ಬ್ರ್ಯಾಂಡ್ ಬೆಂಗಳೂರಿನ ಮೊದಲ ಸ್ಮಾರ್ಟ್ ಪರಿಕಲ್ಪನೆ ಅಡಿಯಲ್ಲಿ ಸಾರ್ವಜನಿಕರು ರಸ್ತೆ ಗುಂಡಿಗಳನ್ನು ಗುರುತಿಸಿ ಬಿಬಿಎಂಪಿಗೆ ಕಳಿಸಲು ಅನುಕೂಲ ಆಗುವಂತೆ 'ರಸ್ತೆ ಗುಂಡಿ ಗಮನ' ಆ್ಯಪ್ ಬಿಡುಗಡೆ ಮಾಡಲಾಗಿದೆ.
ಬೆಂಗಳೂರು (ಜು.28): ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೆಂಗಳೂರು ನಗರವನ್ನು ಬ್ರ್ಯಾಂಡ್ ಬೆಂಗಳೂರು ಮಾಡುವ ಗುರಿಯನ್ನು ಹೊಂದಲಾಗಿದೆ. ಈ ನಿಟ್ಟಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಅನುಕೂಲ ಆಗುವಂತೆ ಸಾರ್ವಜನಿಕರೇ ರಸ್ತೆಗುಂಡಿಗಳನ್ನು ಗುರುತಿಸಿ ಫೋಟೋಗಳನ್ನು ಕಳಿಸುವುಕ್ಕೆ 'ರಸ್ತೆ ಗುಂಡಿ ಗಮನ' (Fix Pothole) ಆ್ಯಪ್ ಅಭಿವೃದ್ಧಿ ಪಡಿಸಿ ಬಿಡುಗಡೆ ಮಾಡಲಾಗಿದೆ.
ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಬೆಂಗಳೂರು ನಗರವು ಭಾರತದಲ್ಲಿಯೇ ವಾಸಯೋಗ್ಯ ನಗರವೆಂಬ ಖ್ಯಾತಿಯನ್ನು ಪಡೆದಿದೆ. ಈ ಹಿನ್ನೆಲೆಯಲ್ಲಿ ಜನಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದ್ದು, ವಾಹನಗಳ ಸಂಚಾರವೂ ತೀವ್ರವಾಗಿದೆ. ವಾಹನ ಸಂಚಾರಕ್ಕೆ ಉತ್ತಮ ಗುಣಮಟ್ಟದ, ಗುಂಡಿಮುಕ್ತರ ರಸ್ತೆಯನ್ನು ಒಡಗಿಸುವುದು ಸ್ಥಳೀಯ ಆಡಳಿತ ಸಂಸ್ಥೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಸರ್ಕಾರದ ಜವಾಬ್ದಾರಿ ಆಗಿದೆ. ಆದರೆ, ಪ್ರತಿವರ್ಷ ಮಳೆಗಾಲದಲ್ಲಿ ರಸ್ತೆ ಗುಂಡಿಗಳಿಂದ ಜನರು ಬಿದ್ದು ಗಾಯಗೊಳ್ಳುವುದು ಹಾಗೂ ಸಾವು ಪ್ರಕರಣಗಳೂ ಸಂಭವಿಸುತ್ತಿವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ವರ್ಷ ಮಳೆಗಾಲ ಆರಂಭವಾಗಿ ಒಂದು ತಿಂಗಳ ನಂತರವೇ ರಸ್ತೆಗುಂಡಿಗಳನ್ನು ಮುಚ್ಚಲು ಅನುಕೂಲ ಆಗುವಂತೆ ಬಿಬಿಎಂಪಿ ವತಿಯಿಂದ 'ರಸ್ತೆ ಗುಂಡಿ ಗಮನ' (Fix Pothole) ಎಂಬ ಅಪ್ಲಿಕೇಷನ್ ಅಭಿವೃದ್ಧಿಪಡಿಸಿ ಸಾರ್ವಜಕನಿಕರ ಬಳಕೆಗೆ ಮುಕ್ತಗೊಳಿಸಲಾಗಿದೆ.
