ಬಾಂಬ್‌ ಇಟ್ಟ ಆದಿತ್ಯರಾವ್ ಬಗ್ಗೆ ತಮ್ಮನ ಪ್ರತಿಕ್ರಿಯೆ.!

Suvarna News   | Asianet News
Published : Jan 22, 2020, 12:37 PM IST
ಬಾಂಬ್‌ ಇಟ್ಟ ಆದಿತ್ಯರಾವ್ ಬಗ್ಗೆ ತಮ್ಮನ ಪ್ರತಿಕ್ರಿಯೆ.!

ಸಾರಾಂಶ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆದಿತ್ಯ ರಾವ್ ಸಹೋದರ ಅಕ್ಷತ್ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮನ ಬಗ್ಗೆ ಅವರೇನು ಹೇಳಿದ್ದಾರೆ..? ಇಲ್ಲಿ ಓದಿ.

ಮಂಗಳೂರು(ಜ.22): ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆದಿತ್ಯ ರಾವ್ ಬಗ್ಗೆ ಮಂಗಳೂರಿನ ಚಿಲಿಂಬಿಯಲ್ಲಿ ಆದಿತ್ಯ ರಾವ್ ತಮ್ಮ ಅಕ್ಷತ್ ಪ್ರತಿಕ್ರಿಯೆ ನೀಡಿದ್ದಾರೆ.

ಆದಿತ್ಯ ರಾವ್ ನನ್ನ ಅಣ್ಣ ಹೌದು. ಬೆದರಿಕೆ ಕರೆ ಮಾಡಿದಾಗ ಬುದ್ಧಿ ಹೇಳಿದ್ದೇವೆ. ಅವನನ್ನು ಮನೆಯಿಂದಲೇ ಬಿಟ್ಟಿದ್ದೇವೆ. ನಮಗೆ ಅವನ ಸಂಪರ್ಕ ಇಲ್ಲ. ನಾವು ನಮ್ಮ ಕೆಲಸ ಮಾಡಿ ದುಡಿತಿದ್ದೇವೆ. ಅವನ ಕೃತ್ಯಕ್ಕೆ ಜವಬ್ದಾರಿ ಆಗಲು ನಮಗೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಆದಿತ್ಯಗೆ ಸಪೋರ್ಟ್ ಮಾಡಿಲ್ಲ:

ಎರಡು ವರ್ಷ ಆಯಿತು ಅವನ ಸಂಪರ್ಕ ಇಲ್ಲ. ಚಿಕ್ಕಂದಿನಿಂದ ಸರಿಯಾಗೆ ಇದ್ದ. 8 ನೇ ಕ್ಲಾಸ್ ನಿಂದ ಹಾಸ್ಟೆಲ್‌ಗೆ ಹೋಗಿದ್ದ. ಎಂಬಿಎ, ಬಿಇ ವಿದ್ಯಾಭ್ಯಾಸ ಮಾಡಿದ್ದ. ಅವನ ಕೃತ್ಯದ ಬಗ್ಗೆಯೂ ತಿಳಿಯುವ ಆಸಕ್ತಿ ಇಲ್ಲ. ನಾವು ಅವನಿಗೆ ಯಾವುದೇ ಸಪೋರ್ಟ್ ಮಾಡಿಲ್ಲ. ಪೊಲೀಸರಿಗೆ ಸಪೋರ್ಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಬೇಲ್ ತೆಗೆದುಕೊಳ್ಳುವುದಕ್ಕೆ ಯಾರೂ ಸಹಾಯ ಮಾಡಿಲ್ಲ. ಅವನ ಬಗ್ಗೆ ನಮಗೂ ಭಯ ಇದೆ. ತಾಯಿ ತೀರಿಕೊಂಡಾಗ ವಿಷಯ ಹೇಳಲು ಕರೆ ಮಾಡಿದ್ದೆವು. ಆಗ ಆತ ಚಿಕ್ಕಬಳ್ಳಾಪುರ ಜೈಲ್‌ನಲ್ಲಿ ಇದ್ದ. ನಾವು ಇಬ್ಬರೇ ಮಕ್ಕಳು. ಮೂಲತಃ ನಾವು ಮಣಿಪಾಲದಲ್ಲೇ ವಾಸವಿದ್ದೆವು ಎಂದು ತಿಳಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣ ಬಾಂಬರ್ ಆರೋಪಿ ಪೊಲೀಸರಿಗೆ ಶರಣು

ಇಲ್ಲಿಗೆ ನಾವು ಬಂದು 6 ತಿಂಗಳಾಯಿತು. ಆತನ ಬಗ್ಗೆ ನನ್ನ ಬಹಳಷ್ಟು ಊಹೆಗಳು ತಪ್ಪಾಗಿದೆ. ಆತ ಮನೆ ಬಿಟ್ಟು ಮೂರು ವರ್ಷ ಆಯಿತು. ಆ ಬಳಿಕ ಮನೆಗೆ ಬಂದಿಲ್ಲ. ಮನೆಗೆ ಬರೋದು ಬೇಡ ಎಂದು ತಂದೆ ಹೇಳಿದ್ದಾರೆ ಎಂದು ಮಂಗಳೂರಿನಲ್ಲಿ ಅಕ್ಷತ್ ರಾವ್ ಹೇಳಿಕೆ ನೀಡಿದ್ದಾರೆ.

PREV
click me!

Recommended Stories

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ
ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು