ಚಲಿಸುತ್ತಿದ್ದಾಗಲೇ ಬಸ್ಸಿನ 2 ಚಕ್ರಗಳು ಏಕಕಾಲದಲ್ಲಿ ಕಳಚಿ ಬಿದ್ದ ಘಟನೆ ಚಿಕ್ಕಮಗಳೂರು ತಾಲೂಕಿನ ಮಾಗಡಿ ಸಮೀಪ ನಡೆದಿದೆ.
ಚಿಕ್ಕಮಗಳೂರು(ಆ.26): ಚಲಿಸುತ್ತಿದ್ದಾಗಲೇ ಸರ್ಕಾರಿ ಬಸ್ಸಿನ 2 ಚಕ್ರಗಳೂ ಕಳಚಿ ಬಿದ್ದ ಘಟನೆ ಚಿಕ್ಕಮಗಳೂರು ತಾಲೂಕಿನ ಮಾಗಡಿ ಸಮೀಪ ನಿನ್ನೆ(ಗುರುವಾರ) ನಡೆದಿದೆ. ಇತಿಹಾಸದಲ್ಲಿ ಬಸ್ಸಿನ ಚಕ್ರಗಳು ಈ ರೀತಿ ಉರುಳಿ ಹೋಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಬಹುಶಃ ಸರ್ಕಾರಿ ಬಸ್ಸಿನ ಇಂತಹ ಅಚಾತುರ್ಯ ಇದೇ ಮೊದಲು ಅನ್ಸುತ್ತೆ. ಚಲಿಸುತ್ತಿದ್ದಾಗಲೇ ಬಸ್ಸಿನ 2 ಚಕ್ರಗಳು ಏಕಕಾಲದಲ್ಲಿ ಕಳಚಿ ಬಿದ್ದಿವೆ. ವೀಲ್ ಬಾಡಿ ಸಮೇತ ಹಿಂದಿನ 2 ಚಕ್ರಗಳು ಉರುಳಿ ಹೋಗಿವೆ.
ಹಾಸನ ಡಿಪೋಗೆ ಸೇರಿದ ಬಸ್ ಇದಾಗಿದ್ದು ಬಸ್ ಸ್ಲೋ ಇದ್ದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ. ಬಸ್ಸಿನಲ್ಲಿದ್ದವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯಲ್ಲಿ ಸ್ವಲ್ಪ-ಹೆಚ್ಚು ಕಡಿಮೆಯಾಗಿದ್ದರೂ ಸರ್ಕಾರ ಭಾರೀ ಬೆಲೆ ತೆರಬೇಕಾಗಿತ್ತು.
ತುಮಕೂರಲ್ಲಿ ರಸ್ತೆ ಅಪಘಾತ: ರಾಜ್ಯ ಸರ್ಕಾರಕ್ಕೂ ಮುನ್ನ ಪ್ರಧಾನಿ ಮೋದಿ ಪರಿಹಾರ ಘೋಷಣೆ