ಚಾಮರಾಜನಗರದಲ್ಲಿ ಅನಿಷ್ಟ ಪದ್ಧತಿ ಇನ್ನೂ ಜೀವಂತ: ಎರಡು ಕುಟುಂಬಕ್ಕೆ ಬಹಿಷ್ಕಾರ

By Girish Goudar  |  First Published Dec 12, 2024, 5:46 PM IST

ನಾಗರಿಕತೆ ಎಷ್ಟೇ ಮುಂದುವರಿದಿದ್ದರೂ ಕೆಲವು ಅನಿಷ್ಠ  ಪದ್ದತಿಗಳು ಇನ್ನೂ ಜಾರಿಯಲ್ಲಿವೆ. ಸಾಮಾಜಿಕ ಬಹಿಷ್ಕಾರ, ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ದತಿಯಂತಹ ಸಾಮಾಜಿಕ ಪಿಡುಗುಗಳು ಇನ್ನೂ ಜೀವಂತ ಇವೆ. ಅದರಲ್ಲೂ ಗಡಿ ಜಿಲ್ಲೆ ಚಾಮರಾಜನಗರದಲ್ಲಂತೂ ಸಾಮಾಜಿಕ ಬಹಿಷ್ಕಾರದಿಂದ ಎಷ್ಟೋ ಕುಟುಂಬಗಳು ನಲುಗಿ ಹೋಗಿವೆ. 


ವರದಿ- ಪುಟ್ಟರಾಜು.ಆರ್. ಸಿ, ಏಷಿಯಾನೆಟ್ ಸುವರ್ಣ ನ್ಯೂಸ್,  ಚಾಮರಾಜನಗರ

ಚಾಮರಾಜನಗರ(ಡಿ.12): ಆಕೆ 5 ತಿಂಗಳ ಗರ್ಭಿಣಿ, ತವರು ಮನೆಗೆ ಹೋಗುವಂತಿಲ್ಲ, ತಾಯಿಯ ಮುಖವನ್ನೂ ನೋಡುವಂತಿಲ್ಲ. ಇದನ್ನು ಮೀರಿದರೆ ತವರು ಮನೆಯುವರಿಗೂ ಸಾಮಾಜಿಕ ಬಹಿಷ್ಕಾರ. ಮೊಬೈಲ್‌ನಲ್ಲೂ ಮಾತನಾಡುವಂತಿಲ್ಲ, ಮಾತನಾಡಿದರೆ ದಂಡ. ಯಾಕೆ ಹೀಗೆ, ಅಂತೀರಾ ಈ ಸ್ಟೋರಿ ನೋಡಿ.

Tap to resize

Latest Videos

ನಾಗರಿಕತೆ ಎಷ್ಟೇ ಮುಂದುವರಿದಿದ್ದರೂ ಕೆಲವು ಅನಿಷ್ಠ  ಪದ್ದತಿಗಳು ಇನ್ನೂ ಜಾರಿಯಲ್ಲಿವೆ. ಸಾಮಾಜಿಕ ಬಹಿಷ್ಕಾರ, ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ದತಿಯಂತಹ ಸಾಮಾಜಿಕ ಪಿಡುಗುಗಳು ಇನ್ನೂ ಜೀವಂತ ಇವೆ. ಅದರಲ್ಲೂ ಗಡಿ ಜಿಲ್ಲೆ ಚಾಮರಾಜನಗರದಲ್ಲಂತೂ ಸಾಮಾಜಿಕ ಬಹಿಷ್ಕಾರದಿಂದ ಎಷ್ಟೋ ಕುಟುಂಬಗಳು ನಲುಗಿ ಹೋಗಿವೆ. 

ಮಾಜಿ ಶಾಸಕ ಜಯಣ್ಣ ನಿಧನ: ಆಪ್ತ ಗೆಳೆಯನಿಗೆ ಅಂತಿಮ ನಮನ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

undefined

ಆಯಾ ಸಮುದಾಯದವರು ವಿಧಿಸುವ ಕಟ್ಟುಪಾಡುಗಳಿಂದ ಮಾನಸಿಕ ಹಾಗು ದೈಹಿಕ ಹಿಂಸೆ ಅನುಭವಿಸುತ್ತಿವೆ.  ಇಂತಹುದ್ದೇ  ಘಟನೆ ಚಾಮರಾಜನಗರ ತಾಲೂಕಿನ ಲಿಂಗರಾಜಪುರದಲ್ಲಿ ನಡೆದಿದ್ದು ಎರಡು ಉಪ್ಪಾರ ಕುಟುಂಬಗಳಿಗೆ ಸ್ವಜಾತಿಯವರೇ ಸಾಮಾಜಿಕ ಬಹಿಷ್ಕಾರ ಹೇರಿದ್ದಾರೆ. ಕಳೆದ ಒಂದು ವರ್ಷದಿಂದ ಈ ಎರಡು  ಕುಟುಂಬಗಳು  ಅವಮಾನ ಹಿಂಸೆಗಳಿಂದ ದಿನ ದೂಡುತ್ತಿದ್ದು ಇವರ ಬದುಕು ಯಾತನಾಮಯವಾಗಿದೆ.  

ಗ್ರಾಮದ ಗೋವಿಂದಶೆಟ್ಟಿ ಪಕ್ಕದ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿದ್ದಾರೆಂದು ಆರೋಪಿಸಿ ಮನೆಯನ್ನು ನೆಲಸಮ ಮಾಡುವಂತೆ ಗ್ರಾಮಸ್ಥರು ತಾಕೀತು ಮಾಡಿದ್ದರು. ಆದರೆ ಇದಕ್ಕೆ ಗೋವಿಂದಶೆಟ್ಟಿ ಒಪ್ಪದಿದ್ದಾಗ  ಅವರಿಗೆ ದಂಡ ವಿಧಿಸಿ ಅವರ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹೇರಲಾಗಿದೆ.  ಬಹಿಷ್ಕಾರ ಎಷ್ಟು ಕ್ರೂರವಾಗಿದೆ ಅಂದರೆ ಈ ಮನೆಯ ಸೊಸೆ ಗರ್ಭಣಿಯಾಗಿದ್ದು ಇದೇ ಗ್ರಾಮದ ಈಕೆ ತನ್ನ ತವರು ಮನೆಗ ಹೋಗವಂತಿಲ್ಲವಂತೆ. ಹೋದರೆ ತವರು ಮನೆಯುವರಿಗೆ ಸಾಮಾಜಿಕ ಬಹಿಷ್ಕಾರ ಹೇರುವುದಾಗಿ ಗ್ರಾಮದ ಯಜಮಾನರು ಎಚ್ಚರಿಸಿದ್ದಾರಂತೆ. ತಾಯಿಯೊಡನೆ ಮೊಬೈಲ್‌ನಲ್ಲೂ ಮಾತನಾಡುವಂತಿಲ್ಲ. ಮಾತನಾಡಿದರೆ ತಾಯಿಗು ದಂಡ, ಮಗಳಿಗೂ ದಂಡ ವಿಧಿಸುತ್ತಾರಂತೆ. ಗರ್ಭಿಣಿಯಾಗಿರುವ ಸಂದರ್ಭದಲ್ಲಿ ತನ್ನ ತವರು ಮನೆಗೆ ಹೋಗಲಾಗದೆ, ತಾಯಿಯ ಜೊತೆ ಮಾತನಾಡಲು ಆಗದೆ ಈ ಹೆಣ್ಣು ಮಗಳು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾಳೆ

