ಹುಬ್ಬಳ್ಳಿಯಲ್ಲಿ ಚಿಗರಿ ಡಿಕ್ಕಿ: ಸ್ಥಳದಲ್ಲೇ ವ್ಯಕ್ತಿ ಸಾವು

Kannadaprabha News   | Asianet News
Published : Feb 26, 2020, 10:52 AM IST
ಹುಬ್ಬಳ್ಳಿಯಲ್ಲಿ ಚಿಗರಿ ಡಿಕ್ಕಿ: ಸ್ಥಳದಲ್ಲೇ ವ್ಯಕ್ತಿ ಸಾವು

ಸಾರಾಂಶ

BRTS ಚಿಗರಿ ಬಸ್ ಡಿಕ್ಕಿ: ಸ್ಥಳದಲ್ಲೇ ಸಾವು| ಹುಬ್ಬಳ್ಳಿಯಲ್ಲಿ ನಡೆದ ಘಟನೆ| ಮೃತ ವ್ಯಕ್ತಿಯ ಮಾಹಿತಿ ತಿಳಿದು ಬಂದಿಲ್ಲ|ಭೈರಿದೇವರಕೊಪ್ಪದ ಬಸ್‌ ನಿಲ್ದಾಣದಿಂದ ಎದುರಿನ ಶಿವಾನಂದ ಮಠದ ಕಡೆ ರಸ್ತೆ ದಾಟುತ್ತಿದ್ದ ವೇಳೆ ನಡೆದ ಘಟನೆ| 

ಹುಬ್ಬಳ್ಳಿ(ಫೆ.26): ನಗರದ ಭೈರಿದೇವರ ಕೊಪ್ಪದ ಬಳಿಯ ಕ್ರಾಸ್‌ನಲ್ಲಿ ಮಂಗಳವಾರ ಸಂಜೆ ರಸ್ತೆ ದಾಟುತ್ತಿದ್ದ ಅಪರಿಚಿತ ವ್ಯಕ್ತಿಗೆ ಚಿಗರಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. 

ಮೃತ ವ್ಯಕ್ತಿ ನವನಗರದ ನಿವಾಸಿ ಎನ್ನಲಾಗಿದ್ದು, ಆತನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಭೈರಿದೇವರಕೊಪ್ಪದ ಬಸ್‌ ನಿಲ್ದಾಣದಿಂದ ಎದುರಿನ ಶಿವಾನಂದ ಮಠದ ಕಡೆ ರಸ್ತೆ ದಾಟುತ್ತಿದ್ದ ವೇಳೆ ಎದುರಿಗೆ ಬಂದ ಚಿಗರಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವ್ಯಕ್ತಿ ತಲೆಗೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಆತಂಕದ ವಿಷಯ: ಬೆಂಗಳೂರಿನಲ್ಲಿ 11 ವರ್ಷದ ಮಕ್ಕಳಿಗೂ ಡ್ರಗ್ಸ್‌ ಚಟ!
ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!