ಮೃತರ ತಾಯಿ ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ನೀರು ತರಲು ಹೋಗಿದ್ದಾಗ ಆಟವಾಡ್ತಿದ್ದ ವೇಳೆ ನೀರಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರು(ಅ.22): ನೀರು ತರಲು ಹೋಗಿದ್ದ ಅಣ್ಣ, ತಂಗಿ ನೀರು ಪಾಲಾಗಿರುವ ಶಂಕೆ ವ್ಯಕ್ತವಾದ ಘಟನೆ ನಿನ್ನೆ ಸಂಜೆ ಆರು ಗಂಟೆ ಸುಮಾರಿಗೆ ನಡೆದಿದೆ.
ಕೆಂಗೇರಿ ಕೆರೆಯಲ್ಲಿ ನೀರು ತರಲು ಹೋಗಿದ್ದ ಅಣ್ಣ, ತಂಗಿ ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ಅಣ್ಣ ಶ್ರೀನಿವಾಸ್ (13), ತಂಗಿ ಲಕ್ಷ್ಮೀ (11) ಕಾಣೆಯಾದವರಾಗಿದ್ದಾರೆ.
ರಾಜ್ಯಾದ್ಯಂತ ಹಿಂಗಾರು ಮಳೆಯ ಅಬ್ಬರ: ಭಾರೀ ಪ್ರಮಾಣದಲ್ಲಿ ಬೆಳೆ ಹಾನಿ
ಮೃತರ ತಾಯಿ ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ನೀರು ತರಲು ಹೋಗಿದ್ದಾಗ ಆಟವಾಡ್ತಿದ್ದ ವೇಳೆ ನೀರಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬಂದಿರುವ ಪೋಲಿಸರು ಮಕ್ಕಳಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.