ಮದುವೆಯಲ್ಲಿ ವಧು, ವರರಿಗೆ ಕುಮಾರಸ್ವಾಮಿಯದ್ದೇ ಜಪ..!

By Girish Goudar  |  First Published May 14, 2022, 10:18 AM IST

* ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡೆಕೊಪ್ಪ ಗ್ರಾಮದಲ್ಲಿ ನಡೆದ ಮದುವೆ
*  ಮದುವೆಯಲ್ಲಿಯೂ ಕುಮಾರಣ್ಣನ ಹಾಗೂ ಜೆಡಿಎಸ್‌ ಪಕ್ಷದ ಅಭಿಮಾನ
*  ರಾಜ್ಯದ ಸಮಗ್ರ ನೀರಾವರಿಗಾಗಿ 2023 ರ ಚುನಾವಣೆಯಲ್ಲಿ ಕುಮಾರಣ್ಣನಿಗೆ ಬೆಂಬಲಿಸಿ 
 


ವರದಿ: ದೊಡ್ಡೇಶ್ ಯಲಿಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಪ್ಪಳ

ಕೊಪ್ಪಳ(ಮೇ.14):  ಸಾಮಾನ್ಯವಾಗಿ ಮದುವೆಯಲ್ಲಿ(Marriage) ವಧು, ವರರು ತಮ್ಮ ಮುಂದಿನ ಜೀವನ ಯಾವ ರೀತಿಯಾಗಿರಬೇಕೆಂದು ಜಪ ಮಾಡುತ್ತಿರುತ್ತಾರೆ. ಆದರೆ ಇಲ್ಲೊಂದು ಜೋಡಿ ಮುಂದಿನ ಸಿಎಂ ಎಚ್.ಡಿ. ಕುಮಾರಸ್ವಾಮಿ(HD Kumaraswamy) ಆಗಲೆಂದು ಜಪ ಮಾಡಿದ್ದಾರೆ. 

Latest Videos

undefined

ಮದುವೆಯಲ್ಲಿ ಎಚ್‌ಡಿಕೆ ಜಪ 

ಕೊಪ್ಪಳ(Koppal) ಜಿಲ್ಲೆ ಇದು ಈ ಮುಂಚೆ ಜನತಾ ಪರಿವಾರದ ಜಿಲ್ಲೆ. ಈ ಹಿಂದೆ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಜನತಾದಳದ(Janata Dal) ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದರು. ಆದರೆ ಈ ಜಿಲ್ಲೆ ಇತ್ತೀಚಿಗೆ ಇದು ಬಿಜೆಪಿ-ಕಾಂಗ್ರೆಸ್‌ನ(BJP-Congress) ಪ್ರಾಬಲ್ಯದ ಜಿಲ್ಲೆಯಾಗಿದೆ. ಆದರೂ ಸಹ ಇಲ್ಲಿ ಇನ್ನೂ ಜನತಾದಳದ ಕಟ್ಟಾ ಬೆಂಬಲಿಗರು ಇದ್ದಾರೆ. ಅದೇ ರೀತಿಯಾಗಿ ಕುಷ್ಟಗಿ ತಾಲೂಕಿನ ಕಡೆಕೊಪ್ಪ ಗ್ರಾಮದಲ್ಲಿ ನಡೆದ ಮದುವೆಯೊಂದರಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ.

Koppal: ಸರ್ಕಾರದಲ್ಲಿ ರಾಗಿಗೆ ಇರುವ ಕಿಮ್ಮತ್ತು ಭತ್ತಕ್ಕಿಲ್ಲ..!

ಕುಮಾರಣ್ಣನ ಬೆಂಬಲಕ್ಕೆ ಮನವಿ ಮಾಡಿದ ಜೋಡಿ ಯಾರು?

