ಕಲಾಪದಲ್ಲಿ ಪ್ರಮುಖ ಮಸೂದೆಗಳು; ಶೇ.  10  ಮೀಸಲು ಲೋಪಕ್ಕೆ  ಸರ್ಕಾರದ ಉತ್ತರ

Published : Mar 15, 2021, 08:11 PM IST
ಕಲಾಪದಲ್ಲಿ ಪ್ರಮುಖ ಮಸೂದೆಗಳು; ಶೇ.  10  ಮೀಸಲು ಲೋಪಕ್ಕೆ  ಸರ್ಕಾರದ ಉತ್ತರ

ಸಾರಾಂಶ

ವಿಧಾನಸಭೆ ಕಾರ್ಯಕಲಾಪ/  ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಕೇಂದ್ರದ 10 ಶೇ ಮೀಸಲಾತಿ ಜಾರಿ ಸಂಬಂಧಿಸಿದಂತೆ ಲೋಪ ವಿಚಾರ/ಬಿಜೆಪಿ ಶಾಸಕ ವೇದವ್ಯಾಸ ಕಾಮತ್  ಪ್ರಸ್ತಾಪ/ ಶೀಘ್ರವೇ ಸ್ಪಷ್ಟ ಆದೇಶ ಹೊರಡಿಸುವುದಾಗಿ ಬಸವರಾಜ ಬೊಮ್ಮಾಯಿ ಭರವಸೆ

ಬೆಂಗಳೂರು( ಮಾ. 15) ವಿಧಾನಸಭೆಯಲ್ಲಿ ಕರ್ನಾಟಕ ಪೌರಸಭೆಗಳ (ತಿದ್ದುಪಡಿ) ವಿಧೇಯಕ ಅಂಗೀಕಾರ. ವಿಧಾನಸಭೆಯಲ್ಲಿ ಮಂಗಳವಾರ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ ವಿಧೇಯಕ ಮಂಡಿಸಿದ್ದಾರೆ.

ಕುಷ್ಠರೋಗವು ಗುಣಪಡಿಸಬಹುದಾದ ಕಾಯಿಲೆಯಾಗಿದ್ದು, ಅದರಿಂದ ನರಳುತ್ತಿರುವ ವ್ಯಕ್ತಿಗಳ ವಿರುದ್ಧ ತಾರತಮ್ಯವನ್ನು ತೊಡೆದು ಹಾಕುವ ತಿದ್ದುಪಡಿ ವಿಧೇಯಕ ಸಹ ಮಂಡನೆಯಾಗಿದೆ ಯಾವುದೇ ಅಪಾಯಕಾರಿ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯನ್ನು ಮಾರುಕಟ್ಟೆಗೆ ಪ್ರವೇಶಿಸಲು ತಡೆಯುವಂತಿಲ್ಲ ಯಾವುದೇ ವ್ಯಕ್ತಿಯು ಗಲಭೆ ಮಾಡಿದರೆ ಅಂತಹವರ ಮೇಲೆ ಕ್ರಮ ಜರುಗಿಸುವ ಅವಕಾಶ ಈ ಹೈಲೈಟ್ಸ್ ಗಳು ಇವೆ.

ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಕೇಂದ್ರದ 10 ಶೇ. ಮೀಸಲಾತಿ ಜಾರಿ ಸಂಬಂಧಿಸಿದಂತೆ ಲೋಪ ವಿಚಾರ ಸಹ ಚರ್ಚೆಯಾಯಿತು.  ಈ ಸಮಸ್ಯೆಗೆ ಸಂಬಂಧಿಸಿದಂತೆ ಗಮನ ಸೆಳೆಯುವ ಸೂಚನೆಯಲ್ಲಿ ಬಿಜೆಪಿ ಶಾಸಕ ವೇದವ್ಯಾಸ ಕಾಮತ್  ಪ್ರಸ್ತಾಪ ಮಾಡಿದರು.

1ರಿಂದ 5ನೇ ತರಗತಿ ಓಪನ್ ಮಾಡಿದ ಶಾಲೆಗಳಿಗೆ ಶಾಕ್ ಕೊಟ್ಟ ಸುರೇಶ್ ಕುಮಾರ್

ಮೀಸಲಾತಿ ಪಟ್ಟಿಯಲ್ಲಿ ಸಮುದಾಯದ ಉಪ ಜಾತಿಗಳು ಬಿಟ್ಟು ಹೋಗಿವೆ. ಈ ಕಾರಣದಿಂದ ಕಂದಾಯ ಇಲಾಖೆಯಿಂದ ಪ್ರಮಾಣ ಪತ್ರ ನೀಡುತ್ತಿಲ್ಲ.ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿದೆ ಎಂಬ ವಿಚಾರ ಮುಂದಿಟ್ಟರು.  ಇದಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಸಚಿವ ಶಿವರಾಮ ಹೆಬ್ಬಾರ್ ದನಿಗೂಡಿಸಿದರು. ಇದರಿಂದ ವಿದ್ಯಾರ್ಥಿಗಳಿಗೆ ಅನಾನುಕೂಲ ಆಗುತ್ತಿದೆ. ಈ ನಿಟ್ಟಿನಲ್ಲಿ ಸಮಸ್ಯೆಗೆ ತ್ವರಿತವಾಗಿ ಸ್ವಂದಿಸುವಂತೆ ಸಚಿವ ಹೆಬ್ಬಾರ್ ಮನವಿ ಮಾಡಿಕೊಂರು.

ಇದಕ್ಕೆ ಸಚಿವ ಬಸವರಾಜ ಬೊಮ್ಮಾಯಿ ಉತ್ತರ ನೀಡಿ ಈ ಸಮಸ್ಯೆಯನ್ನು ಸರಿಪಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಸದನ ಮುಗಿಯೋದರ ಒಳಗಾಗಿ ಸ್ಪಷ್ಟವಾದ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.

PREV
click me!

Recommended Stories

ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