ಮಂಗಳೂರು ಗಲಭೆ ಹಾಗೂ ಗೋಲಿಬಾರ್ ಘಟನೆಗೆ ಸಂಬಂಧಿಸಿ ಮಂಗಳವಾರ ನಗರದ ಎಸಿ ಕಚೇರಿ ಕೋರ್ಟ್‌ನಲ್ಲಿ ನಡೆದ ಮ್ಯಾಜಿಸ್ಟ್ರೀರಿಯಲ್ ತನಿಖೆಯಲ್ಲಿ ಪೊಲೀಸ್ ಇಲಾಖೆ ಪರವಾದ ಸಾಕ್ಷ್ಯವನ್ನು ಸಲ್ಲಿಸಲಾಯಿತು. ಪೊಲೀಸರ ವೈಯಕ್ತಿಕ ಸಾಕ್ಷ್ಯ ಸಲ್ಲಿಕೆಗೆ ಮಾಚ್‌ರ್ 4ರಂದು ಅವಕಾಶ ನೀಡಲಾಗಿದೆ.
ಮಂಗಳೂರು(ಫೆ.26): ಮಂಗಳೂರು ಗಲಭೆ ಹಾಗೂ ಗೋಲಿಬಾರ್ ಘಟನೆಗೆ ಸಂಬಂಧಿಸಿ ಮಂಗಳವಾರ ನಗರದ ಎಸಿ ಕಚೇರಿ ಕೋರ್ಟ್‌ನಲ್ಲಿ ನಡೆದ ಮ್ಯಾಜಿಸ್ಟ್ರೀರಿಯಲ್ ತನಿಖೆಯಲ್ಲಿ ಪೊಲೀಸ್ ಇಲಾಖೆ ಪರವಾದ ಸಾಕ್ಷ್ಯವನ್ನು ಸಲ್ಲಿಸಲಾಯಿತು. ಪೊಲೀಸರ ವೈಯಕ್ತಿಕ ಸಾಕ್ಷ್ಯ ಸಲ್ಲಿಕೆಗೆ ಮಾಚ್‌ರ್ 4ರಂದು ಅವಕಾಶ ನೀಡಲಾಗಿದೆ.
ಉಡುಪಿ ಜಿಲ್ಲಾಧಿಕಾರಿ ಜಗದೀಶ್ ನೇತೃತ್ವದಲ್ಲಿ ನಡೆಯುತ್ತಿರುವ ಮ್ಯಾಜಿಸ್ಟ್ರೀರಿಯಲ್ ತನಿಖೆಯಲ್ಲಿ ಇದುವರೆಗೆ ಸಾರ್ವಜನಿಕರ ಹಾಗೂ ಸಂತ್ರಸ್ತರ ಸಾಕ್ಷ್ಯ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಮಂಗಳವಾರ ಪೊಲೀಸರಿಗೆ ವೈಯಕ್ತಿವಾಗಿ ಸಾಕ್ಷ್ಯ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ನೋಟಿಸ್ ಪಡೆದ ಪೊಲೀಸರಿಗೆ ಅನಿವಾರ್ಯ ಕಾರಣದಿಂದ ಸಾಕ್ಷ್ಯ ಸಲ್ಲಿಕೆಗೆ ಹಾಜರಾಗಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಕೇವಲ ದಾಖಲೆಗಳ ಸಾಕ್ಷ್ಯವನ್ನು ಮಾತ್ರ ಸಲ್ಲಿಸಲಾಯಿತು.
undefined
ಬಸ್‌ನಲ್ಲೇ ಎದೆನೋವು: ಮಾನವೀಯತೆ ಮೆರೆದ ಚಾಲಕ, ನಿರ್ವಾಹಕ
ಪಣಂಬೂರು ಎಸಿಪಿ ಬೆಳ್ಳಿಯಪ್ಪ ಅವರು ಪೊಲೀಸ್ ಇಲಾಖೆಯ ಪರವಾಗಿ ಗಲಭೆ ಹಿಂಸಾಚಾರ ಹಾಗೂ ಗೋಲಿಬಾರ್ ಘಟನೆಗೆ ಸಂಬಂಧಿಸಿ ಮರಣೋತ್ತರ ಪರೀಕ್ಷಾ ವರದಿ, ಕೇಸುಗಳ ದಾಖಲಾತಿ, ಎಫ್‌ಎಸ್‌ಎಲ್ ವರದಿ ಸೇರಿದಂತೆ ಪ್ರಮುಖ ಸಾಕ್ಷ್ಯಗಳ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ಸಲ್ಲಿಸಿದರು. ಬೇರೆ ಯಾವುದೇ ಸಾಕ್ಷ್ಯಗಳ ಸಲ್ಲಿಕೆ ಇಲ್ಲದ ಕಾರಣ ಕೇವಲ ಅರ್ಧ ಗಂಟೆಯಲ್ಲಿ ವಿಚಾರಣೆ ಮುಕ್ತಾಯಗೊಳಿಸಲಾಯಿತು. ಈ ವೇಳೆ ಅಂದಿನ ಮಂಗಳೂರು ಉತ್ತರ ಎಸಿಪಿಯಾಗಿದ್ದ ಶ್ರೀನಿವಾಸ ಗೌಡ ಸೇರಿದಂತೆ 25 ಮಂದಿ ಪೊಲೀಸರಿಗೆ ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿ ಸೂಚನೆ ನೀಡಿದ್ದಾರೆ. ಬಳಿಕ ಮುಂದಿನ ವಿಚಾರಣೆಯನ್ನು ಮಾಚ್‌ರ್ 4ರಂದು ನಿಗದಿಪಡಿಸಲಾಗಿದೆ.
