ಬೈ ಎಲೆಕ್ಷನ್: ಸಿಎಂ ತವರಲ್ಲಿ ನೀತಿಸಂಹಿತೆ ಉಲ್ಲಂಘನೆ

By Kannadaprabha NewsFirst Published Dec 6, 2019, 9:04 AM IST
Highlights

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ತವರೂರು ಬೂಕನಕೆರೆಯಲ್ಲೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಗ್ರಾಮದ ಶಾಲೆಯ ಕಟ್ಟಡದಲ್ಲಿ ಯಡಿಯೂರಪ್ಪ ಅವರು ನೀಡಿರುವ ಅನುದಾನ ಕುರಿತು ಬರೆದಿರುವ ವಿವರವನ್ನು ತೆರವುಗೊಳಿಸಿಲ್ಲ. ಚುನಾವಣೆ ಘೋಷಣೆಯಾದ ನಂತರ ಜಿಲ್ಲಾದ್ಯಂತ ಒಂದು ತಿಂಗಳು ಕಾಲ ನೀತಿ ಸಂಹಿತೆ ಜಾರಿಯಲ್ಲಿತ್ತು.

ಮಂಡ್ಯ(ಡಿ.06): ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಡಿ.05ರಂದು ಉಪಚುನಾವಣೆ ನಡೆದಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ನವರ ತವರೂರು ಬೂಕನಕೆರೆಯಲ್ಲಿ ಅಧಿಕಾರಿಗಳು ನೀತಿ ಸಂಹಿತೆ ಉಲ್ಲಂಘನೆಯಾಗಿದೆ.

ಗ್ರಾಮದ ಶಾಲೆಯ ಕಟ್ಟಡದಲ್ಲಿ ಯಡಿಯೂರಪ್ಪ ಅವರು ನೀಡಿರುವ ಅನುದಾನ ಕುರಿತು ಬರೆದಿರುವ ವಿವರವನ್ನು ತೆರವುಗೊಳಿಸಿಲ್ಲ. ಚುನಾವಣೆ ಘೋಷಣೆಯಾದ ನಂತರ ಜಿಲ್ಲಾದ್ಯಂತ ಒಂದು ತಿಂಗಳು ಕಾಲ ನೀತಿ ಸಂಹಿತೆ ಜಾರಿಯಲ್ಲಿತ್ತು.

ಮಂಡ್ಯ: ಸಿಎಂ ತವರಲ್ಲಿ ಮತದಾನ ಹೇಗಿತ್ತು..?

ಆದರೆ, ಸಿಎಂ ಅನುದಾನ ನೀಡಿರುವ ಕುರಿತು ಬರೆದಿರುವ ವಿವರವನ್ನು ತೆರವುಗೊಳಿಸುವ ಗೋಜಿಗೆ ಚುನಾವಣಾ ಅಧಿಕಾರಿಗಳು ಮುಂದಾಗಿಲ್ಲ. 2008ರಲ್ಲಿ ಮುಖ್ಯಮಂತ್ರಿ ಆಗಿದ್ದ ವೇಳೆ ತಮ್ಮ ಗ್ರಾಮದ ಸರ್ಕಾರಿ ಶಾಲೆಗೆ ನೀಡಿದ್ದ ಅನುದಾನದ ವಿವರವನ್ನು ತೆರವುಗೊಳಿಸದೆ ಅದೇ ಶಾಲೆಯ ಕಟ್ಟಡದಲ್ಲಿ ಅಧಿಕಾರಿಗಳು ಇಂದು ಮತದಾನ ಕಾರ್ಯ ನಡೆಸುತ್ತಿದ್ದಾರೆ ಎಂದು ವಿಪಕ್ಷ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.

ಕೆ.ಆರ್. ಪೇಟೆ ಬೈಎಲೆಕ್ಷನ್: ಯಾರ್ಯಾರು ಎಲ್ಲೆಲ್ಲಿ ಓಟ್ ಮಾಡಿದ್ರು..

click me!