ಒಬ್ಬರ ಕಷ್ಟಕ್ಕೆ ಮತ್ತೊಬ್ಬರಾದ್ರೆ ಅದನ್ನ ಮನುಷ್ಯತ್ವ ಅಂತಾರೆ. ಆದ್ರೆ, ಬೇರೆಯವರ ಕಷ್ಟಕ್ಕೆ ಸ್ಪಂದಿಸಿದ್ದಕ್ಕೆ ಅವರಿಗೆ ಬಹಿಷ್ಕಾರ ಹಾಕ್ತಾರೆ ಅಂದ್ರೆ ಅದು ಅಹಂಕರವಾಲ್ದೆ ಮತ್ತೇನು ಅಲ್ಲ. ಆ ಮನೆಯವರ ಜೊತೆ ಯಾರೂ ಮಾತನಾಡುವಂತಿಲ್ಲ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಏ.03): ಒಬ್ಬರ ಕಷ್ಟಕ್ಕೆ ಮತ್ತೊಬ್ಬರಾದ್ರೆ ಅದನ್ನ ಮನುಷ್ಯತ್ವ ಅಂತಾರೆ. ಆದ್ರೆ, ಬೇರೆಯವರ ಕಷ್ಟಕ್ಕೆ ಸ್ಪಂದಿಸಿದ್ದಕ್ಕೆ ಅವರಿಗೆ ಬಹಿಷ್ಕಾರ ಹಾಕ್ತಾರೆ ಅಂದ್ರೆ ಅದು ಅಹಂಕರವಾಲ್ದೆ ಮತ್ತೇನು ಅಲ್ಲ. ಆ ಮನೆಯವರ ಜೊತೆ ಯಾರೂ ಮಾತನಾಡುವಂತಿಲ್ಲ. ಅವರ ಮನೆಗೆ ಯಾರೂ ಹೋಗುವಂತಿಲ್ಲ. ಅವರ ತೋಟಕ್ಕೆ ಕೆಲಸಕ್ಕೂ ಹೋಗುವಂತಿಲ್ಲ. ಅವ್ರ ಮಗನ ಮದುವೆಗೆ ಯಾರೂ ಹೋಗಿಲ್ಲ. ಯಾರಾದ್ರು ಮಾತನಾಡ್ಸೋದು-ಮನೆಗೆ-ಕೆಲಸಕ್ಕೆ ಹೋಗೋದು ಕಂಡು ಬಂದ್ರೆ 5000 ದಂಡ.ಹೌದು ಇಂತಹ ಪರಿಸ್ಥಿತಿ ಎದುರಾಗಿರುವುದು ಚಿಕ್ಕಮಗಳೂರು ತಾಲೂಕಿನ ಮುಳ್ಳುವಾರೆ ಗ್ರಾಮದಲ್ಲಿ. ಈ ಗ್ರಾಮದ ಭೈರಪ್ಪ ಎನ್ನುವುರು ನ್ಯಾಯಕ್ಕಾಗಿ ಮನವಿ ಪತ್ರ ಇಟ್ಕೊಂಡು ಜಿಲ್ಲಾಧಿಕಾರಿ ಕಚೇರಿ ಅಲೆಯುತ್ತಿದ್ದಾರೆ.
