ವಿವಾಹಕ್ಕೆ ಸೇರಿದ್ದ ಹೆಚ್ಚುವರಿ ಜನರಿಗೆ ಗೇಟ್‌ಪಾಸ್‌ : ದೂರು ದಾಖಲು

By Kannadaprabha News  |  First Published Apr 24, 2021, 3:40 PM IST

 ವಿವಾಹಕ್ಕೆ 50 ಜನರ ಮಿತಿ ನೀಡಿದ್ದು, ನಿಯಮಾವಳಿ ಮೀರಿ ವಿವಾಹದಲ್ಲಿ ಸೇರಿದ್ದ ಹೆಚ್ಚಿನ ಜನರನ್ನು ಪೊಲೀಸರು ಸಭಾಂಗಣದಿಂದ ಹೊರಗೆ ಕಳುಹಿಸಿದ ಘಟನೆ ನಡೆಯಿತು


ದಾಬಸ್‌ಪೇಟೆ (ಏ.24):  ಕೋವಿಡ್‌-19 ಸೋಂಕಿನ ನಿಯಂತ್ರಣಕ್ಕಾಗಿ ಸರ್ಕಾರ ಮಾರ್ಗಸೂಚಿಯಲ್ಲಿ ವಿವಾಹಕ್ಕೆ 50 ಜನರ ಮಿತಿ ನೀಡಿದ್ದು, ನಿಯಮಾವಳಿ ಮೀರಿ ವಿವಾಹದಲ್ಲಿ ಸೇರಿದ್ದ ಹೆಚ್ಚಿನ ಜನರನ್ನು ಪೊಲೀಸರು ಸಭಾಂಗಣದಿಂದ ಹೊರಗೆ ಕಳುಹಿಸಿದ ಘಟನೆ ಸೋಂಪುರ ಹೋಬಳಿಯ ನರಸೀಪುರ ಗ್ರಾಮದ ಆತ್ಮರಾಮ ಸಮುದಾಯ ಭವನದಲ್ಲಿ ನಡೆದಿದೆ.

ಕೋವಿಡ್‌-19 ನಿಯಮಾವಳಿ ಮೀರಿ ವಿವಾಹ ನಡೆಯುತ್ತಿದ್ದ ವೇಳೆ ಶಕ್ರವಾರ ಪೊಲೀಸರು ಮದುವೆ ಮಂಟಪಕ್ಕೆ ತೆರಳಿ 50 ಜನಕ್ಕೆ ಮಾತ್ರ ಇರಲು ಅವಕಾಶ ನೀಡಿ ಉಳಿದವರನ್ನು ಹೊರಕ್ಕೆ ಕಳಿಸಿ ನಿಯಮ ಉಲ್ಲಂಘಿಘಿಸಿದವರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

Latest Videos

undefined

ದಕ್ಷಿಣ ಕನ್ನಡದಲ್ಲಿ ಮದುವೆ, ಮುಂಜಿ ಮಾಡುತ್ತಿರುವವರ ಗಮನಕ್ಕೆ ...

ಈ ಮೊದಲೇ ನಿಗದಿಯಾಗಿದ್ದ ಈ ವಿವಾಹದಲ್ಲಿ ಮಾಸ್ಕ್‌ ಧರಿಸಿ, ಸ್ಯಾನಿಟೈಸರ್‌ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು. ಆರತಕ್ಷತೆ ನಡೆಯುತ್ತಿದ್ದ ವೇಳೆ ಸಭಾಂಗಣಕ್ಕೆ ಪೊಲೀಸರು ಭೇಟಿ ನೀಡಿದರು. ಈ ವೇಳೆ 50ಕ್ಕಿಂತ ಹೆಚ್ಚು ಜನರು ಸೇರಿದ್ದ ಕಾರಣ, ನಿಗದಿತ ಜನರನ್ನು ಹೊರತುಪಡಿಸಿ ಉಳಿದವರೆಲ್ಲ ಹೊರ ಹೋಗುವಂತೆ ಧ್ವನಿವರ್ಧಕದಲ್ಲಿ ಸೂಚಿಸಿದರು. ಇದರಿಂದಾಗಿ ಗೊಂದಲಕ್ಕೊಳಗಾದ ಸಂಬಂಧಿಕರು, ಸ್ನೇಹಿತರು ಹೊರಕ್ಕೆ ತೆರಳಿದರು.

ಮದುವೆಗೆ ಆಗಮಿಸಿದ್ದವರಲ್ಲಿ ಕೆಲವರು ಉಡುಗೊರೆಯೂ ನೀಡದೇ, ಊಟವನ್ನೂ ಮಾಡದೆ ಹೊರಹೋದರು. ಬಳಿಕ ಸಾಮಾಜಿಕ ಅಂತರ ಕಾಯ್ದುಕೊಂಡು ಉಡುಗೊರೆ ನೀಡಲು ಹಾಗೂ ಊಟಕ್ಕೆ ಅವಕಾಶ ನೀಡಲಾಯಿತು. ಮದುವೆಗೆ ಬಂದವರಿಗೂ ಹೊರ ಹೋಗುವಂತೆ ಹೇಳಲು ಆಗದ ಕಾರಣ ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್‌ ಧರಿಸುವಿಕೆ ಹಾಗೂ ಸ್ಯಾನಿಟೈಸರ್‌ ಬಳಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ ದಿಢೀರ್‌ ಎಂದು ಪೊಲೀಸರು ದಾಳಿ ನಡೆಸಿದ್ದು ಬೇಸರವೆನಿಸಿತು ಎಂದು ಕುಟುಂಬಸ್ಥರು ಹೇಳಿದರು.

click me!