ರಾಜ್ಯದಲ್ಲಿ ಬಿಟ್ಟೂ ಬಿಡದೆ ಸುರಿಯುತ್ತಿರುವ ಮುಂಗಾರು ಮಳೆ: ಹವಾಮಾನ ಇಲಾಖೆಯಿಂದ ಅಲರ್ಟ್ ಘೋಷಣೆ
ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರಿ ನಿನ್ನೆ 'ರಸ್ತೆ ಗುಂಡಿ ಗಮನ' (Fix Pothole) ಎಂಬ ಆ್ಯಪ್ ಅನಾವರಣ ಮಾಡಿದ್ದಾರೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ರಸ್ತೆ ಗುಂಡಿ ಗಮನ ಆ್ಯಪ್ ಲಭ್ಯವಿದೆ. ಜನರು ರಸ್ತೆ ಗುಂಡಿ ಗುರುತಿಸುವುದಕ್ಕೆ ಹಾಗೂ ಅದನ್ನು ಜಿಪಿಎಸ್ ಆಧಾರದ ಮೇಲೆ ನಿಖರವಾಗಿ ಪತ್ತೆ ಮಾಡಲು ಈ ಅಪ್ಲಿಕೇಷನ್ ಸಹಾಯಕವಾಗಿದೆ. ಈಗ ರಸ್ತೆ ಗುಂಡಿ ಗಮನ ಅಪ್ಲಿಕೇಶನ್ ಜನರ ಗಮನ ಸೆಳೆಯುತ್ತಿದೆ.
ಪ್ರತಿಯೊಂದು ರಸ್ತೆಯ ಗುಂಡಿಯನ್ನು ಪತ್ತೆ ಹಚ್ಚಲು ಈ ಆ್ಯಪ್ ಸಹಾಯಕವಾಗುತ್ತದೆ. ದೂರುದಾರ ದೂರು ಕೊಡಬೇಕಾದ ರಸ್ತೆಯ ಲೊಕೇಶನ್ ಟ್ಯಾಗ್ ಮಾಡಲು ಅವಕಾಶ ನೀಡಲಾಗಿದೆ. ಹೊಸ ದೂರನ್ನು ಸಲ್ಲಿಸಲು ಹಳೆಯ ದೂರಿನ ಅಪ್ಡೇಟ್ ನೋಡಲು ಅನೂಕೂಲವಾಗಲಿದೆ. ಮೊಬೈಲ್ ನಂಬರ್ ಬಳಕೆ ಮಾಡಿ ರಿಜಿಸ್ಟರ್ ಮಾಡಿ ಕಪ್ಲೇಂಟ್ ಕೊಡಲು ಸಹಕಾರಿ ಆಗಿದೆ. ಸಿಲಿಕಾನ್ ಸಿಟಿಯ ಯಾವುದೇ ಏರಿಯಾದ ಯಾವುದೇ ರಸ್ತೆ ಗುಂಡಿ ಬಗ್ಗೆ ದೂರು ಕೊಡಬಹುದು. ಸಂಬಂಧಪಟ್ಟ ಅಧಿಕಾರಿಗಳು ವಿಶ್ಲೇಷಣೆ ಮಾಡಿ ಗುಂಡಿ ದುರಸ್ತಿ ಕೆಲಸ ಮಾಡಲಿದ್ದಾರೆ.
ವಿಜಯೇಂದ್ರ ಒಬ್ಬ ಅಪ್ರಬುದ್ಧ ರಾಜಕಾರಣಿ, ಅವರ ಹಗರಣ ಶೀಘ್ರ ಬಹಿರಂಗ: ಡಿಕೆಶಿ ಘೋಷಣೆ
ಇನ್ನು ಬಿಬಿಎಂಪಿ ವತಿಯಿಂದ ಈಗಾಗಲೇ ಅಸ್ತಿತ್ವದಲ್ಲಿದ್ದ 'ಫಿಕ್ಸ್ ಮೈ ಸ್ಟ್ರೀಟ್' (Fix my street) ಆ್ಯಪ್ ಅಂತೆಯೇ ಇದು ಆಗದಿರಲಿ ಅನ್ನೋದೇ ಜನರ ಆಶಯವಾಗಿದೆ. ರಸ್ತೆ ಗುಂಡಿ ಮುಚ್ಚಲು ಮೂರು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾಗಿದ್ದ ಆ್ಯಪ್ ಕೇವಲ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಬಳಕೆಗೆ ಮಾತ್ರ ಮುಕ್ತಗೊಳಿಸಲಾಗಿತ್ತು. ನಂತರ ಅದನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಹೇಳುತ್ತಾ.. ಹೇಳುತ್ತಾ.., ಮಳೆಗಾಲವನ್ನೇ ಮುಗಿಸಿತ್ತು. ಈಗ ಗುಂಡಿ ಗಮನ ಎಂಬ ಅಪ್ಲಿಕೇಷನ್ ಅಭಿವೃದ್ಧಿಪಡಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿದೆ. ಆದರೆ, ಈಗ ನಾಮ್ ಕೆ ವಾಸ್ತೆಗೆ ಸೀಮಿತವಾಗದೇ, ಜನರ ಸಮಸ್ಯೆಗೆ ಧ್ವನಿಯಾಗಲಿ ಎನ್ನುವುದು ಜನರ ಆಶಯವಾಗಿದೆ.