ಬಹಿಷ್ಕಾರದ ಜೊತೆಗೆ ದಂಡ : ಚಿಕ್ಕಮಗಳೂರು ತಾಲೂಕಿನ ಮುಳ್ಳುವಾರೆ ಗ್ರಾಮಸ್ಥ ಭೈರಪ್ಪ . ಮುಳ್ಳುವಾರೆ ಗ್ರಾಮದಲ್ಲಿ ಗ್ರಾಮಸ್ಥರೇ ಇವರನ್ನ ಮುಖಂಡರನ್ನಾಗಿಸಿದ್ದಾರೆ. ಮುಳ್ಳುವಾರೆ-ಕೆಸರಿಕೆ ಗ್ರಾಮ ಅಕ್ಕಪಕ್ಕದ ಗ್ರಾಮಗಳು. ಇತ್ತೀಚೆಗೆ ಕೆಸರಿಕೆ ಗ್ರಾಮದಲ್ಲಿ ಒಂದೇ ದಿನ ಮೂರು ಮದುವೆಯಾಗಿದ್ದವು. ಅಂದು ಅಡುಗೆಗೆ ಪಾತ್ರೆ ಸಮಸ್ಯೆಯಾಗಿದೆ ಎಂದು ಕೆಸರಿಕೆ ಗ್ರಾಮದವರು ಬಂದು ಪಾತ್ರೆ ಕೇಳಿದ್ದರು. ಭೈರಪ್ಪ ಕೊಟ್ಟಿದ್ದರು. ಊರೊಟ್ಟಿನ (ಗ್ರಾಮದ ಕಾರ್ಯಕ್ರಮಗಳಿಗೆ ಹಳ್ಳಿಗರ ಹಣ ಹಾಕಿ ತಂದಿರೋ ಪಾತ್ರೆಗಳು ಅಥವ ದಾನಿಗಳು ಕೊಡಿಸಿರೋ ಪಾತ್ರೆಗಳು) ಪಾತ್ರೆಯ್ನನ ಪಕ್ಕದ ಹಳ್ಳಿಗೆ ಕೊಟ್ಟಿದ್ದೇ ಈಗ ಇವರನ್ನ ಬಹಿಷ್ಕಾರ ಹಾಕೋದಕ್ಕೆ ಕಾರಣವಾಗಿದೆ. ಭೈರಪ್ಪ ಹೀಗೆ ಪಾತ್ರೆಗಳನ್ನ ಕೊಟ್ಟಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಕೊಟಿದ್ದರು. ಈಗ ಮಾತ್ರ ಬಹಿಷ್ಕಾರ ಹಾಕಿದ್ದಾರೆ. 5000 ಸಾವಿರ ದಂಡ ಹಾಕಿ, ಭೈರಪ್ಪನವರ ಮನೆಗೆ ಯಾರೂ ಹೋಗದಂತೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಪಕ್ಕದ ಹಳ್ಳಿಗೆ ಪಾತ್ರೆ ಕೊಟ್ಟಿದ್ದೇ ತಪ್ಪಾ ಎಂದು ಭೈರಪ್ಪ ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಅಲೆಯುತ್ತಿದ್ದಾರೆ.
ಡಿಸಿ , ಪೊಲೀಸರಿಗೆ ಮನವಿ ಕೊಟ್ಟರೂ ಪ್ರಯೋಜನವಿಲ್ಲ: ಪಕ್ಕದ ಊರಿಗೆ ಪಾತ್ರೆ ನೀಡಿದ್ದಕ್ಕೆ ಇವ್ರಿಗೆ 5 ಸಾವಿರ ದಂಡ ಹಾಕಿರೋ ಗ್ರಾಮಸ್ಥರು ಇವರನ್ನ ಇವರ ಮನೆಯವರನ್ನ ಯಾರಾದ್ರು ಮಾತನಾಡಿಸಿದರೆ ಅವರಿಗೂ 5 ಸಾವಿರ ದಂಡ ವಿಧಿಸುವ ಎಚ್ಚರಿಕೆ ನೀಡಿದ್ದಾರೆ. ಇವ್ರ ಮನೆಗೆ-ಮನೆಯ ಕಾರ್ಯಕ್ರಮಕ್ಕೆ ಯಾರೂ ಹೋಗುವಂತಿಲ್ಲ. ಇವರನ್ನ ಮಾತನಾಡಿಸುವಂತಿಲ್ಲ. ಇವರ ತೋಟಕ್ಕೆ ಕೆಲಸಕ್ಕೂ ಹೋಗುವಂತಿಲ್ಲ. ಹೋದರೆ 5 ಸಾವಿರ ದಂಡ. ಇತ್ತೀಚೆಗೆ ಇವರ ಮಗನ ಮದುವೆಯಾಗಿದ್ದು ಆ ಮದುವೆಗೂ ಊರಿನ ಜನ ಹೋಗಿಲ್ಲ ಎಂದು ನೊಂದಿದ್ದಾರೆ. ಈ ಹಿಂದೆಯೂ ಪಾತ್ರೆ ನೀಡಿದ್ದ ಅಂದು ತಪ್ಪಾಗಿರಲಿಲ್ಲ. ಆದರೆ, ಈಗ ಪಾತ್ರೆ ನೀಡಿರುವುದು ತಪ್ಪಾಗಿ ಹರೀಶ್, ಪುಟ್ಟಸ್ವಾಮಿ, ಮಂಜುನಾಥ್, ಸತೀಶ್, ಗಿರೀಶ್ ಹಾಗೂ ಪುಟ್ಟಸ್ವಾಮಿ ಎಂಬ ಆರು ಜನ ದಂಡ ವಿಧಿಸಿ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಬೈಕ್‍ಗೆ ಪೊಲೀಸ್ ಜೀಪ್ ಡಿಕ್ಕಿ: ಸ್ಥಳದಲ್ಲಿಯೇ ವ್ಯಕ್ತಿ ಸಾವು, ಚಾಲಕ ಸಸ್ಪೆಂಡ್!
ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಆಲ್ದೂರು ಪೊಲೀಸರಿಗೂ ದೂರು ನೀಡಿದ್ದಾರೆ. ಆದ್ರೆ, ಯಾವುದೇ ಕ್ರಮಕೈಗೊಂಡಿಲ್ಲ. ಎಸ್ಸಿ-ಎಸ್ಟಿ ದೌರ್ಜನ್ಯ ಸಮಿತಿ ಸಭೆ ದಿನ ಪತ್ನಿಗೆ ಹಾರ್ಟ್ ಆಪರೇಷನ್ ಆಗಿದ್ದ ಕಾರಣ ಹೋಗಿಲ್ಲ. ನನಗೆ ನ್ಯಾಯ ಕೊಡಿಸಿ ಎಂದು ಬೇಡಿಕೊಳ್ತಿದ್ದಾರೆ. ಒಟ್ಟಾರೆ, ತಂತ್ರಜ್ಞಾನ ಚಂದ್ರನ ಮೇಲೂ ಕಾಲಿಡುವ ಮಟ್ಟಕ್ಕೆ ಬೆಳೆದಿದೆ. ಸುನಿತಾ ವಿಲಿಯಮ್ಸ್ 9 ತಿಂಗಳ ಬಳಿಕ ಬಾಹ್ಯಾಕಾಶದಿಂದ ಸುರಕ್ಷಿತವಾಗಿ ವಾಪಸ್ ಬಂದಿದ್ದಾರೆ. ಜಗತ್ತು ಬಿರುಗಾಳಿಯಂತೆ ಓಡ್ತಿದೆ. ಆದ್ರೆ, ನಮ್ ಜನ ಮಾತ್ರ ಪಾತ್ರೆ ಕೊಟ್ರು, ಸೌಟ್ ಕೊಟ್ರು, ಇಂಟರ್ಕ್ಯಾಸ್ಟ್ ಮ್ಯಾರೇಜ್ ಆದ್ರು, ದೇವಸ್ಥಾನಕ್ಕೆ ಜಾಗ ಕೊಟ್ರು ಅಂತ ಇನ್ನೂ ಅಜ್ಞಾನಿಗಳಂತೆ ಬಹಿಷ್ಕಾರ ಹಾಕ್ಕೊಂಡು ಕೂತಿದ್ದಾರೆ.