ಇನ್ನು 2023 ರಲ್ಲಿ ಕುಮಾರಣ್ಣನಿಗೆ ಬೆಂಬಲಿಸಿ ಎಂದು ಮನವಿ ಮಾಡಿದ ಯಾರು ಎಂದು ನೋಡೋದಾದ್ರೆ ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದ ನಿಡಗುಂದಿಮಠ ಕುಟುಂಬ ಯಾವಾಗಲೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಕಟ್ಟಾ ಬೆಂಬಲಿಗರು. ಈ ಹಿನ್ನಲೆಯಲ್ಲಿ ಅವರ ಕುಟುಂಬದ ಜಗದೀಶ್ ನಿಡಗುಂದಿಮಠ(Jagadish Nidagundimatha), ಪೂಜಾ ನಿಡಗುಂದಿಮಠ(Puja Nidagundimatha) ಎನ್ನುವರು ತಮ್ಮ ಮದುವೆಯಲ್ಲಿ ಕುಮಾರಸ್ವಾಮಿ ಅವರನ್ನು ಬೆಂಬಲಿಸಿ ಎಂದು ಪೋಸ್ಟರ್‌ವೊಂದನ್ನು ಹಿಡಿದುಕೊಂಡು ತಮಗೆ ಶುಭಾಶಯ ಕೋರಲು ಬರುವವರಿಗೆ ಮನವಿ ಮಾಡಿದ್ದಾರೆ.

Koppal: ಗುಂಡಿಯಲ್ಲಿ ಬಿದ್ದು 15 ವರ್ಷದ ಬಾಲಕಿ ಸಾವು: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ!

ಯಾವ ಕಾರಣಕ್ಕಾಗಿ ಬೆಂಬಲಕ್ಕೆ ಮನವಿ

ಇನ್ನೂ ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳು ಇನ್ನೂ ಸಹ ನೀರಾವರಿಯಿಂದ(Irrigation) ವಂಚಿತವಾಗಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ಜೆಡಿಎಸ್(JDS) ಪಕ್ಷ ನಿನ್ನೆಯಷ್ಟೇ ಜನತಾ ಜಲಧಾರೆ(Janata Jaladhare) ಎನ್ನುವ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮವನ್ನು ಮಾಡಿದೆ. ಈ ಮೂಲಕ ನೀರಾವರಿ ಮಾಡುವ ಭರವಸೆಯನ್ನು ಜೆಡಿಎಸ್ ಪಕ್ಷ ನೀಡಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ(Karnataka) ಸಮಗ್ರ ನೀರಾವರಿ ಆಗಬೇಕಾದರೆ ಅದು ಕುಮಾರಣ್ಣಿಂದ ಮಾತ್ರ ಸಾಧ್ಯ. ಹೀಗಾಗಿ ರಾಜ್ಯದ ಸಮಗ್ರ ನೀರಾವರಿಗಾಗಿ 2023 ರ ಚುನಾವಣೆಯಲ್ಲಿ(Karnataka Assembly Election 2023) ಕುಮಾರಣ್ಣನಿಗೆ ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ.

ಮದುವೆ ಎನ್ನುವುದು ಖಾಸಗಿ ವಿಷಯ. ಹೀಗಾಗಿ ಮದುವೆಗೆ ಎಲ್ಲ ಪಕ್ಷದವರು ಬಂದಿರುತ್ತಾರೆ. ಅಂತದರಲ್ಲಿ ತಮ್ಮ ಮದುವೆಯಲ್ಲಿ ಜೆಡಿಎಸ್‌ನ  ಕುಮಾರಸ್ವಾಮಿಗೆ ಬೆಂಬಲಿಸುವಂತೆ ಮನವಿ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಮಾತುಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿವೆ. ಒಟ್ಟಿನಲ್ಲಿ ಮದುವೆಯಲ್ಲಿಯೂ ಸಹ ಕುಮಾರಣ್ಣನ ಹಾಗೂ ಅವರ ಪಕ್ಷದ ಮೇಲೆ ಅಭಿಮಾನ ತೋರಿಸಿರುವ ನಿಡಗುಂದಿಮಠ ಕುಟುಂಬ ಮತ್ತೊಮ್ಮೆ ತಾವು ಕಟ್ಟಾ ಕುಮಾರಣ್ಣನ ಬೆಂಬಲಿಗರು ಎಂದು ತೋರಿಸಿಕೊಟ್ಟಿದ್ದಾರೆ.
 

click me!