ಮಸ್ಕಿ ಉಪಚುನಾವಣೆಗೆ ಮತ್ತೊಂದು ‌ಕಂಟಕ: ಪಾಟೀಲ್ ವಿರುದ್ಧ ದೂರು ದಾಖಲು

By Suvarna News  |  First Published Jan 22, 2020, 12:13 PM IST

ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಹೈಕೋರ್ಟ್ ನಲ್ಲಿ ದೂರು ದಾಖಲಿಸಿದ ಎಂಇಪಿ ಪಕ್ಷದ ಅಭ್ಯರ್ಥಿ ಬಾಬುನಾಯಕ|ಉಪಚುನಾವಣೆಗೆ ತಡೆಯಾಗುವ ಸಾಧ್ಯತೆ| ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಅಕ್ರಮ ಮತದಾನದ ದೂರು ದಾಖಲು|


ರಾಯಚೂರು[ಜ.22]: ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತ್ತೊಂದು ‌ಕಂಟಕ ಎದುರಾಗಿದೆ. ಹೌದು, ಎಂಇಪಿ ಪಕ್ಷದ ಅಭ್ಯರ್ಥಿ ಬಾಬುನಾಯಕ ಅವರು ಜ. 3 ರಂದು ಬೆಂಗಳೂರಿನ ಹೈಕೋರ್ಟ್ ನಲ್ಲಿ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಹೀಗಾಗಿ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಇನ್ನೊಂದು ಕೇಸ್ ಬಾಕಿ ಇರುವ ಕಾರಣ ಉಪಚುನಾವಣೆಗೆ ತಡೆಯಾಗುವ ಸಾಧ್ಯತೆ ಇದೆ. 

ಎಂಇಪಿ ಪಕ್ಷದ ಅಭ್ಯರ್ಥಿ ಬಾಬುನಾಯಕ ಅವರು ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಹೈಕೋರ್ಟ್ ನಲ್ಲಿ ಅಕ್ರಮ ಮತದಾನದ ಆರೋಪದ ದೂರು ದಾಖಲಿಸಿದ್ದಾರೆ. ಅಕ್ರಮ ಮತದಾನ ನಡೆಸಿ ಪ್ರತಾಪ್ ಗೌಡ ಪಾಟೀಲ್ 213 ಮತಗಳಿಂದ ಜಯಗಳಿಸಿದ್ದರು.  ಹೀಗಾಗಿ ಬಿಜೆಪಿ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಅವರು ಪರಾಭವಗೊಂಡಿದ್ದರು. ಈ ಹಿಂದೆ ಬಿಜೆಪಿ ಪರಾಜಿತ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಅವರು ದೂರು ದಾಖಲಿಸಿದ್ದರು. ಆದರೆ, ಯಡಿಯೂರಪ್ಪ ಸರ್ಕಾರ ಬಂದ ಮೇಲೆ ತುರ್ವಿಹಾಳ ಅವರು ಪ್ರತಾಪ್ ಗೌಡ ಪಾಟೀಲ್ ವಿರುದ್ಧ ದಾಖಲಿಸಿದ್ದ ಕೇಸ್ ಅನ್ನು ವಾಪಸ್ ಪಡೆದಿದ್ದರು.

Latest Videos

undefined

ರಾಯಚೂರು: ಮಸ್ಕಿ ವಿಧಾನಸಭಾ ಉಪಚುನಾವಣೆ ಹಾದಿ ಸುಗಮ

ಕೇಸ್ ವಾಪಸ್ ಪಡೆದಿದ್ದ ಪ್ರಕರಣ ಇತ್ಯರ್ಥವಾಗುವ ಮುನ್ನವೇ ಮತ್ತೊಬ್ಬ ಅಭ್ಯರ್ಥಿ ಯಿಂದ ಪ್ರತಾಪ್ ಗೌಡ ವಿರುದ್ಧ ಕೇಸ್ ದಾಖಲಾಗಿದೆ. ಹೈಕೋರ್ಟ್ ವಿಚಾರಣೆ ಆರಂಭಿಸಿದರೆ ಮಸ್ಕಿ ಉಪಚುನಾವಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. 
 

click me!