ಮೂರು ಗೋವುಗಳ ಮೇಲೆ ವಿಕೃತಿ ಮೆರೆದ ದುರುಳರು

Kannadaprabha News   | Asianet News
Published : Mar 16, 2021, 07:41 AM IST
ಮೂರು ಗೋವುಗಳ ಮೇಲೆ  ವಿಕೃತಿ ಮೆರೆದ ದುರುಳರು

ಸಾರಾಂಶ

ಮೂರು ಗೋವುಗಳ ಮೇಲೆ ದುರುಳರು ವಿಕೃತಿ ಮೆರೆದಿದ್ದಾರೆ. ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುಗಳ ಮೇಲೆ  ದುರುಳರುದಾಳಿ ಮಾಡಿದ್ದಾರೆ.

ಗದಗ (ಮಾ.16): ನಗರದ ಹೊರವಲಯದಲ್ಲಿರುವ ರಾಧಾಕೃಷ್ಣ ನಗರದ ನಿವಾಸಿಯೋರ್ವರ ಗೋವುಗಳ ಮೇಲೆ ಕೆಲವು ದುಷ್ಕರ್ಮಿಗಳು ದಾಳಿ ಮಾಡಿ ಮೂರು ಗೋವುಗಳ ಬಾಲವನ್ನು ಕತ್ತರಿಸಿದ್ದಾರೆ. 

ಇನ್ನೊಂದು ಹಸುವಿನ ಕೆಚ್ಚಲಿಗೆ ಹರಿತವಾದ ಆಯುಧಗಳಿಂದ ತೀವ್ರ ಗಾಯಗೊಳಿಸಿ ವಿಕೃತಿ ಮೆರೆದ ಘಟನೆ ಬೆಳಕಿಗೆ ಬಂದಿದೆ. ಗದಗ ರಾಧಾಕೃಷ್ಣ ನಗರದ ಬಳಿಯ ನಿವಾಸಿಯಾದ ಅನಸಮ್ಮ ಹಿರೇಮಠ ಎನ್ನುವವರಿಗೆ ಸೇರಿದ ಹಸುಗಳು ಇವು ಎಂದು ತಿಳಿದುಬಂದಿದೆ. 

ಸಗಣಿ ಕೈಯಲ್ಲೆತ್ತಿ ಭರಣಿ ಮಾಡೋ ನಾರಿ: ಬಾಸ್ಕೆಟ್ ಬಾಲ್ ಟೀಂಗೆ ಸೇರ್ಸಿ ಎಂದ ನೆಟ್ಟಿಗರು .

ಅನಸಮ್ಮ ಅವರು 30 ವರ್ಷಗಳಿಂದ ಹಸುಗಳನ್ನೇ ಸಾಕಿಕೊಂಡು ಅದರಿಂದ ಬರುವ ಆದಾಯದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಆದರೆ, ಭಾನುವಾರ ಯಾರೋ ದುಷ್ಕರ್ಮಿಗಳು ಕಟ್ಟಿಹಾಕಿದ್ದ ಮೂರು ಗೋವುಗಳ ಬಾಲವನ್ನು ಕತ್ತರಿಸಿದ್ದಾರೆ. ಗೋವುವೊಂದರ ಕೆಚ್ಚಲಿಗೆ ಮಾರಕಾಸ್ತ್ರದಿಂದ ತಿವಿದು ಗಂಭೀರವಾಗಿ ಗಾಯಗೊಳಿಸಿದ್ದಾರೆ. 

ಈ ಕುರಿತು ಗದಗ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