ನಮ್ಮನ್ನು ಯಾರೂ ಮಾತನಾಡಿಸುವಂತಿಲ್ಲ ನಮಗೆ ಅಂಗಡಿಗಳಲ್ಲಿ ಸಾಮಾನು ಕೊಡೋದಿಲ್ಲ, ನಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಆಟವಾಡಲು ಬಿಡೋದಿಲ್ಲ, ಮದುವೆ ಮುಂಜಿಗೆ ನಮ್ಮನ್ನು ಕರೆಯುತ್ತಿಲ್ಲ, ದೇವಸ್ಥಾನದಲ್ಲಿ ನಮ್ಮ ಪೂಜೆ ಸ್ವೀಕರಿಸೋದಿಲ್ಲ ಮನೆಗಳಲ್ಲಿ ನಡೆಯುವ ಶುಭ ಕಾರ್ಯಗಳಿಗೆ ಯಾರೂ ಬರೋದಿಲ್ಲ, ಯಾರದರು ಸತ್ತರೆ ಅವರ ಅಂತಿಮ ದರ್ಶನ ಮಾಡುವಂತಿಲ್ಲ, ನಮ್ಮನ್ನು ಮಾತನಾಡಿಸಿದವರಿಗೂ  ದಂಡ ಹೀಗೆ ಹತ್ತಾರು ಕಟ್ಟುಪಾಡುಗಳೊಂದಿಗೆ ಬಹಿಷ್ಕಾರಿಸಿದ್ದಾರೆ ಗೋವಿಂದಶೆಟ್ಟಿ ಕುಟುಂಬದ ಕಣ್ಣೀರಿಡುತ್ತಿದೆ.

ಗಂಡಸರಿಗೂ ಫ್ರೀ ಟಿಕೆಟ್ ಕೊಟ್ರೆ ಕೆಎಸ್‌ಆರ್‌ಟಿಸಿ ಮುಚ್ಚಬೇಕಾಗುತ್ತೆ: ಸಿಎಂ ಸಿದ್ದರಾಮಯ್ಯ

ಗೋವಿಂದ ಶೆಟ್ಟಿಯದು ಒಂದು ಕಥೆಯಾದರೆ ಇದೇ ಗ್ರಾಮದ ಸಿದ್ದರಾಜು ಅವರದ್ದು ಇನ್ನೊಂದು ಕಥೆ. ಸಿದ್ದರಾಜು ಅವರ ಮಗಳು ಅಂತರ್ಜಾತಿ ವಿವಾಹವಾಗಿದ್ದಾರೆ ಎಂಬ ಒಂದೇ ಕಾರಣಕ್ಕೆ ಸಿದ್ದರಾಜು  ಕುಟುಂಬಕ್ಕು ಬಹಿಷ್ಕಾರ ಹಾಕಲಾಗಿದೆ. ವಿವಾಹದ ವಿಷಯವನ್ನು ಮುಚ್ಚಿಟ್ಟಿದ್ದೀರಿ ಎಂದು 65 ಸಾವಿರ ದಂಡ ವಿಧಿಸಿದ್ದಾರೆ. ಮಗಳನ್ನು ನೋಡಲು ಇವರು ಹೋಗುವಂತಿಲ್ಲ ಆಕೆಯು ಗ್ರಾಮಕ್ಕೆ ಬರುವಂತಿಲ್ಲ ಎಂದು ಯಜನಾನರು ತಾಕೀತು ಮಾಡಿದ್ದಾರೆ..

ಗ್ರಾಮದಲ್ಲಿ ನಾವು ಇತರರೊಂದಿಗೆ ಸಹಬಾಳ್ವೆ ನಡೆಸಲು ಬಿಡುತ್ತಿಲ್ಲ ಎಂದು ಕಣ್ಣೀರಿಡುತ್ತಿರುವ ಈ ಕುಟುಂಬಗಳು ದಯಾಮರಣ ಕೋರಿ ಜಿಲ್ಲಾಧಿಕಾರಿಗಳಿಗು ದೂರು ಸಲ್ಲಿಸಿದ್ದವು. ಆದರೆ ಈವರೆಗು ಇವರಿಗೆ ನ್ಯಾಯ ಸಿಕ್ಕಿಲ್ಲ. ಕಳೆದ ಒಂದು ವರ್ಷದಿಂದ ಇವರು  ಮಾನಸಿಕ ಹಿಂಸೆ, ಅವಮಾನಗಳಿಂದಲೇ ಬದುಕು ದೂಡುವಂತಾಗಿದ್ದು, ನೆಮ್ಮದಿಯಿಂದ ವಾಸಿಸಲು ಸಾಧ್ಯವಾಗದೆ ಗ್ರಾಮ ತೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

click me!