ಮಾ.4ರಂದು ಪೊಲೀಸರ ವೈಯಕ್ತಿಕ ವಿಚಾರಣೆ:
ಗೋಲಿಬಾರ್ ಘಟನೆ ಬಗ್ಗೆ ಸಾಕ್ಷ್ಯ ಹೇಳಲು ಸಿದ್ಧರಿರುವ 176 ಪೊಲೀಸರ ಪಟ್ಟಿಯನ್ನು ಪೊಲೀಸ್ ಇಲಾಖೆ ಈಗಾಗಲೇ ನೀಡಿರುವುದರಿಂದ ಮಾ.4ರ ವಿಚಾರಣೆಯಲ್ಲಿ ಪೊಲೀಸರು ವೈಯಕ್ತಿಕ ಸಾಕ್ಷ್ಯ ಹಾಗೂ ಹೇಳಿಕೆ ನೀಡಬೇಕಾಗಿದೆ.
ಅಂದು 176 ಮಂದಿಯ ಪೈಕಿ 12 ಮಂದಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಸಾಕ್ಷ್ಯ ಹೇಳಲು ಅವಕಾಶ ನೀಡಲಾಗುವುದು. ಉಳಿದವರಿಗೆ ಹಂತ ಹಂತವಾಗಿ ಸಾಕ್ಷ್ಯ ನೀಡಲು ಅವಕಾಶ ಮಾಡಲಾಗುವುದು. ಮಂಗಳೂರು ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಮತ್ತು ಡಿಸಿಪಿ ಅರುಣಾಂಶಗಿರಿ ಅವರ ಹೆಸರು ಕೂಡ ಪಟ್ಟಿಯಲ್ಲಿವೆ. ಅವರು ಖದ್ದು ಹಾಜರಾಗಿ ಹೇಳಿಕೆ ನೀಡಲು ನೋಟಿಸ್ ಜಾರಿಗೊಳಿಸಲಾಗಿದೆ.
ಈವರೆಗೆ ಏನೇನಾಗಿದೆ?:
ಡಿ.19ರಂದು ಅಹಿತಕರ ಪ್ರಕರಣ ಹಾಗೂ ಗೋಲಿಬಾರ್ ಘಟನೆ ನಡೆದ ಸ್ಥಳಗಳನ್ನು ಡಿ.31ರಂದು ಮಹಜರು ಮಾಡಲಾಗಿದೆ. ಜ.7, ಫೆ.6, ಫೆ.13ರಂದು ಸಾರ್ವಜನಿಕರ ಲಿಖಿತ ಸಾಕ್ಷ್ಯ ಹೇಳಿಕೆ ಮತ್ತು ವಿಡಿಯೋ ದೃಶ್ಯಾವಳಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ 203 ಮಂದಿ ಸಾಕ್ಷ್ಯ ನುಡಿದಿದ್ದರು. ಪೊಲೀಸರು 50 ವಿಡಿಯೋಗಳಿರುವ ಪೆನ್‌ಡ್ರೈವ್ ನೀಡಿದ್ದಾರೆ. ಸಾರ್ವಜನಿಕರು ಕೂಡ 1 ವೀಡಿಯೋ ಸಿಡಿ ನೀಡಿದ್ದಾರೆ. ಬುಧವಾರ ಮಾಜಿ ಮೇಯರ್ ಕೆ. ಅಶ್ರಫ್ ಲಿಖಿತ ಸಾಕ್ಷ್ಯ ಹೇಳಿಕೆ ನೀಡಿದ್ದರು. ಅಂದಿನವರೆಗೆ 204 ಸಾಕ್ಷ್ಯಗಳನ್ನು ದಾಖಲಿಸಿಕೊಂಡಂತಾಗಿದೆ.