ಅನರ್ಹರ ರಕ್ಷಣೆ ಹೊಣೆ ಬಿಜೆಪಿಯದ್ದು : ಜೆಡಿಎಸ್ ಶಾಸಕ

By Web DeskFirst Published Sep 30, 2019, 1:08 PM IST
Highlights

ಮೈತ್ರಿ ಸರ್ಕಾರದಲ್ಲಿ ಯಾವ ಸ್ಥಿತಿ ಇತ್ತೋ ಅದೇ ಸ್ಥಿತಿ ಇಂದು ಯಡಿಯೂರಪ್ಪ ಎದುರಿಸುತ್ತಿದ್ದಾರೆ ಎಂದು ಜೆಡಿಎಸ್ ಶಾಸಕರೋರ್ವರು ಹೇಳಿದರು. 

ಹುಬ್ಬಳ್ಳಿ [ಸೆ.30]: ಮುಖ್ಯಮಂತ್ರಿ ಯಡಿಯೂರಪ್ಪಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲ. ಹೈ ಕಮಾಂಡ್ ಇದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಹೇಳಿದ್ದಾರೆ. 

ಹುಬ್ಬಳ್ಳಿಯಲ್ಲಿ ಮಾತನಾಡಿದ ಹೊರಟ್ಟಿ ರಾಜ್ಯದಲ್ಲಿ ಸರ್ಕಾರ ಸರ್ಕಾರ ನಡೆಸುವುದು ತಂತಿ ಮೇಲೆನಡೆದ ಹಾಗೆ ಆಗುತ್ತಿದೆ ಎನ್ನುವ ಬಿಎಸ್ ವೈ ಮಾತು ನೂರಕ್ಕೆ ನೂರು ಸತ್ಯ. ಅವರಿಗೆ ನಿರ್ಧಾರ ಕೈಗೊಳ್ಳಲು ಮುಂದೆಯೂ ನಿರ್ಧಾರ ಕೈಗೊಳ್ಳು ಆಗುವುದಿಲ್ಲ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಿಂದೆ ಮೈತ್ರಿಸರ್ಕಾರದಲ್ಲಿಯಾವಪರಿಸ್ಥಿತಿ ಇತ್ತೋ  ಅದೇ ಪರಿಸ್ಥಿತಿ ಈಗ ಬಿಜೆಪಿಯಲ್ಲಿ ಇದೆ. ಹಿಂದೆ ಕುಮಾರಸ್ವಾಮಿ ಅವರೂ ಸಹ ಇದೇ ರೀತಿಯ ಮಾತುಗಳನ್ನು ಆಡುತ್ತಿದ್ದರು. ಆಗ ಬಿಜೆಪಿಯವರು ಟೀಕೆ ಮಾಡುತ್ತಿದ್ದರು ಎಂದು ಹೊರಟ್ಟಿ ಹೇಳಿದರು. 

ಇನ್ನು ರಾಜ್ಯದಲ್ಲಿ ಘೋಷಣೆಯಾದ ವಿಧಾನಸಭಾ ಉಪ ಚುನಾವಣೆ ಮುಂದೂಡಿಕೆಯಾಗಿದ್ದು,  ನನ್ನ ರಾಜಕೀಯ ಇತಿಹಾಸದಲ್ಲೇ ಒಂದು ಬಾರಿ ಘೋಷಣೆಯಾದ ಚುನಾವಣೆ ಮುಂದೂಡಿದ್ದೇ ಇಲ್ಲ ಎಂದರು.

ಇನ್ನು ಅತೃಪ್ತರಾದವರನ್ನು ಅನರ್ಹರನ್ನಾಗಿಸಿದ ರಮೇಶ್ ಕುಮಾರ್ ಅವರ ನಿರ್ಧಾರ ಸರಿಯಾಗಿತ್ತು. ಅನರ್ಹರನ್ನು ರಕ್ಷಣೆ ಮಾಡುವುದು ಬಿಜೆಪಿಯವರ ಕರ್ತವ್ಯ ಎಂದು ಹೊರಟ್ಟಿ ಹೇಳಿದರು.

click me!