಮ್‌, ಕಾಡೇನಹಳ್ಳಿ ಅನಿಲ್‌, ಅರ್ಜುನ್‌, ದೇವರಹಳ್ಳಿ ಕಾರ್ತಿಕ್‌, ಹೊಳಲು ಪಂಚಾಯ್ತಿಯ ನವೀನ್‌ ಮಲ್ಲೇಶ್‌ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

click me!