ಕಳೆದ ಎಂಟು ದಿನಗಳಿಂದ ಸಂಕೇಶ್ವರದಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕ ದೆಹಲಿ ರೈಲು ನಿಲ್ದಾಣದಲ್ಲಿ ಪತ್ತೆ
ಸಂಕೇಶ್ವರ(ನ.19): ಕಳೆದ ಎಂಟು ದಿನಗಳಿಂದ ಸಂಕೇಶ್ವರದಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕ ದೆಹಲಿ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ. ಸಂಕೇಶ್ವರ ನಗರದ ಅಂಕಲೆ ರೋಡ ಶೇಖಬಡೆ ಚಾಳಿಯ ರಹಿವಾಸಿ ಮುಸ್ತಾಕ್ ಮಕಾಂದರ ಇವರ ಮಗ 10ನೇ ತರಗತಿಯಲ್ಲಿ ಓದುತ್ತಿರುವ ಸುಫಿಯಾನ್ ಮುಸ್ತಾಕ್ ಮಕಾನದಾರ(16) ನ.9 ರಂದು ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ. ಬಳಿಕ ಮನೆಗೆ ಬಾರದ ಕಾರಣ ಪೋಷಕರು ಶಿಕ್ಷಕರನ್ನು ಸಂಪರ್ಕಿಸಿ ಶಾಲೆಗೆ ಬಂದಿಲ್ಲ ಎಂದು ತಿಳಿಸಿದ್ದಾರೆ.
ಬಳಿಕ ಎಲ್ಲ ಸಂಬಂಧಿಕರನ್ನು ವಿಚಾರಿಸಿದಾಗ ಇಲ್ಲಿ ಬಂದಿಲ್ಲ ಅಂತ ಮಾಹಿತಿ ನೀಡಿದ್ದರು. ಇದಾದ ಬಳಿಕ ಎಂಟು ದಿನಗಳಿಂದ ಎಲ್ಲೆಡೆ ಹುಡುಕಾಟ ನಡೆಸಲಾಗಿತ್ತು. ಆದರೆ ಎಲ್ಲೂ ಸಿಗದ ಕಾರಣ ಎಲ್ಲರೂ ಆತಂಕಗೊಂಡಿದ್ದರು. ಆದರೆ ಶುಕ್ರವಾರ ದಿಢೀರ್ ಸೂಫಿಯಾದ ಕರೆ ಬಂದಿದ್ದು, ತಾನು ದೆಹಲಿ ರೈಲು ನಿಲ್ದಾಣದಲ್ಲಿದ್ದೇನೆ ಎಂದು ಹೇಳಿದನು.
undefined
ಚಕ್ರವರ್ತಿ ಸೂಲಿಬೆಲೆ ಸುಳ್ಳಿನ ಯೂನಿವರ್ಸಿಟಿಯ ವಿಸಿ: ಸತೀಶ್ ಜಾರಕಿಹೊಳಿ ಕಿಡಿ
ತಂದೆ ಕೂಡಲೇ ಕರೋಶಿಯವರು ಹಾಗೂ ಈಗ ದೆಹಲಿಯಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇಮ್ರಾನ್ ಹೈದರ್ ಮುಲ್ಲಾ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಕೂಡಲೇ ರೈಲ್ವೆ ನಿಲ್ದಾಣದಲ್ಲಿರುವ ಕ್ಯಾಂಟೀನ್ ನಿರ್ವಾಹಕರನ್ನು ಸಂಪರ್ಕಿಸಿದ ಇಮ್ರಾನ್, ಈ ಬಗ್ಗೆ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿ ತಾನು ಬರುವವರೆಗೂ ಮಗುವನ್ನು ತನ್ನ ಬಳಿಯೇ ಇಟ್ಟುಕೊಳ್ಳುವಂತೆ ತಿಳಿಸಿದ್ದಾರೆ.
ಸ್ವಲ್ಪ ಸಮಯದ ನಂತರ, ಇಮ್ರಾನ್ ಮುಲ್ಲಾ ರೈಲು ನಿಲ್ದಾಣಕ್ಕೆ ಆಗಮಿಸಿ, ರೈಲ್ವೆ ಪೊಲೀಸರಿಗೆ ಅಗತ್ಯ ಮಾಹಿತಿ ಮತ್ತು ಕಸ್ಟಡಿ ಪತ್ರವನ್ನು ನೀಡಿದ ನಂತರ ಸುಫಿಯಾನ್‌ನನ್ನು ತನ್ನ ಮನೆಗೆ ಕರೆದೊಯ್ದರು. ಸೋಮವಾರ, ಸೂಫಿಯಾನ್ ಅವರ ಪೋಷÜಕರು ಮತ್ತು ಸಂಬಂಧಿಕರು ಮಾಜಿ ಸೈನಿಕ ಇಮ್ರಾನ್ ಮಂಜ್ರೇಕರ್ ದೆಹಲಿ ತಲುಪಿ ಇಮ್ರಾನ್ ಮುಲ್ಲಾ ಅವರ ಮನೆಗೆ ಪ್ರವೇಶಿಸಿದರು. ಎಂಟು ದಿನಗಳಿಂದ ನಾಪತ್ತೆಯಾಗಿದ್ದ ಸೂಫಿಯಾನನನ್ನು ಕಂಡು ಕಣ್ಣೀರಿಟ್ಟರು.
ರೈಲಿನಲ್ಲಿ ಅಜ್ಮೀರಗೆ ಹೋಗಿದ್ದೆ. ಅಜ್ಮೀರ್ ಖ್ವಾಜಾ ದರ್ಗಾಕ್ಕೆ ಭೇಟಿ ನೀಡಿದ ನಂತರ, ನಾನು ದೆಹಲಿ ರೈಲು ನಿಲ್ದಾಣಕ್ಕೆ ರೈಲಿನಲ್ಲಿ ಹಿಂತಿರುಗಿದೆ. ಈ ವೇಳೆ ಅಲ್ಲಿದ್ದ ವ್ಯಕ್ತಿಯೊಬ್ಬರ ಮೊಬೈಲ್ ತೆಗೆದುಕೊಂಡು ಮನೆಗೆ ಕರೆ ಮಾಡಿರುವುದಾಗಿ ಸುಫಿಯಾನ್ ಮುಸ್ತಾಕ್ ಮಕಾನದಾರ ತಿಳಿಸಿದ್ದಾನೆ.